ಇದು ಕಾಲದ ಮಾತು ಈಗ ವರ್ತಮಾನ ಕಾಲ/ ಬಗ್ಗೆ ಯೋಚಿಸೋಣ. ಇಲ್ಲಿಯೂ ಕೂಡ ನಾಲ್ಕು ವಿಧದ ಕಾಲಗಳು ಇರುತ್ತವೆ. ಸರಳ/ಅನಿಶ್ಚಿತ ವರ್ತಮಾನ ಕಾಲ/ / ಅಪೂರ್ಣ ವರ್ತಮಾನ ಕಾಲ/ ಪೂರ್ಣ ವರ್ತಮಾನ ಕಾಲ/ ಪೂರ್ಣ ನಿರಂತರ ವರ್ತಮಾನ ಕಾಲ/ . ಇನ್ನು ಮುಂದಿನ ಪಾಠಗಳಲ್ಲಿ ವ್ಯಾಕರಣದ ನಿಯಮಗಳ ಆಧಾರದ ಮೇಲೆ ಕನ್ನಡ ಹಾಗೂ ಇಂಗ್ಲಿಷ್ ವಾಕ್ಯಗಳನ್ನು ಭಾಷಾಂತರಿಸಲು ಸಂಪೂರ್ಣ ಸಿದ್ಧರಾಗಿರಬೇಕು. ವ್ಯಾಕರಣದ ನಿಯಮಗಳನ್ನು ತರ್ಕಕ್ಕೆ ಒಳಪಡಿಸಿ, ಸ್ಪಷ್ಟತೆಯೊಂದಿಗೆ ಭಾಷಾಂತರಕ್ಕೆ ಮುನ್ನುಗ್ಗಬೇಕು. ಸಾಧ್ಯವಾದಲ್ಲಿ ಗೊತ್ತಿರುವ ಬೇರೆ ಬೇರೆ ಪದಗಳನ್ನು ಉಪಯೋಗಿಸಿದರೂ ರಚಿಸುವ ವಾಕ್ಯಗಳು ವ್ಯಾಕರಣದ ಚೌಕಟ್ಟಿನೊಳಗೆ ಇರಲೇಬೇಕು. ಇಲ್ಲದಿದ್ದರೆ ಭಾಷಾಂತರಿಸುವುದು ಅಸಾಧ್ಯ. ಸರಳ/ಅನಿಶ್ಚಿತ ವರ್ತಮಾನ ಕಾಲ (/ ) ವಾಕ್ಯವೊಂದರಲ್ಲಿ ಕಂಡು ಬರುವ ಕ್ರಿಯಾಪದ()ವನ್ನು ಗಮನಿಸಿದಾಗ ಆ ಕ್ರಿಯೆಯು ಇನ್ನೂ ನಡೆದಿಲ್ಲ. ಸ್ವಲ್ಪ ಸಮಯದ ನಂತರ ನಡೆಯಬಹುದು ಎಂದು ಅನಿಸುತ್ತದೆ. ಅಂದರೆ ಆ ಘಟನೆಯ ಸಂಭವನೀಯತೆಯ ಬಗ್ಗೆ ಅನಿಶ್ಚಿತವಾಗಿದೆ ಎನ್ನಬಹುದು. ಆ ಕ್ರಿಯಾಪದವು ಘಟನೆ ನಡೆದಿರಬಹುದೆ ಎನ್ನುವುದರ ಬಗ್ಗೆ ಏನೂ ಸ್ಪಷ್ಟ ಪಡಿಸುವುದಿಲ್ಲ.. ಈ ರೀತಿಯ ಅನಿಶ್ಚಿತವನ್ನು ಸೂಚಿಸುವ ಕ್ರಿಯಾಪದವು ಸರಳ/ಅನಿಶ್ಚಿತ ವರ್ತಮಾನ ಕಾಲದಲ್ಲಿದೆ ಯೆಂದು ಹೇಳಲಾಗುತ್ತದೆ. ಅನಿಶ್ಚಿತ ವರ್ತಮಾನ ಕಾಲದಲ್ಲಿ ಸರಳ ವಾಕ್ಯವೊಂದನ್ನು ಭಾಷಾಂತರಿಸುವಾಗ ತಿಳಿದುಕೊಳ್ಳಲೇಬೇಕಾದ ನಿಯಮಗಳು: ‘ನಾನು ಹೋಗುತ್ತೇನೆ’ ಇದೊಂದು ಸರಳವಾಕ್ಯ, ಇಲ್ಲಿರುವ ಪದಗಳು ಎರಡೇ, ಅವುಗಳಲ್ಲಿ ನಾನು/ ಎಂಬುದು ಕರ್ತೃ/, ಹೋಗುತ್ತೇನೆ ಎಂಬುದು ಕ್ರಿಯಾಪದ. ಹೋಗುತ್ತೇನೆ ಎಂಬ ಕ್ರಿಯಾಪದದ ಮೂಲರೂಪ ಹೋಗು. ಹೋಗುವ ಕ್ರಿಯೆಗೆ ಕಾರಣಕರ್ತ ನಾನು. ಆದ್ದರಿಂದ ನಾನು ಎಂಬುದು ಕರ್ತೃ ಪದ. ಈ ಕರ್ತೃ ಪದವು ಸರ್ವನಾಮ/. ನಿರ್ದಿಷ್ಟವಾಗಿ ಹೇಳುವುದಾದರೆ ನಾನು ಎಂಬುದು ಪುರುಷಾರ್ಥಕ ಸರ್ವನಾಮ/ ದ ಪ್ರಥಮ ಪುರುಷ// ಏಕವಚನ/ ರೂಪದ ಪದವಾಗಿರುತ್ತದೆ. ನಿಯಮ 1: ವಾಕ್ಯದಲ್ಲಿ ಕರ್ತೃವು ಪ್ರಥಮ ಪುರುಷ ಏಕವಚನವಾಗಿರಲೀ ಅಥವಾ ಬಹುವಚನವಾಗಿರಲೀ ಅಥವಾ ತೃತೀಯ ಪುರುಷ ಬಹು ವಚನವಾಗಿರಲೀ ಕ್ರಿಯಾಪದದ ಕಾಲವು ಅನಿಶ್ಚಿತ ವರ್ತಮಾನ ಕಾಲದಲ್ಲಿದ್ದರೆ ಕರ್ತೃವಿನ ಮುಂದೆ ಕ್ರಿಯಾಪದದ ಮೂಲರೂಪವನ್ನು ಇಡಬೇಕು. ಒಂದೊಮ್ಮೆ ಕರ್ತೃ ಯಾವುದೇ ನಾಮಪದದ ಬಹುವಚನ ಆಗಿದ್ದಾಗಲೂ ಕೂಡ ಇದೇ ನಿಯಮವು ಅನ್ವಯಿಸುವುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.