ಅಲ್ಲಲ್ಲಿ ಉದ್ಯೋಗಾವಕಾಶ ನ್ಯಾಷನಲ್‌ ಇನ್ಸುರೆನ್ಸ್‌ ಕಂಪೆನಿ ಎನ್‌ಐಸಿಎಲ್‌ನಲ್ಲಿ 1000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/1/2015. ಹುದ್ದೆ ಹೆಸರು: ಅಸಿಸ್ಟೆಂಟ್‌ * ಕರ್ನಾಟಕದಲ್ಲಿ 65 ಹುದ್ದೆಗಳಿವೆ. ವೇತನ ಶ್ರೇಣಿ: ರೂ. 7640ರಿಂದ 21050 ವಿದ್ಯಾರ್ಹತೆ: ಪದವಿ ಅಥವಾ ಎಚ್‌ಎಸ್‌ಸಿ/ತತ್ಸಮಾನ/ (12ನೇ ತರಗತಿ) ಪರೀಕ್ಷೆಯಲ್ಲಿ ಉತ್ತೀರ್ಣ (ಶೇ 60 ಅಂಕಗಳೊಂದಿಗೆ). ಜೊತೆಗೆ ಪದವಿ/ಎಚ್‌ಎಸ್‌ಸಿನಲ್ಲಿ ಇಂಗ್ಲಿಷ್‌ ಒಂದು ವಿಷಯವಾಗಿರಬೇಕು. ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 28 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 500 ಆಯ್ಕೆ ವಿಧಾನ: ಆನ್‌ಲೈನ್‌ ಪರೀಕ್ಷೆ ಹಾಗೂ ಸಂದರ್ಶನ * ಪರೀಕ್ಷೆ 2015ರ ಏಪ್ರಿಲ್‌ನಲ್ಲಿ ನಡೆಯಲಿದೆ. * ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಕಲಬುರ್ಗಿಯಲ್ಲಿ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ://... ಕೇಂದ್ರ ನಾಗರಿಕ ಸೇವಾ ಆಯೋಗ ಯು.ಪಿ.ಎಸ್‌.ಸಿಯು 98 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/1/2015. ಹುದ್ದೆ ವಿವರ: 1) ಅಸೋಸಿಯೇಟ್‌ ಪ್ರೊಫೆಸರ್‌: 4 ಹುದ್ದೆ, 2) ಅಸಿಸ್ಟೆಂಟ್‌ ಪ್ರೊಫೆಸರ್: 2 ಹುದ್ದೆ, 3) ಸ್ಪೆಷಲಿಸ್ಟ್‌ ಗ್ರೇಡ್‌–3 ಅಸಿಸ್ಟೆಂಟ್‌ ಪ್ರೊಫೆಸರ್‌: 20 ಹುದ್ದೆ, 4) ಸ್ಪೆಷಲಿಸ್ಟ್‌ ಗ್ರೇಡ್‌–3 ಅಸಿಸ್ಟೆಂಟ್‌ ಪ್ರೊಫೆಸರ್‌: 6 ಹುದ್ದೆ, 5) ಡೈರೆಕ್ಟರ್‌ (ಇನ್‌ಸ್ಟಿಟ್ಯೂಟ್‌): 1 ಹುದ್ದೆ, 6) ಅಸಿಸ್ಟೆಂಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌: 65 ಹುದ್ದೆ ಅರ್ಜಿ ಶುಲ್ಕ: ರೂ. 25 ಹೆಚ್ಚಿನ ಮಾಹಿತಿಗೆ ... ಎಂಪ್ಲಾಯೀಸ್‌ ಸ್ಟೇಟ್‌ ಇನ್ಸುರೆನ್ಸ್‌ ಕಾರ್ಪೊರೇಷನ್‌ ಇಎಸ್‌ಐಸಿನಲ್ಲಿ (ಕರ್ನಾಟಕದಲ್ಲಿ) 47 ಹುದ್ದೆಗಳನ್ನು (ಗುತ್ತಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28/1/2015. ಹುದ್ದೆ ಹೆಸರು: 1) ಇಎಸ್‌ಐಸಿ ಪಿಜಿಐಎಂಎಸ್‌ಆರ್‌ ಅಂಡ್‌ ವೈದ್ಯಕೀಯ ಕಾಲೇಜು, ರಾಜಾಜಿನಗರ ಬೆಂಗಳೂರು: ಪ್ರೊಫೆಸರ್‌: 6 ಹುದ್ದೆ, ಅಸೊಸಿಯೇಟ್‌ ಪ್ರೊಫೆಸರ್‌: 6 ಹುದ್ದೆ, ಅಸಿಸ್ಟೆಂಟ್‌ ಪ್ರೊಫೆಸರ್‌: 4 ಹುದ್ದೆ. 2) ಇಎಸ್‌ಐಸಿ ವೈದ್ಯಕೀಯ ಕಾಲೇಜು, ಕಲಬುರ್ಗಿ: ಪ್ರೊಫೆಸರ್‌: 6 ಹುದ್ದೆ, ಅಸೊಸಿಯೇಟ್‌ ಪ್ರೊಫೆಸರ್‌: 9 ಹುದ್ದೆ, ಅಸಿಸ್ಟೆಂಟ್‌ ಪ್ರೊಫೆಸರ್‌: 16 ಹುದ್ದೆ ಅರ್ಜಿ ಶುಲ್ಕ: ರೂ. 225. ಆಯ್ಕೆ ವಿಧಾನ: ಸಂದರ್ಶನ * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ಪ್ರಿಂಟ್‌ಔಟ್‌ ತೆಗೆದು ಪೋಸ್ಟ್‌ನಲ್ಲಿ ಸಲ್ಲಿಸಲು ಕೊನೆಯ ದಿನಾಂಕ: 4/2/2015 ವಿಳಾಸ ಹಾಗೂ ಹೆಚ್ಚಿನ ಮಾಹಿತಿಗೆ ... ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ ಎಸ್ಎಐಎಲ್‌ನಲ್ಲಿ (ಬರ್ನಾಪುರ) 219 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6/2/2015. ಹುದ್ದೆ ಹೆಸರು: ಆಪರೇಟರ್‌ ಕಮ್‌ ಟೆಕ್ನಿಷಿಯನ್‌ ಟ್ರೈನಿ (ಮೆಟಾಲರ್ಜಿ: 46, ಮೆಕಾನಿಕಲ್‌: 107, ಕೆಮಿಕಲ್‌: 10, ಎಲೆಕ್ಟ್ರಿಕಲ್‌: 56) ವೇತನ ಶ್ರೇಣಿ: ರೂ. 16800ರಿಂದ 24110 ವಿದ್ಯಾರ್ಹತೆ: ಮೆಟ್ರಿಕುಲೇಷನ್‌ ಹಾಗೂ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ. ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 250 ಆಯ್ಕೆ ವಿಧಾನ: ಲಖಿತ ಪರೀಕ್ಷೆ ಹಾಗೂ ಸಂದರ್ಶನ ಹೆಚ್ಚಿನ ಮಾಹಿತಿಗೆ ://. ಅಥವಾ ... ಕೇಂದ್ರ ನಾಗರಿಕ ಸೇವಾ ಆಯೋಗ ಯು.ಪಿ.ಎಸ್‌.ಸಿಯು 375 ಹುದ್ದೆಗಳನ್ನು ಭರ್ತಿ ಮಾಡಲು 2015ರ ಏಪ್ರಿಲ್‌ 19ರಂದು ಎನ್‌ಡಿಎ–1 ಅಂಡ್‌ ನೇವಲ್‌ ಅಕಾಡೆಮಿ (ಎನ್‌ಎ) ಪರೀಕ್ಷೆ ನಡೆಸಲಿದ್ದು ಅದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23/1/2015. ಹುದ್ದೆ ವಿವರ: ಆರ್ಮಿ: 208, ನೇವಿ: 42, ಏರ್ ಫೋರ್ಸ್‌: 70, ನೇವಲ್‌ ಅಕಾಡೆಮಿ: 55 ವಿದ್ಯಾರ್ಹತೆ: ಆರ್ಮಿ: 12ನೇ ತರಗತಿ ಉತ್ತೀರ್ಣ (10+2 ಮಾದರಿ). ಏರ್‌ ಫೋರ್ಸ್‌, ನೇವಿ, ನೇವಲ್‌ ಅಕಾಡೆಮಿ: ಫಿಜಿಕ್ಸ್‌ ಹಾಗೂ ಮೆಥಮೆಟಿಕ್ಸ್‌ ವಿಷಯದೊಂದಿಗೆ 12ನೇ ತರಗತಿ ಉತ್ತೀರ್ಣ (10+2 ಮಾದರಿ). ವಯೋಮಿತಿ: 2ನೇ ಜುಲೈ 1996 ಹಾಗೂ 1ನೇ ಜನವರಿ 1999 ನಡುವೆ ಜನಿಸಿರಬೇಕು. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ * ಬೆಂಗಳೂರು ಹಾಗೂ ಧಾರವಾಡದಲ್ಲೂ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ://.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.