ಕ್ರೀಡಾ ಕ್ವಿಜ್ ಶರವೇಗದ ಚಾಲನೆ ಮೂಲಕ ರೇಸ್‌ ಪ್ರಿಯರಲ್ಲಿ ರೋಮಾಂಚನ ಮೂಡಿಸುವ ಫಾರ್ಮುಲಾ ಒನ್‌ ಸ್ಪರ್ಧೆಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ವಿಶ್ವ ಮೋಟಾರು ಕ್ರೀಡೆಗಳ ಫೆಡರೇಷನ್‌ ನವರು ನಿಯಮಾವಳಿ ರೂಪಿಸಲು ಮುಂದಾಗಿದ್ದಾರೆ. ಮೈ ಜುಮ್ಮೆನಿಸುವ ಈ ರೇಸ್‌ ಪ್ರತಿಯೊಬ್ಬರನ್ನೂ ಆಕರ್ಷಿಸುತ್ತಿದೆ. ಇದರ ಬಗ್ಗೆ ಇಲ್ಲಿದೆ ಮಾಹಿತಿ. 1) ಫಾರ್ಮಲಾ ಒನ್‌ ರೇಸ್‌ ಮೊದಲ ಆವೃತ್ತಿ ನಡೆದಿದ್ದು ಯಾವಾಗ? 2) ಈ ರೇಸ್‌ನಲ್ಲಿ ಹೆಸರು ಮಾಡಿರುವ ನಾರಾಯಣ ಕಾರ್ತಿಕೇಯನ್‌ ಯಾವ ಊರಿನವರು? 3) ಕಾರ್ತಿಕೇಯನ್‌ 2005ರಲ್ಲಿ ಮೊದಲ ಬಾರಿಗೆ ಫಾರ್ಮುಲಾ ಒನ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅದು ಯಾವ ದೇಶದಲ್ಲಿ ನಡೆದಿತ್ತು? 4) ಜರ್ಮನಿಯ ಸೆಬಾಸ್ಟಿಯನ್‌ ವೆಟೆಲ್‌ ಯಾವ ತಂಡವನ್ನು ಪ್ರತಿನಿಧಿಸುತ್ತಾರೆ? 5) ಹೋದ ವರ್ಷ ಅಮೆರಿಕ ಫಾರ್ಮಲಾ ಒನ್ ರೇಸ್‌ನಲ್ಲಿ ಗೆಲುವು ಪಡೆದ ಚಾಲಕ ಯಾರು? 6) ಫ್ರಾನ್ಸ್‌ನ ಮೆರಿಬಲ್‌ನಲ್ಲಿ ಸ್ಕೀಯಿಂಗ್ ಮಾಡುವಾಗ ಬಿದ್ದು ಗಂಭೀರವಾಗಿ ಗಾಯಗೊಂಡ ಜರ್ಮನಿಯ ಚಾಲಕ ಯಾರು? 7) ಎಫ್‌–1ಗೆ ಪದಾರ್ಪಣೆ ಮಾಡಿದ ವರ್ಷದಲ್ಲಿಯೇ ರನ್ನರ್ ಅಪ್‌ ಸ್ಥಾನ ಪಡೆದಿದ್ದ ಕೆನಡಾದ ಸ್ಪರ್ಧಿ ಯಾರು? 8) 2016ರ ರೇಸ್‌ಗಳಿಗೆ ಡೇನಿಯಲ್‌ ರಿಚಾರ್ಡೊ ಹಾಗೂ ಡಾನಿಲ್‌ ಕ್ವಯಟ್‌ ಅವರು ಯಾವ ತಂಡದ ಚಾಲಕರಾಗಿ ಕೆಲಸ ಮಾಡಲಿದ್ದಾರೆ? 9) ಎಫ್‌–1 ರೇಸ್‌ನಲ್ಲಿ ಮೊದಲ ಸ್ಥಾನ ಪಡೆಯುವ ಸ್ಪರ್ಧಿಗೆ ಲಭಿಸುವ ಪಾಯಿಂಟ್ಸ್ ಎಷ್ಟು? 10) ಮೈಕಲ್‌ ಶುಮಾಕರ್‌ ಎಫ್‌–1ನಲ್ಲಿ ಎಷ್ಟು ಬಾರಿ ಪ್ರಶಸ್ತಿ ಜಯಿಸಿದ್ದಾರೆ? ಉತ್ತರಗಳು 1) 1950 2) ಕೊಯಮತ್ತೂರು 3) ಆಸ್ಟ್ರೇಲಿಯಾ 4) ಫೆರಾರಿ 5) ಲೂಯಿಸ್‌ ಹ್ಯಾಮಿಲ್ಟನ್‌ 6) ಮೈಕಲ್‌ ಶುಮಾಕರ್‌ 7) ಜಾಕ್ವೆಸ್‌ ಜೋಸೆಫ್‌ ಚಾರ್ಲಸ್‌ 8) ರೆಡ್‌ ಬುಲ್‌ 9) 25 10) ಏಳು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.