ಉದ್ಯೋಗಾವಕಾಶ ಅಲ್ಲಲ್ಲಿ ಸರ್ವೇ ಆಫ್‌ ಇಂಡಿಯಾ 118 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21/2/2015. ಹುದ್ದೆ ಹೆಸರು: ಟೊಪೊ ಟ್ರೈನೀಸ್‌ ಟೈಪ್‌ ‘ಎ’ (ಟಿಟಿಟಿ ‘ಎ’). ವೇತನ ಶ್ರೇಣಿ: ರೂ. 5200ರಿಂದ 20200 (ತರಬೇತಿ ಅವಧಿಯಲ್ಲಿ). ವಿದ್ಯಾರ್ಹತೆ: ಶೇ 45 ಅಂಕಗಳೊಂದಿಗೆ ಬಿ.ಎಸ್ಸಿ (ಮೆಥಮೆಟಿಕ್ಸ್‌). ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ ಹೆಚ್ಚಿನ ಮಾಹಿತಿಗೆ ... * * * ನಿಮ್ಹಾನ್ಸ್‌ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯಲ್ಲಿ 98 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6/2/2015 ಹುದ್ದೆ ವಿವರ: 1) ಸ್ಟಾಫ್‌ ನರ್ಸ್‌: 54 ಹುದ್ದೆ, ವಿದ್ಯಾರ್ಹತೆ: ಪಿಯುಸಿ ಉತ್ತೀರ್ಣ ಹಾಗೂ ಬಿ.ಎಸ್ಸಿ ನರ್ಸಿಂಗ್‌, ವಯೋಮಿತಿ: 30 ವರ್ಷ ದಾಟಿರಬಾರದು. ವೇತನ ಶ್ರೇಣಿ: ರೂ. 9300ರಿಂದ 34800, (2) ಜೂನಿಯರ್‌ ಟೆಕ್ನಿಷಿಯನ್‌: 18 ಹುದ್ದೆ, ವಿದ್ಯಾರ್ಹತೆ: ಮೆಡಿಕಲ್‌ ಲ್ಯಾಬ್‌ ಟೆಕ್ನಾಲಜಿಯಲ್ಲಿ ಬಿ.ಎಸ್ಸಿ, ವಯೋಮಿತಿ: 27 ವರ್ಷ ದಾಟಿರಬಾರದು, ವೇತನ ಶ್ರೇಣಿ: ರೂ.5200ರಿಂದ 20200, (3) ಲೋವರ್‌ ಡಿವಿಷನ್‌ ಕ್ಲರ್ಕ್‌: 26 ಹುದ್ದೆ, ವಿದ್ಯಾರ್ಹತೆ: ಪದವಿ, ವಯೋಮಿತಿ: 27 ವರ್ಷ ದಾಟಿರಬಾರದು, ವೇತನ ಶ್ರೇಣಿ: ರೂ.5200ರಿಂದ 20200 ಅರ್ಜಿ ಶುಲ್ಕ: ರೂ. 750. ಆಯ್ಕೆ ವಿಧಾನ: ಆನ್‌ಲೈನ್‌ ಪರೀಕ್ಷೆ. ಲಿಖಿತ ಪರೀಕ್ಷೆ: 1/3/2015, ಬೆಂಗಳೂರಿನಲ್ಲೂ ನಡೆಯಲಿದೆ. ವಿಳಾಸ: ನಿರ್ದೇಶಕರು, ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌), ಪೋಸ್ಟ್‌ ಬಾಕ್ಸ್‌ ಸಂಖ್ಯೆ: 2900, ಹೊಸೂರು ರಸ್ತೆ, ಬೆಂಗಳೂರು: 560029 ಹೆಚ್ಚಿನ ಮಾಹಿತಿಗೆ .... * * * ಇಂಡೊ ಟಿಬೆಟನ್‌ ಬಾರ್ಡರ್‌ ಪೊಲೀಸ್‌ ಐಟಿಬಿಪಿನಲ್ಲಿ 472 ಹುದ್ದೆಗಳನ್ನು (ಪುರುಷರು) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16/2/2015. ಹುದ್ದೆ ಹೆಸರು: ಕಾನ್‌ಸ್ಟೇಬಲ್‌ (ಡ್ರೈವರ್‌). ವೇತನ ಶ್ರೇಣಿ: ರೂ. 5200ರಿಂದ 20200 ವಿದ್ಯಾರ್ಹತೆ: ಮೆಟ್ರಿಕುಲೇಷನ್‌ ಅಥವಾ 10ನೇ ತರಗತಿ ಉತ್ತೀರ್ಣ. ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 27 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 50. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ. ವಿಳಾಸ: ದಿ ಇನ್‌ಸ್ಪೆಕ್ಟರ್‌ ಜನರಲ್‌ (ನಾರ್ತ್‌ ವೆಸ್ಟ್‌), ಫ್ರಾಂಟಿಯರ್‌ ಹೆಡ್‌ಕ್ವಾರ್ಟರ್ಸ್‌, ಇಂಡೊ–ಟಿಬೆಟನ್‌ ಬಾರ್ಡರ್‌ ಪೊಲೀಸ್‌, ಸೀಮಾ ನಗರ (ವಿಮಾನ ನಿಲ್ದಾಣ ಬಳಿ) ಪೋಸ್ಟ್‌, ಚಂಡೀಗಡ: 160003. ಹೆಚ್ಚಿನ ಮಾಹಿತಿಗೆ ://.. * * * ಇಂಡೊ ಟಿಬೆಟನ್‌ ಬಾರ್ಡರ್‌ ಪೊಲೀಸ್‌ ಐಟಿಬಿಪಿನಲ್ಲಿ 39 ಹುದ್ದೆಗಳನ್ನು (ಪುರುಷರು) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16/2/2015. ಹುದ್ದೆ ಹೆಸರು: ಹೆಡ್‌ ಕಾನ್‌ಸ್ಟೇಬಲ್‌ (ಡ್ರೆಸ್ಸರ್‌ ವೆಟರ್ನರಿ). ವೇತನ ಶ್ರೇಣಿ: ರೂ. 5200ರಿಂದ 20200. ವಿದ್ಯಾರ್ಹತೆ: 12ನೇ ತರಗತಿ ಅಥವಾ ತತ್ಸಮಾನ ಮತ್ತು ಪ್ಯಾರಾ ವೆಟರ್ನರಿ ಕೋರ್ಸ್‌ ಅಥವಾ ಡಿಪ್ಲೊಮಾ. ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 50. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ. ವಿಳಾಸ: ದಿ ಇನ್‌ಸ್ಪೆಕ್ಟರ್‌ ಜನರಲ್‌ (ನಾರ್ತ್‌ ಈಸ್ಟ್‌), ಫ್ರಾಂಟಿಯರ್‌ ಹೆಡ್‌ಕ್ವಾರ್ಟರ್ಸ್‌, ಇಂಡೊ–ಟಿಬೆಟನ್‌ ಬಾರ್ಡರ್‌ ಪೊಲೀಸ್‌, ಓಲ್ಡ್‌ ಎಪಿ ಸೆಕ್ರೇಟರಿಯೇಟ್‌ ಬಿಲ್ಡಿಂಗ್‌, ಕ್ಯಾಂಟ್‌ ಏರಿಯಾ, ಜಿ.ಎಸ್‌.ರಸ್ತೆ, ಶಿಲ್ಲಾಂಗ್‌ (ಮೇಘಾಲಯ): 793001 ಹೆಚ್ಚಿನ ಮಾಹಿತಿಗೆ ://.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.