ಪ್ರಜಾವಾಣಿ ಕ್ವಿಜ್‌‌ 1)1624ರಿಂದ 1761ರ ವರೆಗೂ ಕರ್ನಾಟಕದಲ್ಲಿ ದಳವಾಯಿಗಳು ಪ್ರಾಬಲ್ಯ ಹೊಂದಿದ್ದರು. ಇವರು ರಾಜ್ಯದ ಯಾವ ಭಾಗದಲ್ಲಿ ಆಡಳಿತ ನಡೆಸುತ್ತಿದ್ದರು? ) ಮೈಸೂರು ) ಹೈದ್ರಾಬಾದ್‌ ಕರ್ನಾಟಕ ) ಮಧ್ಯಕರ್ನಾಟಕ ) ಕರಾವಳಿ ಕರ್ನಾಟಕ 2)ಬ್ರಿಟಿಷರ ಕಾಲದಲ್ಲಿ ದಕ್ಷಿಣ ಭಾರತವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಒಂದನ್ನು ದಕ್ಷಿಣದ ತುದಿ ಎಂದು ಕರೆಯುತ್ತಿದ್ದರು. ಮತ್ತೊಂದನ್ನು ಏನೆಂದು ಕರೆಯುತ್ತಿದ್ದರು? ) ವಿಂದ್ಯಾ ಪರ್ವತ ಭೂಮಿ ) ದಖನ್‌ ಭೂಮಿ ) ಮದ್ರಾಸ್‌ ಪ್ರಾಂತ್ಯ ) ಯಾವುದು ಅಲ್ಲ 3) ಮರಾಠರ ಕಾಲದಲ್ಲಿ ಗೋಲ್ಕಂಡ ಮೈತ್ರಿ ಯಾರ ನಡುವೆ ಏರ್ಪಟ್ಟಿತ್ತು? ) ಔರಂಗಜೇಬು–ಶಿವಾಜಿ ) ಔರಂಗಜೇಬು–ಬಾಜಿರಾಯ ) ಅಬುಲ್‌ ಹಸನ್‌ ಕುತುಬ್‌ ಷಾ–ಶಿವಾಜಿ ) ಶಿವಾಜಿ–ಬಾಜಿರಾಯ 4)ದವಸ ಧಾನ್ಯ, ಪೀಠೋಪಕರಣ, ಶಸ್ತ್ರಾಸ್ತ್ರಗಳಿಗೆ ಸಂಬಂಧಪಟ್ಟಂತೆ ಪಾರ್ಸಿ ಭಾಷೆಯಲ್ಲಿ ಯಾವ ಪದವನ್ನು ಬಳಸುತ್ತಾರೆ? ) ಚೌತ್‌ ) ಇಬೇನ್‌ ) ಸುಬೇದ್‌ ) ಸರಂಜಾಮು 5)ಪೇಶ್ವೆ ಎಂಬ ಪದಕ್ಕೆ ಆಡಳಿತಗಾರ ಅಥವಾ ಅಧಿಕಾರಿ ಎಂಬ ಅರ್ಥವಿದೆ. ಇದು ಯಾವ ಭಾಷೆಯ ಪದ? ) ಪಾರ್ಸಿ ) ಮರಾಠಿ ) ಉರ್ದು ) ಅರಬ್ಬಿ 6) ವೀರವನಿತೆ ರಾಣಿ ಚೆನ್ನಮ್ಮ ಅವರಿಂದ ಕಿತ್ತೂರು ಮನೆತನ ಸಾಕಷ್ಟು ಪ್ರಸಿದ್ಧಿ ಪಡೆಯಿತು. ಈ ರಾಜ ಮನೆತನದ ಆಡಳಿತಾವಧಿ ಎಷ್ಟು? ) 1585–1824 ) 1464–1778 ) 1685–1900 ) 1560–1875 7) 1750ರಲ್ಲಿ ಹೈದರ್‌ ಆಲಿ ಯಾವ ದಳವಾಯಿ ಸೈನ್ಯದ ತುಕಡಿಯ ನಾಯಕನಾಗಿದ್ದನು? ) ಯದುರಾಯ ) ತಿಮ್ಮರಾಯ ) ನಂಜರಾಜಯ್ಯ ) ಒಂದನೇ ತಿಮ್ಮರಾಯ 8) ಅಮೆರಿಕದ ಸ್ವಾತಂತ್ರ್ಯ ಪ್ರಕಟಣೆಯ ’ಅಮೆರಿಕನ್‌ ಡಿಕ್ಲರೇಷನ್‌ ಆಫ್‌ ಇಂಡಿಪೆಂಡೆನ್ಸ್‌’ ಎಂಬ ಪುಸ್ತಕದ ಪ್ರತಿ ಮೊದಲಿಗೆ ಭಾರತಕ್ಕೆ ತರಿಸಿದವರು ಯಾರು? ) ಮೈಸೂರಿನ ಅರಸರು ) ಹೈದರಾಬಾದಿನ ನಿಜಾಮರು ) ಟಿಪ್ಪು ಸುಲ್ತಾನ್‌ ) ಬ್ರಿಟಿಷರು 9) ಮೈಸೂರು ಸಂಸ್ಥಾನದಲ್ಲಿ ಬ್ರಿಟಿಷರ ಪರೋಕ್ಷ ಆಳ್ವಿಕೆ ಯಾರ ಕಾಲದಲ್ಲಿ ಆರಂಭವಾಯಿತು? ) ಮುಮ್ಮಡಿ ಕೃಷ್ಣರಾಜ ಒಡೆಯರ್‌ ) ನಾಲ್ವಡಿ ಕೃಷ್ಣರಾಜ ಒಡೆಯರ್‌ ) ಮೊದಲನೇ ಕೃಷ್ಣರಾಜ ಒಡೆಯರ್‌ ) ಎರಡನೇ ಕೃಷ್ಣರಾಜ ಒಡೆಯರ್‌ 10) ಮೈಸೂರಿನಲ್ಲಿ ಲಕ್ಷ್ಮಣ ತೀರ್ಥ ನದಿಗೆ ಅಣೆಕಟ್ಟು ಕಟ್ಟಿ ನೀರಾವರಿ ಸೌಲಭ್ಯ ಕಲ್ಪಿಸಿದ ಮೈಸೂರಿನ ದಿವಾನರು ಯಾರು? ) ವಿಶ್ವೇಶ್ವರಯ್ಯ ) ದಿವಾನ್‌ ಪೂರ್ಣಯ್ಯ ) ದಿವಾನ್‌ ಆನಂದ್‌ರಾವ್‌ ) ದಿವಾನ್‌ ಮಾದವರಾವ್‌ ಕಳೆದವಾರದ ಉತ್ತರಗಳು.... 1–, 2-–, 3–, 4–, 5–, 6–, 7–, 8–, 9–, 10– ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.