ಉದ್ಯೋಗಾವಕಾಶ ಅಲ್ಲಲ್ಲಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ಬೆಸ್ಕಾಂನಲ್ಲಿ 628 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13/3/2015. ಹುದ್ದೆ ವಿವರ: ಅಸಿಸ್ಟೆಂಟ್‌ ಲೈನ್‌ಮನ್‌ (ಐಟಿಐ) ವೇತನ ಶ್ರೇಣಿ: ರೂ. 7950ರಿಂದ 16790 ವಿದ್ಯಾರ್ಹತೆ: ಐಟಿಐ/ಐಟಿಸಿನಲ್ಲಿ ಎಲೆಕ್ಟ್ರಿಸಿಯನ್‌/ಎಲೆಕ್ಟ್ರಾನಿಕ್ಸ್‌/ಎಲೆಕ್ಟ್ರಾನಿಕ್‌ ಮೆಕಾನಿಕ್‌ ಟ್ರೇಡ್‌ನಲ್ಲಿ 18/24 ತಿಂಗಳ ಕೋರ್ಸ್‌. ಅರ್ಹತಾ ಪರೀಕ್ಷೆಯಲ್ಲಿ ಶೇ 60 ಅಂಕ ಪಡೆದಿರಬೇಕು. ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ.400 ಹೆಚ್ಚಿನ ಮಾಹಿತಿಗೆ .. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ದಕ್ಷಿಣ ವಲಯದಲ್ಲಿ 1194 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17/3/2015. ಹುದ್ದೆ ವಿವರ: ಜೂನಿಯರ್‌ ಎಂಜಿನಿಯರ್‌: 1) ಸಿವಿಲ್‌ ಎಂಜಿನಿಯರಿಂಗ್: 10 ಹುದ್ದೆ, 2) ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌: 3 ಹುದ್ದೆ, 3) ಅಸಿಸ್ಟೆಂಟ್ ಗ್ರೇಡ್-11 (ಹಿಂದಿ): 8 ಹುದ್ದೆ, ವಯೋಮಿತಿ: 28 ವರ್ಷ ದಾಟಿರಬಾರದು, 4) ಟೈಪಿಸ್ಟ್ (ಹಿಂದಿ): 23 ಹುದ್ದೆ, ವಯೋಮಿತಿ: 25 ವರ್ಷ ದಾಟಿರಬಾರದು, 5) ಅಸಿಸ್ಟೆಂಟ್ ಗ್ರೇಡ್-111 (ಜನರಲ್‌): 125 ಹುದ್ದೆ, 6) ಅಸಿಸ್ಟೆಂಟ್ ಗ್ರೇಡ್-111 (ಅಕೌಂಟ್ಸ್‌): 122 ಹುದ್ದೆ, 7) ಅಸಿಸ್ಟೆಂಟ್ ಗ್ರೇಡ್-111 (ಟೆಕ್ನಿಕಲ್): 353 ಹುದ್ದೆ, 8) ಅಸಿಸ್ಟೆಂಟ್ ಗ್ರೇಡ್-111 (ಡಿಪಾಟ್): 550 ಹುದ್ದೆ, ವಯೋಮಿತಿ: 27 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವೇತನ ಶ್ರೇಣಿ: ಮೊದಲ ಎರಡು ಹುದ್ದೆಗಳಿಗೆ: 11100ರಿಂದ 29950, ನಂತರದ ಹುದ್ದೆಗಳಿಗೆ: ರೂ. 9900-ರಿಂದ 25530 ಅರ್ಜಿ ಶುಲ್ಕ: ರೂ. 350 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ. 4ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ .. ಭಾರತ್‌ ಪೆಟ್ರೊಲಿಯಂ ಕಾರ್ಪೊರೇಷನ್‌ ಬಿಪಿಸಿಎಲ್‌ನಲ್ಲಿ (ಎರ್ನಾಕುಲಂ) 71 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28/2/2015. ಹುದ್ದೆ ಹೆಸರು: ವರ್ಕ್‌ಮನ್‌–ಬಿ, ವಯೋಮಿತಿ: 30 ವರ್ಷ ದಾಟಿರಬಾರದು. ವೇತನ ಶ್ರೇಣಿ: ರೂ. 12500ರಿಂದ 22000 ವಿದ್ಯಾರ್ಹತೆ: ಮೊದಲ ದರ್ಜೆಯಲ್ಲಿ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಆಯ್ಕೆ ವಿಧಾನ: ಲಿಖಿತ ಹಾಗೂ ಸಂದರ್ಶನ 4ಕೊಚ್ಚಿಯಲ್ಲಿ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ .. ಕೇಂದ್ರ ನಾಗರಿಕ ಸೇವಾ ಆಯೋಗ ಯು.ಪಿ.ಎಸ್‌.ಸಿಯು 49 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5/3/2015. ಹುದ್ದೆ ವಿವರ: 1) ಸ್ಟೋರ್ಸ್‌ ಆಫೀಸರ್‌: 20 ಹುದ್ದೆ, 2) ಅಸಿಸ್ಟೆಂಟ್‌ ಪಬ್ಲಿಕ್‌ ಪ್ರಾಸಿಕೂಟರ್ಸ್‌: 22 ಹುದ್ದೆ, 3) ಅಸಿಸ್ಟೆಂಟ್‌ ಸರ್ವೆ ಆಫೀಸರ್‌: 04 ಹುದ್ದೆ, 4) ಎಂಜಿನಿಯರ್‌ ಅಂಡ್‌ ಶಿಪ್‌ ಸರ್ವೆ ಆಫೀಸರ್ಸ್‌: 3 ಹುದ್ದೆ (ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14/4/2015) ಹೆಚ್ಚಿನ ಮಾಹಿತಿಗೆ ... ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ 49 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28/2/2015. ಹುದ್ದೆ ಹೆಸರು: 1) ಫಾರೆಕ್ಸ್‌ ಆಫೀಸರ್‌: 11 ಹುದ್ದೆ, ವೇತನ ಶ್ರೇಣಿ: ರೂ 19400ರಿಂದ 28100, ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 35 ವರ್ಷ, (2) ಫಾರೆಕ್ಸ್‌ ಆಫೀಸರ್‌: 36 ಹುದ್ದೆ, 3) ಎಕಾನಾಮಿಸ್ಟ್‌: 2 ಹುದ್ದೆ, ವೇತನ ಶ್ರೇಣಿ: ರೂ 14500ರಿಂದ 25700, ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 30 ವರ್ಷ. ಅರ್ಜಿ ಶುಲ್ಕ: ರೂ 600 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ 4ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.