ಕ್ರೀಡಾ ಕ್ವಿಜ್ 1) ಮೊದಲ ಯೂತ್‌ ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆದದ್ದು ಯಾವಾಗ? 2) ಈ ಕ್ರೀಡಾಕೂಟದಲ್ಲಿ ಗರಿಷ್ಠ ಎಷ್ಟು ರಾಷ್ಟ್ರಗಳಿಗೆ ಪಾಲ್ಗೊಳ್ಳಲು ಅವಕಾಶವಿದೆ? 3) ಚೊಚ್ಚಲ ಕ್ರೀಡಾಕೂಟ ನಡೆದದ್ದು ಎಲ್ಲಿ? 4) ಈ ಕ್ರೀಡಾಕೂಟ ಎಷ್ಟು ವರ್ಷಗಳಿಗೊಮ್ಮೆ ಜರುಗುತ್ತದೆ? 5) 2008ರ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಭಾರತದ ಯಾವ ನಗರ ಆತಿಥ್ಯ ವಹಿಸಿತ್ತು? 6) ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್‌ ಸೇರ್ಪಡೆ ಮಾಡಿದ ವರ್ಷ ಯಾವುದು? 7) 2015ರ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಗಳು ಎಷ್ಟು? 8) ಕರ್ನಾಟಕದ ಎಂ.ಆರ್‌. ಪೂವಮ್ಮ 2008ರ ಕ್ರೀಡಾಕೂಟದ ಯಾವ ವಿಭಾಗದಲ್ಲಿ ಚಿನ್ನ ಜಯಿಸಿದ್ದರು? 9) ಮೊದಲ ಕ್ರೀಡಾಕೂಟದಲ್ಲಿ ಒಟ್ಟು ಹೆಚ್ಚು ಪದಕಗಳನ್ನು ಜಯಿಸಿದ್ದ ರಾಷ್ಟ್ರ ಯಾವುದು? 10) 2004ರ ಕ್ರೀಡಾಕೂಟದಲ್ಲಿ ಎಷ್ಟು ಕ್ರೀಡೆಗಳನ್ನು ಸೇರ್ಪಡೆ ಮಾಡಲಾಯಿತು? * ಉತ್ತರಗಳು: 1) 2000 2) 71 3) ಸ್ಕಾಟ್ಲೆಂಡ್‌ನ ಎಡಿನ್‌ಬರೊ 4) ನಾಲ್ಕು ವರ್ಷಗಳು 5) ಪುಣೆ 6) 2004 7) 63 8) 4X400 ಮೀಟರ್ಸ್‌ ರಿಲೇ 9) ಇಂಗ್ಲೆಂಡ್‌ 10) ಹತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.