ಎಂ.ಬಿ.ಎ ಫೈನಾನ್ಸ್‌ ಆಯ್ಕೆಗೂ ಮುನ್ನ ಮಾಸ್ಟರ್‌ ಆಫ್‌ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌ (ಎಂ.ಬಿ.ಎ) ಅಂದ ತಕ್ಷಣ ಬಹಳ ಹುಡುಗರಿಗೆ ಮನಸಾಗುವುದು ಎಂ.ಬಿ.ಎ ಫೈನಾನ್ಸ್‌. ಹೇಗೊ ಓದಿರುವುದು ಬಿಕಾಂ, ಹಾಗಾಗಿ ಎಂ.ಬಿ.ಎಯಲ್ಲಿ ಫೈನಾನ್ಸ್‌ ಸ್ಪೆಶಲೈಜೇಷನ್‌ ಆಯ್ಕೆ ಮಾಡಿಕೊಂಡರೆ ಸ್ವಲ್ಪ ಸಲೀಸಾಗಬಹುದು ಎಂಬುದು ಸಾಮಾನ್ಯವಾಗಿ ಬಹಳಷ್ಟು ಹುಡುಗರ ಅಂದಾಜು. ಅಕೌಂಟಿಂಗ್ ಹೇಗೊ ಚೆನ್ನಾಗಿ ಬಲ್ಲೆನು, ಆದಕಾರಣ ಫೈನಾನ್ಸ್‌ ಆಯ್ಕೆ ಮಾಡಿಕೊಂಡರೆ ನೀರು ಕುಡಿದಷ್ಟೇ ಸಲೀಸಾಗಬಹುದು ಎಂಬುದು ಎಂ.ಬಿ.ಎ ಸೇರುವ ಮೊದಲು ಬಹಳಷ್ಟು ಹುಡುಗರ ಅಭಿಪ್ರಾಯವಾಗಿರುತ್ತದೆ. ಇತ್ತ ಬಿಎಸ್ಸಿ ಹಾಗೂ ಎಂಜಿನಿಯರಿಂಗ್‌ ಓದಿ ಬಂದವರು ಫೈನಾನ್ಸ್‌ ಎಂದರೆ ಕಾಮರ್ಸ್‌, ಮ್ಯಾನೇಜ್‌ಮೆಂಟ್ ಹುಡುಗರು ಆಯ್ಕೆ ಮಾಡಿಕೊಳ್ಳುವುದು, ತಮಗೆ ಸರಿಯಲ್ಲ ಎಂಬುದು ಅವರ ಮೊದಲ ಅನಿಸಿಕೆಯಾಗಿರುತ್ತದೆ. ನಿಜವೆಂದರೆ / ಹುಡುಗರೇ ಫೈನಾನ್ಸ್‌ ವಿಷಯವನ್ನು ಹೆಚ್ಚು ಹೆಚ್ಚು, ದಿನ ಕಳೆದಂತೆ ಚೆನ್ನಾಗಿ ಅರ್ಥ ಮಾಡುಕೊಳ್ಳುತ್ತಾರೆ. ಅವರ ಗುಣಗಳಿಂದ ಫೈನಾನ್ಸ್‌ ವಿಷಯ ಎಂಬುದು ಹೆಚ್ಚು ಅರ್ಥ ಪೂರ್ಣವಾಗಿ ಅರ್ಥವಾಗಲು ಪ್ರಾರಂಭವಾಗುತ್ತದೆ. ದಿನ ಕಳೆದಂತೆ ಬಿಕಾಂ ಹುಡುಗರಿಗೆ ಎಂ.ಬಿ.ಎ ಫೈನಾನ್ಸ್‌ ಎಂದರೆ ಬರೀ ಅಕೌಂಟಿಂಗ್‌ ಅಲ್ಲ ಅಕೌಂಟಿಂಗ್‌ ಮೊದಲ ಸೆಮಿಸ್ಟರ್‌ಗೆ ಮಾತ್ರ ಸೀಮಿತ ಹಾಗೂ ಅದರ , ಫೈನಾನ್ಸ್‌ ವಿಷಯಕ್ಕೆ ಸಹಾಯವಾಗುವುದೆಂದು ಅರಿವಾಗತೊಡಗುತ್ತದೆ. ಇದರಿಂದ ಅರ್ಥವಾಗುವುದೇನೆಂದರೆ ಯಾವ ವಿದ್ಯಾರ್ಥಿಯೇ ಆಗಲಿ ಪೂರ್ವಗ್ರಹ ಪೀಡಿತರಾಗಿ ಎಂ.ಬಿ.ಎಯನ್ನು ಆಯ್ಕೆ ಮಾಡಿಕೊಳ್ಳದೇ, ತಮಗೆ ಯಾವ ವಿಷಯದಲ್ಲಿ ನೈಪುಣ್ಯ ಹೊಂದಲು ಸಾಧ್ಯವಾಗಬಹು ದೆಂಬುದನ್ನು ಸ್ವಲ್ಪ ಕಾಲ ಸಂಯಮದಿಂದ ಕಾದಿದ್ದು ನಂತರ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಮೊದಲನೆಯ ವರ್ಷ ಮುಗಿಯುವ ಹೊತ್ತಿಗೆ ವಿದ್ಯಾರ್ಥಿಗಳಿಗೆ ತಮ್ಮ ನೆಚ್ಚಿನ ವಿಷಯದ ಬಗ್ಗೆ ಒಲವು ಮೂಡತೊಡಗಿರುತ್ತದೆ, ಪ್ರಾಧ್ಯಾಪಕರ ನೆರವಿನಿಂದ ಹಾಗೂ ಹಿರಿಯ ವಿದ್ಯಾರ್ಥಿ ಸ್ನೇಹಿತರೊಂದಿಗೆ ಸಮಾಲೋಚನೆ ನಡೆಸಿದ ನಂತರ ನಿರ್ಧಾರಕ್ಕೆ ಬರುವುದು ಒಳಿತು. ವಿದ್ಯಾರ್ಥಿಗಳು ಹೀಗೆ ಮಾಡಬೇಕು 1. ಪ್ರಾಧ್ಯಾಪಕರು ತರಗತಿಯಲ್ಲಿ ಬಿಡಿಸುವ ಫೈನಾನ್ಸ್‌ ಲೆಕ್ಕಗಳನ್ನು - ಉಪಯೋಗಿಸಿ ಬಿಡಿಸುವುದನ್ನು ವಿದ್ಯಾರ್ಥಿಗಳು ತರಗತಿ ಆದ ನಂತರ ಪ್ರಯತ್ನಿಸಬೇಕು. -Excelನಲ್ಲಿ ಬರುವ ‘’ functionನ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಾಗಿ ಆಸಕ್ತಿ ಬೆಳೆಸಿಕೊಂಡು ಅದರಲ್ಲಿರುವ ಎಲ್ಲಾ ಆಯ್ಕೆಗಳನ್ನು ಕರಗತ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ‘ ’ ಗೆ ಸಂಬಂಧಪಟ್ಟ ಉದ್ಯೋಗಗಳನ್ನು ಬಹಳ ಸುಲಭವಾಗಿ ಸಂಪಾದಿಸಬಹುದು. 2. ಇವುಗಳನ್ನು ಓದಿ: ‘ ’, ‘ ’, ‘7 ’, ‘ – ’, ‘ – ’, ‘ ’, ‘ : ’, ‘ !’ 3. ಫೈನಾನ್ಸ್‌ ವಿಷಯ ಸಂಪೂರ್ಣವಾಗಿ ಅರ್ಥವಾಗಬೇಕಾದಲ್ಲಿ ವಿದ್ಯಾರ್ಥಿಗಳು ಯಲ್ಲಿ - ಮತ್ತು ಖಾತೆಗಳನ್ನು ತೆರೆದು ಸ್ವಲ್ಪವಾಗಿ ಉಳಿಸಿದ ಹಣವನ್ನು ‘’ shareಗಳಲ್ಲಿ ಹ೦ತಹ೦ತವಾಗಿ ಹೂಡಿಕೆ ಮಾಡುವುದು ಒಳಿತು. ವಿದ್ಯಾರ್ಥಿಗಳಿಗೆ ಬಹು ಬೇಗನೇ ಪಠ್ಯದಲ್ಲಿರುವ ಬಹಳಷ್ಟು ವಿಷಯಗಳು ನಿರಾಯಾಸವಾಗಿ ಅರ್ಥವಾಗಲು ಸಾಧ್ಯವಾಗುತ್ತವೆ. ಮೊದಲಿಗೆ ಇನ್‌ವೆಸ್ಟ್‌ಮೆಂಟ್‌ ಅಡ್ವೈಸರ್‌ಗಳ ಸಲಹೆಯ ಮೇರೆಗೆ ಹೂಡಿಕೆ ಮಾಡಬೇಕಾಗುತ್ತದೆ. ನಂತರದ ದಿನಗಳಲ್ಲಿ ತಾವೇ ಹೂಡಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಒಟ್ಟಿನಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಪ್ರಾಯೋಗಿಕ ಜ್ಞಾನ ಇಲ್ಲವಾದಲ್ಲಿ ಫೈನಾನ್ಸ್‌ ವಿಷಯ ಕಬ್ಬಿಣದ ಕಡಲೆಯಾಗುವುದರಲ್ಲಿ ಎರಡು ಮಾತಿಲ್ಲ. 4. ಫೈನಾನ್ಸ್‌ ವಿದ್ಯಾರ್ಥಿಗಳು ವಾಣಿಜ್ಯ, ವ್ಯವಹಾರಕ್ಕೆ ಸಂಬಂಧಪಟ್ಟ ವಾಹಿನಿಗಳನ್ನು ನೋಡುವ ಜೊತೆಗೆ ‘ ’, ‘ ’, ‘ ’ ಪತ್ರಿಕೆಗಳನ್ನು ಓದುವುದರಿಂದ ಷೇರು ಮಾರುಕಟ್ಟೆ, ವಾಣಿಜ್ಯ ಸಂಗತಿ, ಪ್ರಚಲಿತ ಘಟನೆ, ಹೂಡಿಕೆ, ತೆರಿಗೆ ಸಂಬಂಧಪಟ್ಟ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಅರ್ಥವಾಗದ ವಿಚಾರಗಳನ್ನು ಪಟ್ಟಿಮಾಡಿಕೊಂಡು ಪ್ರಾಧ್ಯಾಪಕರೊಂದಿಗೆ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಚರ್ಚೆ ಮಾಡುವುದ್ದರಿಂದಲೂ ನಿಮ್ಮ ಜ್ಞಾನ ವೃದ್ಧಿಸಿಕೊಳ್ಳಬಹುದು. 5. ಎಲ್ಲಾ ಎಂ.ಬಿ.ಎ ಹಾಗೂ ಪಿಜಿ ಡಿಪ್ಲೊಮಾ ವಿದ್ಯಾರ್ಥಿಗಳು ತಮ್ಮ ಎರಡನೆಯ ವರ್ಷದ ಮೊದಲ ಭಾಗದಲ್ಲಿ ಗೊತ್ತು ಮಾಡಿಕೊಂಡ ಕಂಪೆನಿಯೊಂದರಲ್ಲಿ ಪ್ರಾಜೆಕ್ಟ್‌ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳು ತುಸು ಜಾಗರೂಕತೆ ಯಿಂದ ಮೊದಲ ವರ್ಷದಿಂದಲೆ ಪ್ರಯತ್ನಿಸಿ ಒಳ್ಳೆಯ ಕಂಪೆನಿಯೊಂದನ್ನು ಹುಡುಕಿಟ್ಟುಕೊಂಡಲ್ಲಿ ನಿಮ್ಮ ನೆಚ್ಚಿನ ಕಂಪೆನಿ ಸೇರುವ ಆಸೆಯ ಇನ್ನೊಂದು ಮೆಟ್ಟಿಲನ್ನು ಹತ್ತಿದಂತೆಯೇ ಸರಿ. 6. ಎಂ.ಬಿ.ಎ ಕಾಲೇಜುಗಳು ನಡೆಸುವ ಮ್ಯಾನೇಜ್‌ಮೆಂಟ್ ಫೆಸ್ಟ್‌ಗಳಿಗೆ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ತಮ್ಮ ನೆಟ್‌ವರ್ಕ್‌ಅನ್ನು ಹೆಚ್ಚು ಮಾಡಿಕೊಳ್ಳಬಹುದು, ಅದೇ ರೀತಿ ಪ್ರಾಯೋಗಿಕ ಫೈನಾನ್ಸ್‌ ಜ್ಞಾನವನ್ನು ಸಂಪಾದಿಸಬಹುದಾಗಿದೆ. 7. ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಸಾದರ ಪಡಿಸಿರುವ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಸಹ ವಿದ್ಯಾರ್ಥಿಗಳು ಮಾಡಬೇಕಾಗುತದೆ. ( ), ( )ನ ಹಲವಾರು ಸರ್ಟಿಫಿಕೇಟ್‌ ಕೋರ್ಸ್‌ಗಳು ಇಂಟರ್ನೆಟ್‌ನಲ್ಲಿ ಲಭ್ಯವಿರುತ್ತವೆ. ಈ ಕೋರ್ಸ್‌ಗಳನ್ನು ಆನ್‌ಲೈನ್‌ ಮುಖಾಂತರ ಶುಲ್ಕವನ್ನು ಕಟ್ಟಿ ಸ್ಟಡಿ ಮೆಟೀರಿಯಲ್‌ ಮನೆಗೆ ಸೇರಿದ ನಂತರ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಿ. ನಂತರ ತಾವು ಗೊತ್ತುಮಾಡಿಕೊಂಡ ದಿನದಂದು ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿಯಂಥ ನಗರ ಗಳ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಯಾವುದೇ ಕಂಪೆನಿಗೆ ಅರ್ಜಿ ಹಾಕುವಾಗ ಕೂಲಂಕಶವಾಗಿ ಜಾಬ್‌ ಡಿಸ್ಕ್ರಿಪ್ಷನ್‌ ಅನ್ನು ಒಮ್ಮೆ ಜಾಗರೂಕತೆಯಿಂದ ಓದಿ ಅರ್ಥಮಾಡಿಕೊಳ್ಳುವುದು ಒಳಿತು. ಏಕೆಂದರೆ ಕೆಲವು ಕಂಪೆನಿಗಳಿಗೆ ಬಹಳ ಅರ್ಹತೆಗಳಿರುವ ಅಭ್ಯರ್ಥಿಗಳು ಬೇಕಾಗಿರುವುದಿಲ್ಲ ಹಾಗಾಗಿ ಯಾವುದೇ ಕಂಪೆನಿಗೆ ಅರ್ಜಿ ಹಾಕುವ ಮೊದಲು ಕಂಪೆನಿಯ ವಿವರಗಳನ್ನು ವೆಬ್‌ಸೈಟ್‌ಗಳಲ್ಲಿ ತಿಳಿದುಕೊಳ್ಳಬೇಕು. ಆನಂತರ ಅವಶ್ಯಕತೆ ಇದ್ದರೆ ಮಾತ್ರ ಸರ್ಟಿಫಿಕೇಟ್ ಕೋರ್ಸ್‌ಗಳ ವಿವರಣೆ ಕೊಡುವುದು ಸೂಕ್ತ. ಕೊನೆಯದಾಗಿ ಫೈನಾನ್ಸ್‌ ವಿಷಯವೆಂಬುದು ಸಾಗರವಿದ್ದಂತೆ ಈ ದಿನ ಪ್ರಸ್ತುತವೆನಿಸಿದ ವಿಷಯ ನಾಳೆ ಅಪ್ರಸ್ತುತವೆನಿಸುತ್ತದೆ. ಬಹಳ ವೇಗವಾಗಿ ಬದಲಾವಣೆಗಳು ಆಗುತ್ತಿರುವ ಕಾಲಘಟ್ಟ ವಾಗಿದೆ. ಹೀಗಿರುವಾಗ ವಿದ್ಯಾರ್ಥಿಗಳು ಈ ವಿಷಯದ ಬಗ್ಗೆ ಒಂದು ತರಹದ ಕುತೂಹಲವನ್ನು ಬೆಳೆಸಿಕೊಂಡಲ್ಲಿ ನೀವು ಆರಿಸಿಕೊಂಡ ಉದ್ಯೋಗ ತುಂಬಾ ಸಲೀಸಾಗಿ ಸಂಪಾದಿಸುವುದಲ್ಲದೇ ಹಾಗೂ ನೀವು ಬಹಳ ಎತ್ತರದ ಮಟ್ಟವನ್ನು ತಲುಪುವಿರಿ. (ಲೇಖಕರು ಹರಿಹರದ ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.