ಉದ್ಯೋಗ ಅವಕಾಶ ಅಲ್ಲಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌, ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ, ಇಂಡೊ ಟಿಬೆಟನ್‌ ಬಾರ್ಡರ್‌ ಪೊಲೀಸ್‌, ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಜೇಷನ್‌ ಕರ್ನಾಟಕ ರಾಜ್ಯ ಪೊಲೀಸ್‌ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 822 ವಿಶೇಷ ರಿಸರ್ವ್‌ ಪೊಲೀಸ್‌ ಕಾನ್‌ಸ್ಟೆಬಲ್‌ (ಕೆಎಸ್‌ಆರ್‌ಪಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06/10/2015 . ಹುದ್ದೆ ಹೆಸರು: ವಿಶೇಷ ರಿಸರ್ವ್‌ ಪೊಲೀಸ್‌ ಕಾನ್‌ಸ್ಟೆಬಲ್‌ (ಪುರುಷ-731 ಹುದ್ದೆ ಹಾಗೂ ಮಹಿಳೆ–91 ಹುದ್ದೆ). ಹುದ್ದೆ ವಿವರ: 1) 1ನೇ ಬೆಟಾಲಿಯನ್‌ ಬೆಂಗಳೂರು: 177 (ಪುರುಷರು) ಹುದ್ದೆಗಳು, 2) 3ನೇ ಬೆಟಾಲಿಯನ್‌ ಬೆಂಗಳೂರು: 154 ಹುದ್ದೆ, 3) 4ನೇ ಬೆಟಾಲಿಯನ್‌ ಬೆಂಗಳೂರು: 142 ಹುದ್ದೆ (ಪುರುಷರು), 91 ಹುದ್ದೆ (ಮಹಿಳೆಯರು), 4) 6ನೇ ಬೆಟಾಲಿಯನ್ ಕಲಬುರ್ಗಿ: 79 ಹುದ್ದೆ, 5) 9ನೇ ಬೆಟಾಲಿಯನ್‌ ಬೆಂಗಳೂರು: 179 ಹುದ್ದೆ. ವೇತನ ಶ್ರೇಣಿ: ರೂ.11600 ರಿಂದ 21000 ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷ. ಅರ್ಜಿ ಶುಲ್ಕ: ರೂ. 250, ಎಸ್‌.ಸಿ/ಎಸ್‌.ಟಿ: ರೂ. 100 * ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 07/10/2015 ಆಯ್ಕೆ ವಿಧಾನ: ಎಂಡ್ಯುರೆನ್ಸ್‌, ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ. * ಬೆಂಗಳೂರು ಹಾಗೂ ಕಲಬುರ್ಗಿಯಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ: ... *** ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ ಎಎಐನಲ್ಲಿ 598 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು 03/10/2015ರಿಂದ 13/10/2015ರೊಳಗೆ ಪೂರ್ಣಗೊಳಿಸಬೇಕು. ಹುದ್ದೆ ವಿವರ: ಜೂನಿಯರ್‌ ಎಕ್ಸಿಕ್ಯೂಟೀವ್‌ (ಏರ್‌ ಟ್ರಾಫಿಕ್‌ ಕಂಟ್ರೋಲ್: 400 ಹುದ್ದೆಗಳು, ಎಲೆಕ್ಟ್ರಾನಿಕ್ಸ್‌: 198 ಹುದ್ದೆಗಳು) ವಿದ್ಯಾರ್ಹತೆ: ಏರ್‌ ಟ್ರಾಫಿಕ್‌ ಕಂಟ್ರೋಲ್‌: ಶೇಕಡಾ 60 ಅಂಕಗಳೊಂದಿಗೆ ಪೂರ್ಣಾವಧಿಯ ಮೂರು ವರ್ಷಗಳ ಬಿಎಸ್ಸಿ (ಫಿಜಿಕ್ಸ್‌ ಮತ್ತು ಮೆಥಮೆಟಿಕ್ಸ್) ಪದವಿ. ಎಲೆಕ್ಟ್ರಾನಿಕ್ಸ್‌: ಶೇಕಡಾ 60 ಅಂಕಗಳೊಂದಿಗೆ ಪೂರ್ಣಾವಧಿಯ ಮೂರು ವರ್ಷಗಳ ಎಂಜಿನಿಯರಿಂಗ್‌/ಟೆಕ್ನಾಲಜಿ (ಬಿ.ಇ/ಬಿ.ಟೆಕ್‌) ಪದವಿ (ಎಲೆಕ್ಟ್ರಾನಿಕ್ಸ್‌/ಟೆಲಿಕಮ್ಯೂನಿಕೇಷನ್‌/ಎಲೆಕ್ಟ್ರಿಕಲ್‌) ವೇತನ ಶ್ರೇಣಿ: ರೂ. 16400ರಿಂದ 40500 ವಯೋಮಿತಿ: 27 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 500 ಆಯ್ಕೆ ವಿಧಾನ: ಏರ್‌ ಟ್ರಾಫಿಕ್‌ ಕಂಟ್ರೋಲ್‌: ಆನ್‌ಲೈನ್‌ ಪರೀಕ್ಷೆ, ವಾಯ್ಸ್‌ ಟೆಸ್ಟ್‌, ಸಂದರ್ಶನ. ಎಲೆಕ್ಟ್ರಾನಿಕ್ಸ್‌: ಜಿಎಟಿಇ (ಗೇಟ್)- 2014 ಅಥವಾ 2015 ಪರೀಕ್ಷೆಯಲ್ಲಿ ಪಡೆದ ಅಂಕ ಹಾಗೂ ಸಂದರ್ಶನ. ಹೆಚ್ಚಿನ ಮಾಹಿತಿಗೆ: .. *** ಇಂಡೊ ಟಿಬೆಟನ್‌ ಬಾರ್ಡರ್‌ ಪೊಲೀಸ್‌ ಐಟಿಬಿಪಿನಲ್ಲಿ 500 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25/10/2015. ಹುದ್ದೆ ಹೆಸರು: ಇನ್‌ಸ್ಟೆಕ್ಟರ್‌ ಜನರಲ್‌ ಡ್ಯೂಟಿ. ವೇತನ ಶ್ರೇಣಿ: ರೂ. 9300ರಿಂದ 34800. ವಯೋಮಿತಿ: 52 ವರ್ಷ ದಾಟಿರಬಾರದು. ವಿಳಾಸ: ಸೀನಿಯರ್‌ ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌, ಡೈರೆಕ್ಟೊರೇಟ್‌ ಜನರಲ್‌, ಐಟಿಬಿಪಿ, ಎಂಎಚ್‌ಎ/ಭಾರತ ಸರ್ಕಾರ, ಬ್ಲಾಕ್‌: 2, ಸಿಜಿಒ ಕಾಂಪ್ಲೆಕ್ಸ್‌, ಲೋದಿ ರಸ್ತೆ, ನವದೆಹಲಿ: 110003 ಹೆಚ್ಚಿನ ಮಾಹಿತಿಗೆ: ://../ *** ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಜೇಷನ್‌ ಇಸ್ರೊದಲ್ಲಿ 112 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24/09/2015. ಹುದ್ದೆ ವಿವರ: ವಾಹನ ಚಾಲಕರು (ಲೈಟ್‌ ವೆಹಿಕಲ್‌ ಡ್ರೈವರ್‌: 69 ಹುದ್ದೆ, ಹೆವಿ ವೆಹಿಕಲ್‌ ಡ್ರೈವರ್‌: 40 ಹುದ್ದೆ, ಸ್ಟಾಫ್‌ ಕಾರು ಚಾಲಕ: 03 ಹುದ್ದೆ) ವೇತನ ಶ್ರೇಣಿ: ರೂ.5200ರಿಂದ 20200 ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ/ಮೆಟ್ರಿಕ್‌/10ನೇ ತರಗತಿ ಉತ್ತೀರ್ಣ ವಯೋಮಿತಿ: 35 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 100 ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನಾಂಕ: 30/09/2015 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ ಹಾಗೂ ಸಂದರ್ಶನ * ಪರೀಕ್ಷೆ ದಿನಾಂಕ: 08/11/2015, ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. * ಅರ್ಜಿ ಶುಲ್ಕ ಕಟ್ಟಿದ ಚಲಾನ್‌ ಕಳುಹಿಸಲು ಕೊನೆಯ ದಿನಾಂಕ: 07/10/2015 ವಿಳಾಸ: ಸೀನಿಯರ್‌ ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌ (ರಿಕ್ರೂಟ್‌ಮೆಂಟ್‌), ಇಸ್ರೊ ಸ್ಯಾಟೆಲೈಟ್‌ ಸೆಂಟರ್‌, ಪಿ.ಬಿ.ನಂ: 1795, ಎಚ್‌ಎಎಲ್ ಏರ್‌ಪೋರ್ಟ್‌ ರಸ್ತೆ, ವಿಮಾನಪುರ ಪೋಸ್ಟ್‌, ಬೆಂಗಳೂರು: 560017. ಹೆಚ್ಚಿನ ಮಾಹಿತಿಗೆ: ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.