ವಿಸರಣ ಕ್ರಿಯೆ ಬೇಕಾಗುವ ಸಲಕರಣೆಗಳು: ಸ್ವಚ್ಛವಾದ ಮೂರು ಗಾಜಿನ ಗ್ಲಾಸುಗಳು, ಬಿಸಿ ನೀರು, ಫ್ರಿಜ್‌ನಲ್ಲಿಟ್ಟ ನೀರು, ಕೋಣೆಯ ತಾಪಮಾನದಲ್ಲಿರುವ ನೀರು, ಪೆನ್ನಿಗೆ ಹಾಕುವ ಮಸಿ. ವಿಧಾನ: 1) ಒಂದೇ ಗಾತ್ರದ ಮೂರು ಸ್ವಚ್ಛವಾದ ಗಾಜಿನ ಗ್ಲಾಸುಗಳನ್ನು ತೆಗೆದುಕೊಂಡು, ಅವುಗಳಿಗೆ ‘ಅ’, ‘ಬ’ ಮತ್ತು ‘ಕ’ ಎಂದು ಹೆಸರಿಸಿರಿ. 2) ‘ಅ’ ಗ್ಲಾಸಿನಲ್ಲಿ ಫ್ರಿಜ್‌ನಲ್ಲಿಟ್ಟ ನೀರನ್ನು, ‘ಬ’ ದಲ್ಲಿ ಕೋಣೆಯ ತಾಪಮಾನದಲ್ಲಿಯ ನೀರನ್ನು ಮತ್ತು ‘ಕ’ ದಲ್ಲಿ ಬಿಸಿ ನೀರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿರಿ. 3) ಪ್ರತಿಯೊಂದು ಗ್ಲಾಸಿಗೆ ಒಂದೆರಡು ಹನಿ ಪೆನ್ನಿಗೆ ಹಾಕುವ ಮಸಿಯನ್ನು ಹಾಕಿ ವೀಕ್ಷಿಸಿರಿ. (ಪೊಟ್ಯಾಸಿಯಮ್ ಪರಮಾಂಗನೇಟಿನ ಹರಳುಗಳನ್ನೂ ಹಾಕಬಹುದು). ಪ್ರಶ್ನೆ: 1) ಮಸಿ ಕರಗುವ ಕ್ರಿಯೆಯ ಹೆಸರೇನು? 2) ಯಾವ ನೀರಿನಲ್ಲಿ ಮಸಿ ಸಾವಕಾಶವಾಗಿ ಅಥವಾ ತ್ವರಿತವಾಗಿ ಕರಗುತ್ತದೆ? ಯಾಕೆ? ಉತ್ತರ: ಇದಕ್ಕೆ ‘ವಿಸರಣ’ () ಕ್ರಿಯೆಯೆನ್ನುತ್ತಾರೆ. ಫ್ರಿಜ್‌ನಲ್ಲಿಯ ನೀರಿನಲ್ಲಿ ಅತಿ ಸಾವಕಾಶವಾಗಿ ಹಾಗೂ ಬಿಸಿ ನೀರಿನಲ್ಲಿ ಅತಿ ತ್ವರಿತವಾಗಿ ಮಸಿ ಕರಗುತ್ತದೆ. ತಾಪಮಾನ ಹೆಚ್ಚಿದಂತೆ ವಿಸರಣ ಕ್ರಿಯೆ ಹೆಚ್ಚುತ್ತದೆ. ಹೆಚ್ಚಿನ ಉಷ್ೞತೆಯನ್ನು ಹೀರಿಕೊಂಡ ಮಸಿಯ ಅಣುಗಳು ತ್ವರಿತವಾಗಿ ಚಲಿಸುತ್ತವೆ. ಬಿಸಿ ಹಾಲಿನಲ್ಲಿ ಸಕ್ಕರೆ ತೀವ್ರವಾಗಿ ಕರಗುತ್ತದೆ. ತಣ್ಣನೆಯ ಹಾಲಿನಲ್ಲಿ ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.