ಪ್ರಜಾವಾಣಿ ಕ್ವಿಜ್ 1) ಒಬ್ಬ ವ್ಯಕ್ತಿಗೆ ಆಸ್‌ ಫಿಕ್ಸಿಯ (ಉಸಿರು ಕಟ್ಟುವುದು) ಉಂಟಾದಾಗ ಒತ್ತಡದ ಮೂಲಕ ಗಾಳಿಗೂಡುಗಳಲ್ಲಿ ಸೇರಿದ ನೀರನ್ನು ಹೊರತೆಗೆಯಲಾಗುತ್ತದೆ. ಯಾವ ಸಂದರ್ಭಗಳಲ್ಲಿ ಆಸ್‌ ಫಿಕ್ಸಿಯ ಉಂಟಾಗುತ್ತದೆ. ) ಅಪಘಾತ ಸಂಭವಿಸಿದಾಗ ) ಅಗ್ನಿ ಅನಾಹುತಗಳಲ್ಲಿ ) ನೀರಿನಲ್ಲಿ ಮುಳುಗಿದಾಗ ) ಮೇಲಿನ ಯಾವುದೂ ಅಲ್ಲ 2) ಟ್ಯೂಬರ್‌ ಕ್ಯೂಲಿನ್‌ ಎಂಬ ಬ್ಯಾಕ್ಟೀರಿಯ ಪದಾರ್ಥದಿಂದ ಜ್ವರ, ತೂಕ ಕಡಿಮೆಯಾಗುವುದು, ಸುಸ್ತು ಹಾಗೂ ಕೆಮ್ಮಿನ ಲಕ್ಷಣಗಳಿರುವ ರೋಗ ಬರುತ್ತದೆ. ಸಾಂಕ್ರಾಮಿಕವಾಗಿರುವ ಈ ರೋಗದ ಹೆಸರೇನು? ) ಹಂದಿ ಜ್ವರ ) ಟೈಫಾಯ್ಡ್‌ )ನ್ಯುಮೋನಿಯಾ ) ಕ್ಷಯ 3) ಉಸಿರಾಟಕ್ಕೆ ಸಂಬಂಧಪಟ್ಟ ಅನಿಲಗಳಿಂದ ನಮ್ಮ ದೇಹಕ್ಕೆ ಅಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್‌ ಅನ್ನು ಯಾವ ರಕ್ತಕಣಗಳು ಸಾಗಾಟ ಮಾಡುತ್ತವೆ ? ) ಕೆಂಪು ರಕ್ತಕಣಗಳು ) ಬಿಳಿ ರಕ್ತಕಣಗಳು )ರಕ್ತ ತಟ್ಟೆಗಳು ) ಮೇಲಿನ ಎಲ್ಲವೂ 4) ಇಸಿಜಿಯ ಮೂಲಕ ಆ್ಯಂಜೀನಾ ಪೆಕ್‌ಟೋರಿಸ್‌ ಎಂಬ ಹೃದಯ ಕಾಯಿಲೆಯನ್ನು ವೈದ್ಯರು ಪತ್ತೆ ಹಚ್ಚುತ್ತಾರೆ. ಇದು ಯಾವ ಕಾರಣಕ್ಕೆ ಸಂಭವಿಸುತ್ತದೆ ? ) ಹೃತ್ಕಕ್ಷಿ ಸಂಕುಚಿತಗೊಂಡಾಗ ) ಕವಾಟುಗಳು ನಿಷ್ಕ್ರಿಯಗೊಂಡಾಗ ) ಹೆಚ್ಚು ಕೊಬ್ಬು ಸಂಗ್ರಹವಾದಾಗ )ಹೃದಯದ ಸ್ನಾಯುಗಳಿಗೆ ರಕ್ತ ಸರಬರಾಜು ನಿಂತಾಗ 5) ಮನುಷ್ಯನ ರಕ್ತದಲ್ಲಿರುವ ಕೆಲವು ಘಟಕಗಳ ಆಧಾರದ ಮೇಲೆ 1900ರಲ್ಲಿ ಜೀವಶಾಸ್ತ್ರ ವಿಜ್ಞಾನಿ ‘ಲ್ಯಾಂಡ್‌ ಸ್ಪ್ರೆನರ್‌’ ಏನನ್ನು ಕಂಡುಹಿಡಿದಿದ್ದಾರೆ? ) ಹಿಮೊಗ್ಲೋಬಿನ್‌ ) ರಕ್ತದ ಗುಂಪು ) ಆ್ಯಂಟಿಜನ್‌ ) ಪ್ಲಾಸ್ಮಾ 6) ಸ್ಫಟಿಕದ ರೂಪದಲ್ಲಿರುವ ಯೂರಿಕ್‌ ಆಮ್ಲ ಈ ಕೆಳಗಿನ ಯಾವುದರಲ್ಲಿ ವಿಲೀನವಾಗುವುದಿಲ್ಲ? ) ನೀರು ) ಎಣ್ಣೆ ) ಹಾಲು ) ಈ ಎಲ್ಲವೂ 7) ಎಲ್ಲಾ ಮನುಷ್ಯರು ಹೋಮೋ ಸೆಪಿಯನ್ಸ್‌ ಪ್ರಭೇದಕ್ಕೆ ಸೇರಿದರೆ, ಎಲ್ಲ ಬಗೆಯ ನಾಯಿಗಳು ಯಾವ ಪ್ರಭೇದಕ್ಕೆ ಸೇರುತ್ತವೆ? ) ಪೈಸಮ್‌ ಸಟೈಮಮ್‌ )ಡಾಗೊ ಸೆಪಿಯನ್ಸ್‌ ) ಕ್ಯಾನಿಸ್‌ ಫೆಮಿಲಿಯಾರಿಸ್‌ ) ಕ್ಯಾಟ್‌ ಫೆಮಿಲಿಯಾರಿಸ್‌ 8) ಮಾಲಿನ್ಯಕಾರಕ ಅರ್ಸೆನಿಕ್‌ ಅಂಶ ಈ ಕೆಳಗಿನ ಯಾವುದರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ? ) ಕುಡಿಯುವ ನೀರು ) ಗಾಳಿ ) ಆಹಾರ ) ಮೇಲಿನ ಎಲ್ಲವೂ 9)ಮನುಷ್ಯನ ಶ್ವಾಸಕೋಶದೊಳಗೆ ಪ್ರವೇಶಿಸಿದ ಇಂಗಾಲದ ಮಾನಾಕ್ಸೈಡ್‌ ಈ ಕೆಳಗಿನ ಯಾವುದರ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ) ರಕ್ತ ಕಣಗಳ ಮೇಲೆ ) ಹಿಮೊಗ್ಲೋಬಿನ್‌ ಮೇಲೆ ) ಯಕೃತ್‌ ಮೇಲೆ ) ಹೃದಯದ ಮೇಲೆ 10) 90 ಡೆಸಿಬಲ್‌ ಶಬ್ದ ಮನುಷ್ಯನ ಆರೋಗ್ಯದ ಮೇಲೆ ಈ ಕೆಳಕಂಡ ರೀತಿಯಲ್ಲಿ ಪರಿಣಾಮ ಬೀರುತ್ತದೆ. ) ಕಿವುಡುತನ ) ಮುಜುಗರ ) ಕಿವಿಯಲ್ಲಿ ನೋವು ) ಕಿವಿಯ ಒಳಪೊರೆಗೆ ತೊಂದರೆ –ಉತ್ತರ ಮುಂದಿನ ವಾರ ಕಳೆದ ವಾರದ ಉತ್ತರಗಳು.... 1–, 2-–, 3–, 4–, 5–, 6–, 7–, 8–, 9–, 10– ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.