ಆನ್‌ಲೈನ್ ತರಬೇತಿ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕರ್ನಾಟಕದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು. ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂಬ ಉದ್ದೇಶದಿಂದಲೇ ಬ್ರೆಟ್ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಆನ್‌ಲೈನ್ ತರಬೇತಿ ಆರಂಭಿಸಿದೆ. ಆರು ತಿಂಗಳಿಂದ ಒಂದು ವರ್ಷದವರೆಗೂ ತರಬೇತಿ ನೀಡಲಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರವೊಂದರಲ್ಲೇ ವರ್ಷಕ್ಕೆ 11ಕ್ಕೂ ಹೆಚ್ಚು ಬಾರಿ ಪರೀಕ್ಷೆಗಳು ನಡೆಯಲಿವೆ. ಬೇರೆ ಬೇರೆ ಬ್ಯಾಂಕ್‌ಗಳಲ್ಲಿನ ಹುದ್ದೆಗಳ ಭರ್ತಿಗೆ ಐಬಿಪಿಎಸ್ ಪರೀಕ್ಷೆಗಳನ್ನು ನಡೆಸಲಿದ್ದು, ಆನ್‌ಲೈನ್ ಮೂಲಕ ತರಬೇತಿ ಪಡೆಯುವುದರಿಂದ ಪರೀಕ್ಷೆ ಎದುರಿಸಲು ಹೆಚ್ಚಿನ ಅನುಕೂಲವಾಗುತ್ತದೆ ಎನ್ನುತ್ತಾರೆ ಬ್ರೆಟ್ ಸೆಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಅಶೋಕ ಹೆಗ್ಡೆ ಮತ್ತು ನಿರ್ದೇಶಕ ಎನ್‌ವಿಜಿಕೆ ಭಟ್. ಪರೀಕ್ಷೆಯ ಪಠ್ಯ ಆಧರಿಸಿ ಎರಡು ಸಾವಿರಕ್ಕೂ ಅಧಿಕ ಪ್ರಶ್ನೆಗಳನ್ನು ತಯಾರಿಸಲಾಗಿದೆ. ವಾರಕ್ಕೊಮ್ಮೆ ಸಾಮಾನ್ಯ ಜ್ಞಾನದ ವಿಷಯಗಳ ಪ್ರಶ್ನೆಗಳನ್ನು ಅಪ್‌ಡೆಟ್ ಮಾಡಲಾಗುತ್ತದೆ. ಮಾದರಿ ಪ್ರಶ್ನೆಪತ್ರಿಕೆಗಳನ್ನು ನೀಡಿ 50 ಅಣಕು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರಿಂದ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಮಾಡುವುದು ಸುಲಭವಾಗುತ್ತದೆ. ಅಲ್ಲದೆ ಪ್ರಶ್ನೆಗಳು ಇದೇ ರೀತಿ ಇರುತ್ತವೆ ಎಂದು ನಿರೀಕ್ಷಿಸಬಹುದು. ಆನ್‌ಲೈನ್ ಮೂಲಕವೇ ಅಭ್ಯಾಸ ಮಾಡುವುದರಿಂದ ಆನ್‌ಲೈನ್ ಪರೀಕ್ಷೆಯ ಸ್ವರೂಪದ ಬಗ್ಗೆ ಮೊದಲೇ ಅರಿವು ಇರುತ್ತದೆ. ಹೀಗಾಗಿ ಪರೀಕ್ಷೆ ಸಂದರ್ಭದಲ್ಲಿ ಗೊಂದಲಕ್ಕೆ ಒಳಗಾಗುವ ಪ್ರಶ್ನೆಯೇ ಇರುವುದಿಲ್ಲ ಎನ್ನುತ್ತಾರೆ ಭಟ್. ಒಂದು ಪ್ರಶ್ನೆಗೆ ಉತ್ತರಿಸಲು 36 ಸೆಕೆಂಡ್ ಕಾಲಾವಕಾಶ ಸಿಗುತ್ತದೆ. ಅಣಕು ಪರೀಕ್ಷೆ ಮೂಲಕ ಮೊದಲೇ ಅಭ್ಯಾಸ ಮಾಡುವುದರಿಂದ ನಿಗದಿತ ಸಮಯದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಾಗುತ್ತದೆ. ಇಲ್ಲದೆ ಹೋದರೆ, ಉತ್ತರ ಗೊತ್ತಿದ್ದರೂ, ಉತ್ತರಿಸಲು ಸಮಯ ಸಾಕಾಗುವುದಿಲ್ಲ ಎಂಬುದು ಅವರ ವಿವರಣೆ. ಕ್ಲರಿಕಲ್ ಮತ್ತು ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಪ್ರತ್ಯೇಕ ಪರೀಕ್ಷೆ ನಡೆಯುತ್ತದೆ. ಪ್ರೊಬೇಷನರಿ ಅಧಿಕಾರಿಗಳಿಗೆ 65ರಿಂದ 70ಸಾವಿರ, ಕ್ಲರಿಕಲ್ ಸಿಬ್ಬಂದಿಗೆ 35ರಿಂದ 40 ಸಾವಿರ ಸಂಬಳ ಇರುತ್ತದೆ. ಆಯ್ಕೆ ಆಗಲೇಬೇಕು ಎಂದು ಹಟ ಹಿಡಿದು ನಿರಂತರವಾಗಿ ಅಧ್ಯಯನ ನಡೆಸಿದರೆ ಖಂಡಿತ ಕೆಲಸ ಸಿಗುತ್ತದೆ ಎಂಬುದು ಅವರ ಅನುಭವದ ಮಾತು. ಯಾವುದೇ ವಿಷಯದಲ್ಲಿ ಪದವಿ ಪಡೆದವರು/ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಳ್ಳಬಹುದು. ಆನ್‌ಲೈನ್ ಮೂಲಕ ಪರೀಕ್ಷೆ ನಡೆಯುವುದರಿಂದ, ಆನ್‌ಲೈನ್ ಮೂಲಕವೇ ತರಬೇತಿ ಪಡೆದರೆ ಖಂಡಿತ ಯಶಸ್ವಿಯಾಗಬಹುದು. ಕ್ಲಾಸ್‌ಗೆ ಹೋಗಿ ಪಠ್ಯಪುಸ್ತಕ ಆಧರಿಸಿ ಅಭ್ಯಾಸ ಮಾಡುವುದಕ್ಕಿಂತ ಆನ್‌ಲೈನ್ ಮೂಲಕ ಪರೀಕ್ಷೆಗೆ ಅಗತ್ಯವಿರುವ ವಿಷಯಗಳನ್ನು ಮಾತ್ರ ಪ್ರಾಯೋಗಿಕವಾಗಿ ಅಭ್ಯಾಸ ಮಾಡುವುದು ಸೂಕ್ತ ಎಂದು ಅವರು ಸಲಹೆ ಮಾಡಿದರು. ಆನ್‌ಲೈನ್ ತರಬೇತಿಗಾಗಿ ಸಂಪರ್ಕಿಸಬೇಕಾದ ವಿಳಾಸ: ಬ್ರೆಟ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ನಂ.291/69, 2ನೇ ಮುಖ್ಯರಸ್ತೆ, 38ನೇ ಕ್ರಾಸ್, 8ನೇ ಬ್ಲಾಕ್, ಜಯನಗರ, ಬೆಂಗಳೂರು-82. ವೆಬ್‌ಸೈಟ್: .. ಮೊಬೈಲ್‌ ಸಂಖ್ಯೆ: 99807 16611/ 99017 74443. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.