ಓದಲು ಕುಳಿತಾಗ... * ಹದಿಹರೆಯದ ಮಕ್ಕಳು ಓದಲು ಕುಳಿತಾಗ ಇತರರೂ ಟೀವಿ ನೋಡುವುದನ್ನು ಕಡಿಮೆ ಮಾಡಲಿ. ಟೀವಿಯ ಧ್ವನಿ ಆದಷ್ಟು ಸಣ್ಣದಾಗಿರಲಿ. * ಬಹಳಷ್ಟು ಹೊತ್ತು ಓದಲು ಕೂತಾಗ ಹಸಿವಾಗುವುದು ಸಹಜ. ತಾಜಾ ಹಣ್ಣುಗಳು ಯಾವಾಗಲೂ ಅವರ ಕೈಗೆ ಸಿಗುವಂತಿರಲಿ. ಸೌತೆಕಾಯಿ, ಕ್ಯಾರೆಟ್‌ ಸಲಾಡ್‌ ಸಹ ನೀಡಬಹುದು. ಕರಿದ ತಿಂಡಿಗಳಿಂದ ದೂರವಿದ್ದರೆ ಸಾಕು. * ಹುರಿದ ಬದಾಮಿ, ಒಣದ್ರಾಕ್ಷಿ, ಕಲ್ಲುಸಕ್ಕರೆಯ ಮಿಶ್ರಣದ ಡಬ್ಬವೊಂದನ್ನು ಅವರ ಅಭ್ಯಾಸದ ಟೇಬಲ್‌ ಮೇಲಿರಿಸಬಹುದು. ನಿದ್ದೆ ತಡೆಯಲು, ಆ್ಯಸಿಡಿಟಿ ತಡೆಯಲು ಕಲ್ಲುಸಕ್ಕರೆ ಹಾಗೂ ಒಣದ್ರಾಕ್ಷಿ ಸಹಾಯಕವಾಗಿರುತ್ತವೆ. * ಓದಿನ ನಡುವೆ ಬಿಡುವು ಬೇಕೆನಿಸಿದಾಗ ಸಂಗೀತ ಕೇಳಲು ಪ್ರೋತ್ಸಾಹಿಸಿ * ಒಂದೆರಡು ಪ್ಲೇಸ್ಟೇಷನ್‌ ಅಥವಾ ಮೊಬೈಲ್‌ಗಳಲ್ಲಿ ಒಂದೆರಡೇ ಗೇಮ್‌ ಆಡುವುದಾಗಿ ಮಕ್ಕಳು ಕೇಳುವುದು ಸಹಜ. ಆದರೆ ಅದರಲ್ಲಿಯೇ ಅವರು ಕಳೆದುಹೋಗುವ ಸಾಧ್ಯತೆಗಳಿರುತ್ತವೆ. ನಿರ್ದಿಷ್ಟ ಸಮಯದ ನಂತರ ಹೋಗಿ ಎಚ್ಚರಿಸಲು ಮರೆಯದಿರಿ. ಓದಿಗಿಂತ ಮುಂಚೆ ಒಂದಷ್ಟು ಹೊತ್ತು ಆಟವಾಡಲು ಬಿಡುವುದು ಒಳ್ಳೆಯ ಅಭ್ಯಾಸ. * ಖಾಲಿ ಹೊಟ್ಟೆಯಲ್ಲಿ ಮಕ್ಕಳು ಓದುವುದಾಗಲೀ, ಮಲಗುವುದಾಗಲೀ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದಷ್ಟು ಮಕ್ಕಳಿಗೆ ಕಡಿಮೆ ಮಸಾಲೆ ಇರುವ ಆಹಾರವನ್ನು ಸೇವಿಸಲು ನೀಡಿರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.