ಕ್ರೀಡಾ ಕ್ವಿಜ್‌ ರಷ್ಯಾದ ಅಥ್ಲೀಟ್‌ಗಳು ಉದ್ದೀಪನ ಮದ್ದು ಸೇವನೆ ಮಾಡಿದ್ದಾರೆ ಎನ್ನುವ ಸ್ವತಂತ್ರ್ಯ ತನಿಖಾ ಆಯೋಗದ ವರದಿ ಅಥ್ಲೆಟಿಕ್‌ ವಲಯದಲ್ಲಿ ಭಾರಿ ತಲ್ಲಣವನ್ನೇ ಉಂಟು ಮಾಡಿದೆ. ಮುಂದಿನ ವರ್ಷ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ರಷ್ಯಾಕ್ಕೆ ಅವಕಾಶ ಕೊಡಬಾರದು ಎಂದು ಆಯೋಗವು ಅಂತರರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ಗೆ ಶಿಫಾರಸು ಮಾಡಿದೆ. ಈ ಬಗ್ಗೆ ಇಲ್ಲೊಂದಿಷ್ಟು ಮಾಹಿತಿಯಿದೆ. 1) ನಾಡಾ ಪದದ ವಿಸ್ತರಣೆ ರೂಪ ಏನು? 2) ಉದ್ದೀಪನ ಮದ್ದು ಸೇವಿಸಿ ಅಶ್ವಿನಿ ಅಕ್ಕುಂಜಿ ಎಷ್ಟು ವರ್ಷ ನಿಷೇಧ ಶಿಕ್ಷೆ ಅನುಭವಿಸಿದರು. 3) ನಾಡಾ ಸ್ಥಾಪನೆಗೊಂಡ ವರ್ಷ ಯಾವುದು? 4) ವಾಡಾದ ವಿಸ್ತರಣೆ ರೂಪ ಏನು? 5) ನಾಡಾದ ಕೇಂದ್ರ ಕಚೇರಿ ಇರುವ ಸ್ಥಳ ಯಾವುದು? 6) ವಾಡಾದ ಮುಖ್ಯಸ್ಥ ಯಾರು? 7) ನಿಷೇಧಿತ ಮದ್ದು ಸೇವಿಸಿ ಎರಡು ವರ್ಷ ಶಿಕ್ಷೆಗೆ ಗುರಿಯಾಗಿದ್ದ ಭಾರತದ ಡಿಸ್ಕಸ್‌ ಎಸೆತ ಸ್ಪರ್ಧಿ ಯಾರು? 8) ಮದ್ದು ಸೇವನೆ ವಿವಾದದಲ್ಲಿ ಈಗ ಸಿಕ್ಕಿ ಬಿದ್ದಿರುವ ರಷ್ಯಾದ ಅಥ್ಲೀಟ್‌ 2012ರ ಲಂಡನ್‌ ಒಲಿಂಪಿಕ್ಸ್‌ನ 800 ಮೀಟರ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ಅವರು ಯಾರು? 9) ಉದ್ದೀಪನ ಮದ್ದು ಸೇವನೆ ತಡೆಘಟಕ ಸ್ವತಂತ್ರ್ಯ ಆಯೋಗದ ಮುಖ್ಯಸ್ಥ ಯಾರು? 10) ಮದ್ದು ಸೇವಿಸಿ ಮೂರು ಬಾರಿ ಸಿಕ್ಕಿಬಿದ್ದು ಆಜೀವ ನಿಷೇಧಕ್ಕೆ ಒಳಗಾದ ಇಟಲಿಯ ಅಥ್ಲೀಟ್‌ ಯಾರು? ಉತ್ತರಗಳು: 1) ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ 2) ಎರಡು ವರ್ಷ 3) 2005 4) ವಿಶ್ವ ಉದ್ದೀಪನಾ ಮದ್ದು ತಡೆ ಘಟಕ 5) ನವದೆಹಲಿ 6) ಕ್ರೇಗ್‌ ರೀಡಿ 7) ಅನಿಲ್‌ ಕುಮಾರ್ 8) ಮಾರಿಯಾ ಶಿವನೊವಾ 9) ರಿಚರ್ಡ್‌ ಪೌಂಡ್ 10) ರಾಬೆರ್ಟಾ ಬಾರ್ಡಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.