ವಾಕ್ಯ ರಚನೆಯ ಸುತ್ತ ವಾಕ್ಯ/: ವಾಕ್ಯ ಎಂದರೆ ಕೆಲವು ಪದ/Wordಗಳ ಸಮೂಹ. ಈ ಪದಗಳ ಸಮೂಹವು ವ್ಯಾಕರಣದ ನಿಯಮಗಳ ಅನುಸಾರವಾಗಿ ಒಂದು ನಿರ್ದಿಷ್ಟ ಕ್ರಮದಲ್ಲಿ ಜೋಡಣೆಯಾಗಿರಬೇಕು. ವಾಕ್ಯವೆಂದು ಗುರುತಿಸಬೇಕಾದರೆ ಎರಡು ಪದಗಳಾದರೂ ಇರಬೇಕು. ಆ ಎರಡು ಪದಗಳಲ್ಲಿ ಒಂದು ಕರ್ತೃ/ ಆಗಿರಬೇಕು, ಇನ್ನೊಂದು ಕ್ರಿಯಾಪದ/ ಆಗಿರಬೇಕು. ಹಾಗಿದ್ದರೆ ಮಾತ್ರ ವಾಕ್ಯಕ್ಕೆ ಒಂದು ನಿರ್ದಿಷ್ಟ ಅರ್ಥವಿರುತ್ತದೆ. ವಾಕ್ಯದಲ್ಲಿ ಸೂಕ್ತವಾದ ಪದಗಳ ಸಮೂಹವು ಹೆಚ್ಚಿದಂತೆಲ್ಲಾ ಅರ್ಥದ ವ್ಯಾಪ್ತಿ ಹೆಚ್ಚುತ್ತಾ ಹೋಗುತ್ತದೆ. ವಾಕ್ಯದಲ್ಲಿಯೂ ಕೂಡ ಹಲವಾರು ವಿಧಗಳಿವೆ. ಮತ್ತು ವಿವಿಧ ವಿಧದ ವಾಕ್ಯಗಳನ್ನು ಮುಂಬರುವ ಪಾಠಗಳಲ್ಲಿ ವಿವರಿಸಲಾಗುವುದು. ಇಂಗ್ಲಿಷ್ ಭಾಷೆಯಲ್ಲಿ ಪದಗಳ ವರ್ಗೀಕರಣವನ್ನು ಪದಗಳು ಪಾತ್ರವಹಿಸುವ ಆಧಾರದ ಮೇಲೆ ಮಾಡಲಾಗಿದೆ. ಪದಗಳ ಪಾತ್ರವನ್ನು ನಿಖರವಾಗಿ ಗುರ್ತಿಸುವುದು ಅತಿ ಅವಶ್ಯ. ಪದವೊಂದು ಬೇರೆ ಬೇರೆ ವಾಕ್ಯಗಳಲ್ಲಿ ಬೇರೆ ಬೇರೆ ಪಾತ್ರವನ್ನು ವಹಿಸಿದಾಗ ಅದು ವಹಿಸಿದ ಪಾತ್ರವನ್ನು ಆಧರಿಸಿ ಇಂತಹ ಗುಂಪಿಗೆ ಸೇರುತ್ತದೆ ಎಂದು ಅರ್ಥೈಸಿಕೊಂಡು ಗುರ್ತಿಸುವುದು ಅತಿ ಮುಖ್ಯ. ಕನ್ನಡ ಭಾಷೆಯಲ್ಲಿ ವಾಕ್ಯ ರಚನೆಗೆ ಕನ್ನಡ ಭಾಷೆಯ ವ್ಯಾಕರಣವು ಹೇಗೆ ಅತಿ ಮುಖ್ಯವೋ ಹಾಗೆಯೇ ಇಂಗ್ಲಿಷ್ ಭಾಷೆಯ ವ್ಯಾಕರಣದ ಜ್ಞಾನವು ಅತ್ಯಗತ್ಯ. ಎರಡು ಭಾಷೆಗಳ ವ್ಯಾಕರಣಗಳು ಅತಿ ವಿಭಿನ್ನವಾಗಿರುವುದರಿಂದ ಇಂಗ್ಲಿಷ್ ಭಾಷೆಯ ವ್ಯಾಕರಣವನ್ನು ಕಲಿಯಲು ಕನ್ನಡ ಭಾಷೆಯ ಕನಿಷ್ಠ ಪ್ರಾಥಮಿಕ ವ್ಯಾಕರಣ ನಿಯಮಗಳನ್ನು ತಿಳಿದಿರುವುದು ಅವಶ್ಯ. ಸೂಚನೆ: ವಾಕ್ಯದ ಮೊದಲನೆ ಪದದ ಮೊದಲನೆ ಅಕ್ಷರವು ದೊಡ್ಡಕ್ಷರ/ ಆಗಿರಲೇಬೇಕು. ಮತ್ತು ವಾಕ್ಯದ ಕೊನೆಗೆ ಪೂರ್ಣವಿರಾಮ (.) ಇಡಬೇಕು. ಕ್ರಿಯಾಪದದ ಪ್ರಸ್ತಾಪ ಮೊದಲೇ ತಿಳಿಸಿರುವಂತೆ ವಾಕ್ಯದಲ್ಲಿ ಕನಿಷ್ಠ ಎರಡು ಪದಗಳಾದರೂ ಇರಬೇಕು. ಆ ಎರಡು ಪದಗಳಲ್ಲಿ ಒಂದು ಕರ್ತೃಪದವಾಗಿರಬೇಕು, ಮತ್ತೊಂದು ಕ್ರಿಯಾಪದವಾಗಿರಬೇಕು. ವಾಕ್ಯದಲ್ಲಿ ಕ್ರಿಯಾಪದದ ಪ್ರಸ್ತಾಪವಾದ ಕೂಡಲೇ, ವಿಕ್ರಮಾದಿತ್ಯನ ಬೆನ್ನು ಬಿಡದ ಬೇತಾಳದಂತೆ ಕಾಲವೂ ಕೂಡ ಕ್ರಿಯಾಪದದ ಜೊತೆಗೆ ಬರುತ್ತದೆ. ಕ್ರಿಯಾಪದದ ಕಾಲವೆಂದರೆ ಕ್ರಿಯೆಗೆ ಸಂಬಂಧಪಟ್ಟ ಸಮಯವೆಂದು ತಿಳಿಯಬಹುದು. ಸಮಯದ ಬಗ್ಗೆ ಮೂರು ಸಂಗತಿಗಳನ್ನು ನೆನಪಿನಲ್ಲಿರಿಸಿಕೊಳ್ಳಬೇಕು. ಕ್ರಿಯೆಯು ಈಗ ನಡೆಯುತ್ತಿದ್ದರೆ ಅದನ್ನು ವರ್ತಮಾನ ಕಾಲ/ ವೆಂದು ತಿಳಿಯಲಾಗುತ್ತದೆ. ಕ್ರಿಯೆಯು ಹಿಂದೆಯೇ ಆಗಿದ್ದಲ್ಲಿ ಅದನ್ನು ಭೂತ ಕಾಲ/ ಎಂದು ಹೇಳಲಾಗುತ್ತದೆ. ಕ್ರಿಯೆಯೊಂದು ಮುಂದೆ ಯಾವಾಗಲೋ ಆಗುವುದಾದರೆ, ಅದರ ಸಮಯವನ್ನು ಭವಿಷ್ಯತ್ ಕಾಲ/ ವೆಂದು ಪರಿಗಣಿಸಲಾಗುತ್ತದೆ. ಇಂಗ್ಲಿಷ್ ವ್ಯಾಕರಣದಲ್ಲಿ ಕಾಲವನ್ನು ಎಂದು ಕರೆಯಲಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.