ಕ್ರೀಡಾ ಕ್ವಿಜ್ 1) ಈ ಚಾಂಪಿಯನ್‌ಷಿಪ್‌ ಮೊದಲ ಬಾರಿಗೆ ನಡೆದಿದ್ದು ಯಾವಾಗ? 2) ಟೂರ್ನಿ ಎಲ್ಲಿ ನಡೆಯುತ್ತಿದೆ. 3) 2007ಕ್ಕೂ ಮೊದಲು ಈ ಚಾಂಪಿಯನ್‌ಷಿಪ್‌ ಅನ್ನು ಏನೆಂದು ಕರೆಯಲಾಗುತ್ತಿತ್ತು? 4) ಈ ಚಾಂಪಿಯನ್‌ಷಿಪ್‌ನಲ್ಲಿ ಆಡುವುದರಿಂದ ರ್‍ಯಾಂಕಿಂಗ್‌ ಪಾಯಿಂಟ್ಸ್‌ ಲಭಿಸುವುದಿಲ್ಲ. ಹಾಗಾದರೆ ಆಡುವ ಅಗತ್ಯವೇನಿದೆ ಎಂದು 2003ರಲ್ಲಿ ತಕರಾರು ತೆಗೆದಿದ್ದ ಚೀನಾ ತಂಡದ ಕೋಚ್‌ ಯಾರು? 5) ಏಷ್ಯನ್‌ ಚಾಂಪಿಯನ್‌ಷಿಪ್‌ಗೆ ಭಾರತದ ಯಾವ ನಗರ ಮೊದಲ ಬಾರಿಗೆ ಆತಿಥ್ಯ ವಹಿಸಿತ್ತು? 6) 2016ರ ಟೂರ್ನಿಯೂ ಸೇರಿದಂತೆ ಭಾರತದಲ್ಲಿ ಒಟ್ಟು ಎಷ್ಟು ಸಲ ಈ ಚಾಂಪಿಯನ್‌ಷಿಪ್‌ ನಡೆದಿದೆ? 7) ಈ ಚಾಂಪಿಯನ್‌ಷಿಪ್‌ ಮೊದಲ ಬಾರಿಗೆ ನಡೆದಿದ್ದು ಯಾವ ನಗರದಲ್ಲಿ? 8) 2015ರ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದವರು ಯಾರು? 9) ಹಿಂದಿನ ವರ್ಷದ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಲಿನ್‌ ಡಾನ್‌ ಯಾವ ದೇಶದ ಆಟಗಾರ? 10) ಈಗ ನಡೆಯುತ್ತಿರುವ ಏಷ್ಯನ್ ಚಾಂಪಿಯನ್‌ಷಿಪ್‌ ಎಷ್ಟನೇ ವರ್ಷದ್ದು? ಉತ್ತರಗಳು 1) 1962 2) ಹೈದರಾಬಾದ್‌ 3) ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್ 4) ಲೀ ಯೊಂಗ್ಡೊ 5) ಲಖನೌ 6) ಆರು 7) ಕ್ವಾಲಾಲಂಪುರ 8) ರಚಾನಕ್‌ ಇಂಟನಾನ್‌ 9) ಚೀನಾ 10) 36 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.