ನಾಮಪದದ ಆಚೆ–ಈಚೆ ಸುಸಂಕೃತ ಅಪರಿಚಿತರು ಪರಸ್ಪರ ಪರಿಚಯ ಮಾಡಿಕೊಳ್ಳುವಾಗ, ನಿಮ್ಮ ಅನುಭವಕ್ಕೆ ಬಂದಿರಬಹುದಾದ ಒಂದು ಉವಾಚದ ಬಗ್ಗೆ ಹೇಳುವುದಾದರೆ, ನಿಮ್ಮ ಹೆಸರೇನು? ಎಂದು ಕೇಳುವುದು ಒಂದು ರೂಢಿ. ‘ನಾಮ’ ವೆಂದರೆ ಹೆಸರನ್ನು ಸೂಚಿಸುವ ಪದ. ಮನುಷ್ಯರು, ಗಿಡ ಮರಗಳು ಮತ್ತು ಎಲ್ಲಾ ಜೀವಿ ವರ್ಗಗಳ ಹೆಸರುಗಳು, ವಿಷಯಗಳ, ಕ್ರಿಯೆಗಳ, ಗುಣಲಕ್ಷಣಗಳ, ಅಸ್ತಿತ್ವದ ಮತ್ತು ಕಲ್ಪನೆಗಳ ಹೆಸರುಗಳು. ಈ ಎಲ್ಲಾ ಹೆಸರುಗಳನ್ನು 9 ವಿಧದ ಗುಂಪುಗಳಲ್ಲಿ ವರ್ಗೀಕರಿಸಲಾಗಿದೆ. ಒಂದಿಷ್ಟು ನಾಮಪದದ ವೃತ್ತಾಂತವನ್ನು ಗಮನಿಸೋಣ. ಇಂಗ್ಲಿಷ್ ಭಾಷೆಯಲ್ಲಿ ನಾಮಪದಕ್ಕೆ ಎಂದು ಕರೆಯುತ್ತಾರೆ. ಇಂಗ್ಲಿಷ್‌ನ ಎಂಬ ಪದವು ಲ್ಯಾಟಿನ್ ಭಾಷೆಯ ಎಂಬ ಪದದ ರೂಪಾಂತರ. ಇಂಗ್ಲಿಷ್ ಭಾಷೆಯ ಎಲ್ಲಾ ಪದಗಳನ್ನು ವರ್ಗೀಕರಿಸಿದಾಗ, ಎಂಬ ಪದವೂ ಎಂಟು ವಿಧದ ಪದಗಳ ವರ್ಗಗಳಲ್ಲಿ ಒಂದು ವರ್ಗಕ್ಕೆ ಸಂಬಂಧಿಸಿರುತ್ತದೆ. ವಾಕ್ಯದಲ್ಲಿ ನಾಮಪದವು ಕರ್ತೃಪದವಾಗಿರಬಹುದು, ಕರ್ಮಪದವಾಗಿರಬಹುದು ಮತ್ತು ಉಪಸರ್ಗಾವ್ಯಯದ ಕರ್ಮಪದವಾಗಿರಬಹುದು. ಎಣಿಸಲು ಬರುವ ಏಕವಚನ ರೂಪದ ನಾಮಪದವಾಗಿದ್ದರೆ, ಅದರ ಮೊದಲಿಗೆ , ಅಥವಾ ಎಂಬ ಉಪಪದವು ಬರುತ್ತದೆ. (ಬರದಿರಲು ಕೂಡ ಕೆಲವು ಕಾರಣಗಳಿವೆ. ಇವುಗಳ ಬಗ್ಗೆ ಕೂಡ ಮುಂಬರುವ ಪಾಠಗಳಲ್ಲಿ ತಿಳಿಯುವಿರಿ. ಎಂಬ ಉಪಪದದ ಬಳಕೆಯ ಬಗ್ಗೆಯು ಕೂಡ ಮುಂಬರುವ ಪಾಠಗಳಲ್ಲಿ ತಿಳಿಯುವಿರಿ.) ನಾಮಪದಗಳ ವರ್ಗೀಕರಣ / ನಾಮಪದಗಳನ್ನು ಈ ಕೆಳಗೆ ವಿವರಿಸಿರುವಂತೆ ಒಂಬತ್ತು ಗುಂಪುಗಳಲ್ಲಿ ವರ್ಗೀಕರಿಸಲಾಗಿದೆ. *ರೂಢನಾಮಗಳು / *ಅಂಕಿತನಾಮಗಳು / *ಎಣಿಸಲು ಬರುವ ನಾಮಪದಗಳು/ *ಎಣಿಸಲು ಬಾರದ ನಾಮಪದಗಳು/ *ಸಂಯುಕ್ತ ನಾಮಪದಗಳು / *ಸಮೂಹ ವಾಚಕ ನಾಮಪದಗಳು/ *ಸಾಕಾರ ನಾಮಪದಗಳು/ *ಭೌತಿಕ ನಾಮಪದಗಳು/* *ಭಾವಸೂಚಕ ನಾಮಪದಗಳು/ ರೂಢನಾಮಗಳು/ ಭಾಷೆಯು ಹುಟ್ಟಿದಾಗಿನಿಂದಲೂ ರೂಢಿಗತವಾಗಿ ಬಳಕೆಯಲ್ಲಿರುವ ಹೆಸರುಗಳನ್ನು ರೂಢನಾಮಗಳೆಂದು ಕರೆಯುತ್ತೇವೆ. ಈ ಹೆಸರುಗಳನ್ನು ಬದಲಾಯಿಸಲು ಬರುವುದಿಲ್ಲ. ಸಾಮಾನ್ಯವಾಗಿ ಬಳಕೆಯಲ್ಲಿ ಕಾಣಬರುವ ಹೆಸರುಗಳು ರೂಢನಾಮಗಳಾಗಿರುತ್ತವೆ. ಎಲ್ಲಾ ವರ್ಗದ ಜೀವಿಗಳು, ನಿರ್ಜೀವ ವಸ್ತುಗಳು, ಸ್ಥಳಗಳು, ನದಿಗಳು, ಪರ್ವತಗಳು ಮತ್ತು ಪಂಚೇಂದ್ರಿಯಗಳಿಂದ ಗುರ್ತಿಸಲಾಗದ ವಿಷಯಗಳನ್ನು ಎಳ್ಳಷ್ಟು ಸಂಶಯಕ್ಕೆ ಒಳಗಾಗದಿರುವಂತೆ, ನಿಖರವಾಗಿ ಗುರ್ತಿಸಲು ಸಹಕಾರಿ ಎನಿಸುವ, ಬಳಸುವ ಪದಗಳನ್ನು ರೂಢನಾಮಗಳೆಂದು ತಿಳಿಯಲಾಗುತ್ತದೆ. ಉದಾಹರಣೆಗಳು: ಮಾನವ/, ಹಕ್ಕಿ/, ಕುರ್ಚಿ/, ಗೋಡೆ/, ಗ್ರಾಮ/, ಮನೆ/, ನದಿ/, ಸರೋವರ/, ಬೆಟ್ಟ/, ದುಃಖ/, ಪ್ರೀತಿ/. ಕೆಲವೊಮ್ಮೆ ಕೆಲವೊಂದು ಪದಗಳು ಒಂದೇ ಅರ್ಥವನ್ನು ಸೂಚಿಸುವ ವಿಭಿನ್ನ ರೂಪದ ರೂಢನಾಮಗಳಾಗಿ ಕಂಡುಬರುತ್ತವೆ. ಉದಾಹರಣೆಗೆ: ನೀರು ಮತ್ತು ಜಲ ಈ ಎರಡೂ ಪದಗಳು ನೀಡುವ ಅರ್ಥವು ಒಂದೆ ಎಂದರೆ, ಒಂದೇ ಅರ್ಥಕ್ಕೆ ಎರಡು ರೂಢನಾಮಗಳು. ಇಂತಹ ಹಲವು ಉದಾಹರಣೆಗಳನ್ನು ಕೆಳಗೆ ಕಾಣುವಿರಿ. ಗಾಳಿ-ವಾಯು /, ನೆತ್ತರು-ರಕ್ತ/, ಮನುಷ್ಯ-ಮಾನವ/, ಬಳ್ಳಿ-ಲತೆ / ಆಡುಭಾಷೆಯಲ್ಲಿ ಕಂಡುಬರುವ ಅನೇಕ ರೂಢನಾಮಗಳು ಗ್ರಾಂಥಿಕ ಭಾಷೆಯಲ್ಲಿ ಸಮಾನರ್ಥದ ಬೇರೆ ಬೇರೆ ಹೆಸರುಗಳನ್ನು ಪಡೆದಿರುತ್ತವೆ. ಹಾಗಾಗಿ ವಿದ್ಯಾಕಾಂಕ್ಷಿಗಳು ಕನ್ನಡ ಸಾಹಿತ್ಯದ ಎಲ್ಲ ಪ್ರಾಕಾರಗಳನ್ನು ಅಭ್ಯಾಸ ಮಾಡುವುದರಿಂದ ಶಬ್ಧ ಸಂಪತ್ತು ಹೆಚ್ಚುವುದಲ್ಲದೆ, ವಾಕ್ಯರಚನೆಯ ಕೌಶಲವೂ ವೃದ್ಧಿಗೊಂಡು ನೀವು ನಡೆಸುವ ಸಂವಾದದಲ್ಲಿ ಪ್ರತಿಫಲನಗೊಳ್ಳುವಂತೆ ಶ್ರಮಿಸುವುದು ತೀರಾ ಅವಶ್ಯಕ. ಈ ಮಾತು ಇಂಗ್ಲಿಷ್ ಭಾಷೆಯ ಕಲಿಕೆಗೂ ಅನ್ವಯಿಸುತ್ತದೆ. ಅಂಕಿತನಾಮಗಳು / ಮಗುವೊಂದು ಹುಟ್ಟಿದಾಗ ಅದಕ್ಕೊಂದು ಹೆಸರು ಅಂಟಿಕೊಂಡು ಬಂದಿರುವುದಿಲ್ಲ. ನಾಮಕರಣ ಸಮಾರಂಭದಲ್ಲಿ ಮಗುವಿಗೆ ಮನೆಯ ಸದಸ್ಯರು ಎರಡು ಮೂರು ಹೆಸರುಗಳಿಂದ ಕರೆಯುತ್ತಾರೆ. ಸಾಮಾನ್ಯವಾಗಿ ಶಾಲೆಯಲ್ಲಿ ನೊಂದಾಯಿಸಿರುವ ಹೆಸರೇ ಅಧಿಕೃತವಾಗಿರುತ್ತದೆ. ಕಾಲಾಂತರದಲ್ಲಿ ಯಾವುದೇ ಒಂದು ವಿಶಿಷ್ಟ ಕಾರಣಕ್ಕಾಗಿ ಹೆಸರನ್ನು ಬದಲಾಯಿಸುವ ಅನಿವಾರ್ಯತೆ ಕಂಡುಬಂದಾಗ, ಬೇರೊಂದು ಹೆಸರಿನಿಂದ ಕರೆಯಬಹುದಾಗಿದೆ. ಇದೇ ರೀತಿ ಊರುಗಳ ಹೆಸರುಗಳು, ರಸ್ತೆಗಳ ಹೆಸರುಗಳು, ಕಟ್ಟಡಗಳ ಹೆಸರುಗಳು, ಇಲಾಖೆಗಳ ಹೆಸರುಗಳು, ಅಧಿಕಾರಿಗಳ ಹೆಸರುಗಳು ಇತ್ಯಾದಿ ಹೆಸರುಗಳನ್ನು ನಾಮಕರಣ ಮಾಡಬಹುದಾಗಿದೆ. ಮತ್ತು ಬದಲಾಯಿಸಬಹುದಾಗಿದೆ. ಈ ರೀತಿಯ ಹೆಸರುಗಳನ್ನು ಅಂಕಿತ ನಾಮಗಳೆಂದು ಕರೆಯಲಾಗುತ್ತದೆ. ಅಂಕಿತ ನಾಮಪದದ ಮೊದಲನೇ ಅಕ್ಷರವು ದೊಡ್ಡ ಅಕ್ಷರ / * ವಾಗಿರುತ್ತದೆ. ಮತ್ತೆ ಈ ಅಂಕಿತ ನಾಮದ ಮುಂದೆ ಆಗಲಿ ಅಥವಾ ಹಿಂದೆ ಆಗಲಿ ಒಂದು ರೂಢನಾಮವು ಗೋಚರಿಸಬಹುದು. ಇದಕ್ಕೊಂದು ಉದಾಹರಣೆಯೆಂದರೆ, ಇನ್ನೊಂದು ಉದಾಹರಣೆ ಈ ಮೇಲಿನ ಎರಡು ಉದಾಹರಣೆಗಳನ್ನು ನೋಡಿದಾಗ ಅಂಕಿತನಾಮಗಳಾದ ಮತ್ತು ಈ ಪದಗಳ ಹಿಂದೆ ಮತ್ತು ಮುಂದೆ ಬಂದಿರುವ ಮತ್ತು ಎಂಬವು ರೂಢನಾಮಗಳು. ಅಂಕಿತನಾಮಗಳಿಗೆ ಬಹುವಚನ ರೂಪಗಳಿರುವುದಿಲ್ಲ. ಅಂಕಿತನಾಮವು ವಾಕ್ಯದ ಪ್ರಾರಂಭದಲ್ಲಿ ಮಧ್ಯದಲ್ಲಿ ಮತ್ತು ಕೊನೆಯಲ್ಲಿ ಬಂದಾಗಲೂ ಕೂಡಾ ಆ ಅಂಕಿತನಾಮದ ಮೊದಲನೇ ಅಕ್ಷರವು ದೊಡ್ದ ಅಕ್ಷರ/* ಆಗಿರುತ್ತದೆ. ಉದಾಹರಣೆಗಳು/ , , , , , , , . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.