ಕಬಡ್ಡಿ ಕಣದ ರಂಗು ಉದ್ಯಾನನಗರಿಯ ಹೋದ ವಾರ ಕಬಡ್ಡಿ ಆಟದ ಸೊಗಸು ಮೇಳೈಸಿತ್ತು. ಕಂಠೀರವ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಕಬಡ್ಡಿ ‘ಹಬ್ಬ’ದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್‌, ಯು ಮುಂಬಾ ಮತ್ತು ಪಟ್ನಾ ಪೈರೇಟ್ಸ್‌ ಸೇರಿದಂತೆ ವಿವಿಧ ತಂಡಗಳು ತಮ್ಮ ಕೆಚ್ಚೆದೆಯ ಆಟದ ಮೂಲಕ ಅಭಿಮಾನಿಗಳನ್ನು ಮನದಣಿಯೇ ರಂಜಿಸಿದವು. ಬಾಲಿವುಡ್‌ ನಟ ಹಾಗೂ ಲೀಗ್‌ನಲ್ಲಿ ಆಡುವ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದ ಮಾಲೀಕರೂ ಆಗಿರುವ ಅಭಿಷೇಕ್‌ ಬಚ್ಚನ್‌ ತಮ್ಮ ಪತ್ನಿ ಐಶ್ವರ್ಯ ರೈ ಮತ್ತು ಮಗಳು ಆರಾಧ್ಯಳೊಂದಿಗೆ ಪಂದ್ಯ ವೀಕ್ಷಿಸಿ ಅಭಿಮಾನಿಗಳ ಮನ ಗೆದ್ದರು. ನಟಿ ಪ್ರೀತಿ ಜಿಂಟಾ ಕೂಡ ಗ್ರಾಮೀಣ ಕ್ರೀಡೆಯ ಸೊಗಡನ್ನು ಕಣ್ತುಂಬಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.