ಕ್ರೀಡಾ ಕ್ವಿಜ್‌ 1) ಭಾರತ ‘ಎ’ ತಂಡ ಅಸ್ತಿತ್ವಕ್ಕೆ ಬಂದಿದ್ದು ಯಾವಾಗ? 2) ಅಸ್ತಿತ್ವಕ್ಕೆ ಬಂದ ನಂತರ ಮೊದಲ ಪಂದ್ಯ ಆಡಿದ್ದು ಯಾವ ವರ್ಷ? 3) ಭಾರತ ‘ಎ’ ತನ್ನ ಚೊಚ್ಚಲ ಪಂದ್ಯವನ್ನು ಯಾವ ತಂಡದ ಎದುರು ಆಡಿತು? 4) ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ‘ಎ’ ಎದುರಿನ ಸರಣಿಗೆ ನಾಯಕ ಯಾರು? 5) ಜೂನಿಯರ್‌ ಹಾಗೂ 19 ವರ್ಷದ ಒಳಗಿನವರ ತಂಡಕ್ಕೆ ಇತ್ತೀಚೆಗೆ ಕೋಚ್‌ ಆಗಿ ನೇಮಕವಾಗಿದ್ದು ಯಾರು? 6) ‘ಎ’ ತಂಡ ಆಡುವ ಪಂದ್ಯವನ್ನು ಯಾವ ದರ್ಜೆ ಪಂದ್ಯ ಎಂದು ಪರಿಗಣಿಸಲಾಗುತ್ತದೆ? 7) 19 ವರ್ಷದ ಒಳಗಿನವರ ಭಾರತ ತಂಡ ಅಸ್ತಿತ್ವಕ್ಕೆ ಬಂದ ವರ್ಷ? 8) ಭಾರತ ‘ಎ’ ತಂಡ ಮೊದಲ ಪಂದ್ಯ ಆಡಿದ್ದು ಯಾವ ಕ್ರೀಡಾಂಗಣದಲ್ಲಿ? 9) 19 ವರ್ಷದ ಒಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಎಷ್ಟು ಸಲ ಪ್ರಶಸ್ತಿ ಜಯಿಸಿದೆ? 10) 2012ರ ವಿಶ್ವಕಪ್‌ನಲ್ಲಿ ಚಾಂಪಿಯನ್ ಆದಾಗ ಭಾರತ ತಂಡದ ನಾಯಕ ಯಾರಾಗಿದ್ದರು? ಉತ್ತರಗಳು 1) 1992 2) 1995 3) ಇಂಗ್ಲೆಂಡ್‌ ‘ಎ’ 4) ಚೇತೇಶ್ವರ ಪೂಜಾರ 5) ರಾಹುಲ್‌ ದ್ರಾವಿಡ್‌ 6) ಲಿಸ್ಟ್‌ ಎ 7) 1979 8) ಚಿನ್ನಸ್ವಾಮಿ ಕ್ರೀಡಾಂಗಣ 9) ಮೂರು 10) ಉನ್ಮುಕ್ತ್‌ ಚಾಂದ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.