ಮಾತಿನ ಹೊನಲು ಹರಿಯಲಿ... speakingನಲ್ಲಿ ವಿಷಯ ಮಂಡನೆಗೆ ಸಂಬಂಧಿಸಿದಂತೆ ಕೆಲವು ಸೂಚನೆಗಳು ಇಲ್ಲಿವೆ: ಎಷ್ಟೋ ಬಾರಿ ಮಾತನಾಡುತ್ತಿದ್ದ ಹಾಗೆಯೇ ನಮಗೆ ಖಾಲಿತನದ ಅನುಭವವಾಗುತ್ತದೆ. ಅಂದರೆ, ಎಲ್ಲವನ್ನೂ ಹಠಾತ್ ಮರೆತು ಹೋಗುವುದು. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಒಂದು ಸುಲಭ ಉಪಾಯವಿದೆ. ಮರವೊಂದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಬೇರು, ಕಾಂಡ ಮತ್ತು ರೆಂಬೆಗಳನ್ನು ಕಲ್ಪಿಸಿಕೊಳ್ಳಿ. ನಿಮ್ಮ ಮಾತಿನ ಮರದ ಕಾಂಡವೇ ನಿಮ್ಮ ವಿಷಯ. ಈ ವಿಷಯ ಕಾಂಡಕ್ಕೆ ನೀವು ಆರು ರೆಂಬೆಗಳನ್ನು ಕಲ್ಪಿಸಿಕೊಳ್ಳಬಹುದು. ಅವೇ ಇಂಗ್ಲಿಷ್‌ನಲ್ಲಿರುವ - , , , , . ಉದಾ: ಎಂಬುದು ನಿಮ್ಮ ಭಾಷಣದ ವಿಷಯ ಎಂದಿಟ್ಟುಕೊಳ್ಳಿ. ನಿಮ್ಮ ನೆನಪಿನಲ್ಲಿದ್ದುದ್ದೆಲ್ಲಾ ಸೋರಿ ಹೋಗುತ್ತಿರುವ ಅನುಭವ ನಿಮಗೆ ವೇದಿಕೆಯ ಮೇಲೆ ಆಗುತ್ತಿದ್ದಾಗ ನೀವು ಈ ರೆಂಬೆಗಳನ್ನು ಮನಸ್ಸಿನಲ್ಲಿ ಸ್ಪರ್ಶಿಸಿ. ಅನೇಕ ಬಾರಿ ಇದರಿಂದ ಒಳಗೆ ಅವಿತಿರುವ ವಿಷಯದ ಹೊಳವುಗಳು ತಂತಾನೆ ನಿಮಗೆ ಮತ್ತೆ ಒದಗಿ ಬರತೊಡಗುತ್ತವೆ. ಅಭ್ಯಾಸ ಬಲದಿಂದ ಕೆಲವೇ ಸೆಕೆಂಡುಗಳಲ್ಲಿ ಯಾವುದೇ ವಿಷಯವನ್ನು ಕುರಿತಾದರೂ ಈ ತಂತ್ರವನ್ನು ಉಪಯೋಗಿಸಬಹುದು, ಇದನ್ನು ಎಂದು ಕರೆಯಲಾಗುತ್ತದೆ. ಎರಡನೆಯ ಉಪಾಯವೆಂದರೆ, ವಿಷಯ ಮಂಡನೆಯಲ್ಲಿ ಪರಿಕಲ್ಪನೆಗಳಿಗಿಂತ ಹೆಚ್ಚಾಗಿ ಪದಚಿತ್ರಗಳನ್ನು ಉಪಯೋಗಿಸುವುದು. ಉದಾ: ಎಂಬ ವಾಕ್ಯಕ್ಕೆ ಬದಲಾಗಿ ಎಂದಾಗ ಅದರ ಪರಿಣಾಮವೇ ಬೇರೆ ರೀತಿ ಇರುತ್ತದೆ. ಏಕೆಂದರೆ ಎಲ್ಲಾ ಕೇಳುಗರೂ ಐದು ತಂತಿಗಳಿರುವಂತಹ ಪಂಚವೀಣೆಯಂತೆ. , , , - ಇವೇ ಆ ಪಂಚವೀಣೆಯ ತಂತಿಗಳು. ಪರಿಣಿತ ಭಾಷಣಕಾರನೊಬ್ಬ ತನ್ನ ವಿಷಯ ಮಂಡನೆಯನ್ನು ಕೇಳುಗರ ಪಂಚೇಂದ್ರಿಯಗಳ ಅನುಭವಕ್ಕೆ ದಕ್ಕುವಂತೆ ಕಲಾತ್ಮಕವಾಗಿ ಸಂಭಾಷಿಸುತ್ತಿರುತ್ತಾನೆ. ಬೇಂದ್ರೆಯವರ ‘ಮೂಡಲ ಮನೆಯ ಮುತ್ತಿನ..’ ಎಂಬ ಪದ್ಯದ ಮಾಂತ್ರಿಕತೆ ಈ ಅಂಶದಲ್ಲೇ ಅಡಗಿದೆ. ಮೂರನೆಯದಾಗಿ, ನಮ್ಮ ಭಾಷಣ ಬತ್ತಳಿಕೆಯಲ್ಲಿ ವಿವಿಧ ಆಯ್ಕೆಗಳಿರಬೇಕು. (ಉಲ್ಲೇಖಗಳು), (ಸ್ವಾರಸ್ಯಕರ ಅನುಭವಗಳು), (ಸಂದರ್ಭೋಚಿತ ಅಂಕಿ ಅಂಶಗಳು), (ದೃಷ್ಟಾಂತಗಳು) ಇವುಗಳಲ್ಲಿ ಕೆಲವು. ಕಡೆಯದಾಗಿ, ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುವುದು ನಮ್ಮಲ್ಲಿ ಇರಬೇಕಾದ ತೀಕ್ಷ್ಣವಾದ ಸಮಯಪ್ರಜ್ಞೆ, ಕೇಳುಗರ ಸಮಯ ಮತ್ತು ಗಮನಮಿತಿಯ ( ) ಬಗ್ಗೆ ಪಬ್ಲಿಕ್ ಸ್ಪೀಕರ್‌ಗೆ ಅಪಾರವಾದ ಗೌರವ ವಿರಬೇಕು. ವಂದನಾರ್ಪಣೆಯನ್ನು ಮಾಡಲು ಹೋಗಿ ಆತ್ಮ ಚರಿತ್ರೆಯ ಜಾಡು ಹಿಡಿದು, ಕೇಳುಗರ ನಿದ್ದೆಗೆ ಕಾರಣರಾದ ಎಷ್ಟೋ ಜನ ಆಗಿಹೋಗಿದ್ದಾರೆಂಬುದನ್ನು ನಾವು ಮರೆಯಬಾರದು. ಮಾಹಿತಿಗೆ: 98452 13417 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.