ಬಾಚಿ ಸೆಳೆಯುವ ಬಾಚಣಿಕೆ ಬೇಕಾಗುವ ಸಲಕರಣೆಗಳು: 30 ಸೆಂಟಿಮೀಟರ್ ಉದ್ದವುಳ್ಳ ಪ್ಲಾಸ್ಟಿಕ್ ಸ್ಕೇಲ್, ಹಣಿಗೆ, ಟೇಬಲ್ ವಿಧಾನ: ಒಂದು ಹಣಿಗೆಯನ್ನು ತೆಗೆದುಕೊಳ್ಳಿರಿ. 30 ಸೆಂಟಿಮೀಟರ್ ಉದ್ದವುಳ್ಳ ಒಂದು ಪ್ಲಾಸ್ಟಿಕ್‌ ಸ್ಕೇಲನ್ನು ಚಿತ್ರದಲ್ಲಿ ತೋರಿಸಿದಂತೆ ಟೇಬಲ್ ಮೇಲೆ ಇಡಿ. ಸ್ಕೇಲಿನ ಅರ್ಧ ಭಾಗ ಟೇಬಲ್ ಅಂಚಿನ ಹೊರಗಿರಲಿ. ಪ್ರಶ್ನೆ: ನಿಮ್ಮ ತಲೆಯ ಒಣ ಕೂದಲುಗಳನ್ನು ಹಣಿಗೆಯಿಂದ ಬಾಚಿಕೊಂಡು, ತಕ್ಷಣ ಹಣಿಗೆಯನ್ನು ಪ್ಲಾಸ್ಟಿಕ್ ಸ್ಕೇಲ್‌ನ ‘ಬ’ ದ ಕೆಳಗಡೆ ಹಿಡಿಯಿರಿ. ಏನಾಗುತ್ತದೆ? ಯಾಕೆ? ಉತ್ತರ: ಹಣಿಗೆಯಿಂದ ಒಣ ಕೂದಲುಗಳನ್ನು ಬಾಚಿಕೊಂಡಾಗ ಅಲ್ಲಿ ವಿದ್ಯುತ್ ಆವೇಶವು ಉತ್ಪತ್ತಿಯಾಗುತ್ತದೆ. ವಿದ್ಯುತ್ ಆವೇಶವುಳ್ಳ ಹಣಿಗೆಯನ್ನು ಪ್ಲಾಸ್ಟಿಕ್ ಸ್ಕೇಲಿನ ಹತ್ತಿರ ತಂದಾಗ ಪ್ಲಾಸ್ಟಿಕ್ ಸ್ಕೇಲಿನಲ್ಲಿ ‘ವಿರುದ್ಧ ವಿದ್ಯುತ್ ಆವೇಶವು’ ಉತ್ಪತ್ತಿಯಾಗುತ್ತದೆ. ಹೀಗಾಗಿ ಹಣಿಗೆಯು ಸ್ಕೇಲನ್ನು ಆಕರ್ಷಿಸುತ್ತದೆ. ಆಗ ಸ್ಕೇಲ್ ‘ಬ’ ದಲ್ಲಿ ಬಾಗಿ ಕೆಳಗೆ ಬೀಳುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.