ವಿವಿಧ ಕ್ರೀಡೆಗಳಲ್ಲಿ ಭಾರತದ ಯಶೋಗಾಥೆ *ಕೆ. ಶ್ರೀಕಾಂತ್‌ಗೆ ಸ್ವಿಸ್ ಓಪನ್ ಮತ್ತು ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ ಪ್ರಶಸ್ತಿ . *ವಿಶ್ವ ಬ್ಯಾಡ್ಮಿಂಟನ್‌ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸೈನಾ. *ಮ್ಯಾಡ್ರಿಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಹಾಗೂ ಫ್ಲೋರಿನ್‌ ಮಾರ್ಗಿಯಾ ಚಾಂಪಿಯನ್‌. *ಕೆನಡಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಅಶ್ವಿನಿ ಪೊನ್ನಪ್ಪ–ಜ್ವಾಲಾ ಗುಟ್ಟಾಗೆ ಪ್ರಶಸ್ತಿ. *ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಅಜಯ್‌ ಜಯರಾಮ್‌ಗೆ ಬೆಳ್ಳಿ. ಡಚ್‌ ಓಪನ್‌ನಲ್ಲಿ ಪ್ರಶಸ್ತಿ. *ಕಾಮನ್‌ವೆಲ್ತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಅಭಿಜಿತ್‌ ಗುಪ್ತಾಗೆ ಪ್ರಶಸ್ತಿ. *ಸೌತ್‌ ಏಷ್ಯನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿ ಪಡೆಯಿತು. *ವಿಕ್ಟೋರಿಯಾ ಓಪನ್‌ ಸ್ಕ್ವಾಷ್ ಟೂರ್ನಿಯಲ್ಲಿ ಜೋಷ್ನಾ ಚಿಣ್ಣಪ್ಪಗೆ ಪ್ರಶಸ್ತಿ. *ಆರ್ಚರಿ ವಿಶ್ವಕಪ್‌ನ ಕಾಂಪೌಂಡ್ ವಿಭಾಗದಲ್ಲಿ ಅಭಿಷೇಕ್‌ ವರ್ಮಾಗೆ ಬೆಳ್ಳಿ. *ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ನರಸಿಂಗ್ ಯಾದವ್ ಕಂಚು ಗೆದ್ದು ಒಲಿಂಪಿಕ್ಸ್‌ ಅರ್ಹತೆ ಪಡೆದರು. *ಏಷ್ಯನ್‌ ಏರ್‌ಗನ್‌ ಚಾಂಪಿಯನ್‌ಷಿಪ್‌ನ 10 ಮೀಟರ್ಸ್ ಏರ್‌ ಪಿಸ್ತೂಲ್ ಸ್ಪರ್ಧೆಯಲ್ಲಿ ಹೀನಾ ಸಿಧುಗೆ ಚಿನ್ನ. *ಪ್ಯಾರಾ ಗ್ಲೈಡಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಮೈಕಲ್‌ ಕುಫಿರ್‌ಗೆ ಮೊದಲ ಸ್ಥಾನ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.