ಪ್ರಜಾವಾಣಿ ಕ್ವಿಜ್‌ 1)ಬುಧ ಗ್ರಹಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ? ) ಸೂರ್ಯನ ಸಮೀಪದ ಗ್ರಹ ) ಇದಕ್ಕೆ ಉಪಗ್ರಹವಿಲ್ಲ ) ವಾತಾವರಣವಿಲ್ಲ ) ಮೇಲಿನ ಎಲ್ಲವು 2) ಕಿತ್ತಳೆ ಹಣ್ಣಿನ ಆಕಾರದಲ್ಲಿರುವ ಭೂಮಿಯ ದೈನಂದಿನ ಚಲನಾ ಅವಧಿಯು ಈ ಕೆಳಕಂಡ ಯಾವ ರೀತಿಯಲ್ಲಿದೆ? ) 23 ಗಂಟೆ, 56 ನಿಮಿಷ, 04 ಸೆಕೆಂಡ್ ) 24 ಗಂಟೆಗಳು ಮಾತ್ರ ) 23 ಗಂಟೆ 60 ನಿಮಿಷ 04 ಸೆಕೆಂಡ್‌ )23 ಗಂಟೆ 59 ಸೆಕೆಂಡ್‌ 3) ಭೂಕಂಪನದ ಪರಿಮಾಣವನ್ನು ರಿಕ್ಟರ್‌ ಮಾಪನದ ಮೂಲಕ ಅಳೆದರೆ ಭೂಕಂಪನದ ತೀವ್ರತೆಯನ್ನು ಅಳೆಯುವ ಮಾಪಕ ಯಾವುದು? ) ಸಿಸ್ಮೋಗ್ರಾಫ್‌ ) ಮೇರ್‌ಕಲಿ ಸ್ಕೇಲ್‌ ) ಫೋಕಸ್‌ ಮಾಪಕ ) ಮೇಲಿನ ಯಾವುದು ಅಲ್ಲ 4) ಸೂರ್ಯನ ಮೇಲಿನ ವಾತಾವರಣದಲ್ಲಿ ಯಾವ ಅನಿಲಗಳ ಪರಿವರ್ತನೆಯಲ್ಲಿ ಶಾಖ ಉತ್ಪತ್ತಿಯಾಗುತ್ತದೆ? ) ಜಲಜನಕ ಮತ್ತು ಸಾರಾಜನಕ ) ಹೈಡ್ರೋಜನ್‌ ಮತ್ತು ಹೀಲಿಯಂ ) ಇಂಗಾಲ ಮತ್ತು ಹೀಲಿಯಂ ) ಜಲಜನಕ ಮತ್ತು ಇಂಗಾಲ 5) ಭೂಮಿಯ ಮೇಲಿನ ಅಕ್ಷಾಂಶ ಮತ್ತು ರೇಖಾಂಶಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ. ) ಈ ರೇಖೆಗಳು ನಿಖರವಾಗಿವೆ ) ಈ ರೇಖೆಗಳು ಕಾಲ್ಪನಿಕ ) ಈ ರೇಖೆಗಳು ಭೂಮಿ ಮೇಲೆ ಇಲ್ಲ ) ಈ ರೇಖೆಗಳು ಕಣ್ಣಿಗೆ ಕಾಣುತ್ತವೆ 6) ಜ್ವಾಲಾಮುಖಿಯನ್ನು ಮೂರು ಮುಖ್ಯ ವಿಧಗಳಾಗಿ ವಿಂಗಡಿಸಲಾಗಿದೆ. ಈ ಕೆಳಗಿನವುಗಳಲ್ಲಿ ಯಾವುದು ಒಂದು ವಿಧವಾಗಿಲ್ಲ? ) ಸುಪ್ತ ಜ್ವಾಲಾಮುಖಿ ) ಜಾಗೃತ ಜ್ವಾಲಾಮುಖಿ ) ಲುಪ್ತ ಜ್ವಾಲಾಮುಖಿ ) ಎಟ್ನಾ ಜ್ವಾಲಾಮುಖಿ 7) ಗಾಳಿಯ ತೇವಾಂಶವನ್ನು ಯಾವ ಮಾಪಕದ ಮೂಲಕ ಮಾಪನ ಮಾಡುತ್ತಾರೆ? ) ಹೈಡ್ರೋ ಮೀಟರ್‌ ) ಸೈನೋ ಮೀಟರ್‌ ) ಅನಿಮೋ ಮೀಟರ್‌ ) ಕ್ಲೈನೋ ಮೀಟರ್‌ 8) ಭೂಮಿ ಮೇಲಿನ ವಾತಾವರಣದಲ್ಲಿರುವ ಈ ಕೆಳಗಿನ ಯಾವ ಮೋಡಗಳು ಗುಡುಗು ಮತ್ತು ಸಿಡಿಲಿನ ಮಳೆ ತರುತ್ತವೆ? ) ನಿಂಬೋಸ್ಟ್ರಾಟಸ್‌ ಮೋಡಗಳು ) ಸಿರೋ ಸ್ಟ್ರಾಟಸ್‌ ಮೋಡಗಳು ) ಕ್ಯುಮೂಲೋನಿಂಬಸ್‌ ಮೋಡಗಳು ) ಸಿರ್ರಸ್‌ ಮೋಡಗಳು 9) ಉತ್ತರ ಮತ್ತು ದಕ್ಷಿಣ ಅಕ್ಷಾಂಶಗಳ ನಡುವೆ ಕಂಡು ಬರುವ ಟೈಗಾ ಹುಲ್ಲುಗಾವಲು ಪ್ರದೇಶ ಈ ಕೆಳಗಿನ ಯಾವ ಪ್ರದೇಶವನ್ನು ಒಳಗೊಂಡಿಲ್ಲ? ) ಅಲಾಸ್ಕ )ಫಿನ್‌ಲ್ಯಾಂಡ್‌ ) ದಕ್ಷಿಣ ರಷ್ಯಾ ) ಕೆನಡಾ 10) ಇಳಿಜಾರಿನ ಅಂಚುಗಳು, ಸಮತಟ್ಟಾದ ಪ್ರದೇಶ ಇರುವ ಎತ್ತರದ ಭೂಭಾಗವನ್ನು ಯಾವ ಹೆಸರಿನಿಂದ ಕರೆಯುತ್ತಾರೆ? ) ಪ್ರಸ್ಥಭೂಮಿ ) ಪರ್ವತ ಭೂಮಿ ) ನದಿ ಮುಖಜ ಭೂಮಿ ) ತಪ್ಪಲು ಭೂಮಿ –ಉತ್ತರ ಮುಂದಿನ ವಾರ ಕಳೆದ ವಾರದ ಉತ್ತರಗಳು... 1–, 2-–, 3–, 4–, 5–, 6–, 7–, 8–, 9–, 10–, ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.