ಮೋಸದಾಟ... ಮರಿಯಾ ಶರಪೋವಾ ಉದ್ದೀಪನ ಮದ್ದು ಸೇವನೆ ಪ್ರಕರಣ ಟೆನಿಸ್‌ ಜಗತ್ತಿಗೆ ಆಘಾತ ಉಂಟುಮಾಡಿದರೆ, ಈ ಕ್ರೀಡೆ ಯಲ್ಲಿ ವ್ಯಾಪಕವಾಗುತ್ತಿರುವ ‘ಫಿಕ್ಸಿಂಗ್‌’ (ಮೋಸದಾಟ) ಕೂಡಾ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ವೃತ್ತಿಪರ ಟೆನಿಸ್‌ನಲ್ಲಿ ಮೊದಲ ಹಂತದ (ಫ್ಯೂಚರ್ಸ್‌) ಟೂರ್ನಿಯಿಂದ ಹಿಡಿದು ಗ್ರ್ಯಾಂಡ್‌ಸ್ಲಾಮ್‌ವರೆಗೆ ಕೆಲ ಸ್ಪರ್ಧಿಗಳು ಮೋಸದಾಟದಲ್ಲಿ ಭಾಗಿಯಾಗಿರುವ ಅನುಮಾನ ದಟ್ಟವಾಗಿದೆ. ‘ನ್ಯೂಯಾರ್ಕ್‌ ಟೈಮ್ಸ್‌’ನಲ್ಲಿ ಇತ್ತೀಚೆಗೆ ಪ್ರಕಟ ವಾದ ಲೇಖನವೊಂದು ಟೆನಿಸ್‌ನಲ್ಲಿ ಮೋಸದಾಟ ಹೇಗೆಲ್ಲಾ ನಡೆಯುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ. ‘ಫೇಸ್‌ಬುಕ್‌’ ಮೂಲಕ ಸಂಪರ್ಕಿ ಸಿದ್ದ ಬುಕ್ಕಿಯೊಬ್ಬ (ಪಂದ್ಯ ಫಿಕ್ಸ್‌ ಮಾಡುವವ) ಮೋಸದಾಟ ಯಾವ ರೀತಿ ಹರಡಿಕೊಂಡಿದೆ ಎಂಬುದನ್ನು ಎಳೆಎಳೆಯಾಗಿ ವಿವರಿಸಿದ್ದಾಗಿ ಲೇಖಕ ಬೆನ್‌ ರೊಥೆನ್‌ಬರ್ಗ್‌ ಹೇಳಿದ್ದಾರೆ. ‘ಎಟಿಪಿ ಚಾಲೆಂಜರ್‌ ಟೂರ್ನಿ ಯೊಂದರ ಪಂದ್ಯ ‘ಫಿಕ್ಸ್‌’ ಆಗಿರುವ ಬಗ್ಗೆ ಆತ ಮುಂಚಿತವಾಗಿ ಮಾಹಿತಿ ನೀಡಿದ್ದ. ಮಾತ್ರವಲ್ಲ, ಈ ಪಂದ್ಯದ ಸ್ಕೋರ್‌ ಅನ್ನು ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದ್ದು, ಅದನ್ನು ಗಮನಿ ಸುವಂತೆ ಸೂಚಿಸಿದ್ದ’ ಎಂದು ಅವರು ಬರೆದಿದ್ದಾರೆ. ‘ಒಬ್ಬ ಆಟಗಾರ ಎರಡನೇ ಸೆಟ್‌ನ ಎರಡನೇ ಸರ್ವೀಸ್‌ ಗೇಮ್‌ ಅನ್ನು ಎದುರಾಳಿಗೆ ಒಪ್ಪಿಸುತ್ತಾನೆ ಹಾಗೂ ಪಂದ್ಯದ ಅಂತಿಮ ಸ್ಕೋರ್‌ 6–0, 6–0 ಆಗಿರುತ್ತದೆ ಎಂದು ಹೇಳಿದ್ದ. ಎಲ್ಲವೂ ಆತ ಹೇಳಿದಂತೆ ನಡೆದಿದೆ’ ಎಂದು ಆ ಲೇಖನದಲ್ಲಿ ವಿವರಿಸಲಾಗಿದೆ. ಬುಕ್ಕಿಯೊಡನೆ ಮಾತುಕತೆ ನಡೆಸಿದ ನಂತರ ಲೇಖಕರು ಬರೆದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಗೇಮ್‌, ಸೆಟ್‌ಗಳು ಮತ್ತು ಅಂತಿ ಮವಾಗಿ ಪಂದ್ಯವನ್ನೇ ಯಾವ ರೀತಿ ಯಲ್ಲಿ ‘ಮಾರಾಟ’ ಮಾಡಲಾಗುತ್ತದೆ ಎಂಬುದನ್ನು ಆ ಬುಕ್ಕಿ ವಿವರಿಸಿದ್ದಾನೆ. ವೃತ್ತಿಪರ ಟೆನಿಸ್‌ನಲ್ಲಿ ಒಂದು ಹಂತದ ವರೆಗೆ ಆಡಿದ ಆಟಗಾರರೇ ಪಂದ್ಯ ‘ಫಿಕ್ಸ್‌’ ಮಾಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಫ್ಯೂಚರ್ಸ್‌ ಮತ್ತು ಎಟಿಪಿ ಟೂರ್ನಿಗಳಲ್ಲಿ ‘ಮೋಸದಾಟ’ ನಡೆದ ಹಲವು ಪಂದ್ಯಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಫ್ಯೂಚರ್ಸ್‌ ಟೂರ್ನಿಯಲ್ಲಿ ಒಂದು ಸರ್ವೀಸ್‌ ಬ್ರೇಕ್‌ ಅನ್ನು ಕೊಂಡು ಕೊಳ್ಳಲು (ಅಂದರೆ ಉದ್ದೇಶಪೂರ್ವಕ ವಾಗಿ ಸರ್ವೀಸ್‌ ಕಳೆದುಕೊಳ್ಳುವಂತೆ ಮನವೊಲಿಸಲು) ಆಟಗಾರನಿಗೆ 300 ರಿಂದ 500 ಡಾಲರ್‌ (₹ 20 ಸಾವಿರ ದಿಂದ ₹ 33 ಸಾವಿರ) ನೀಡಬೇಕು ಎಂದು ಆ ಬುಕ್ಕಿ ವಿವರಿಸಿದ್ದಾನೆ. ಒಂದು ಸೆಟ್‌ ಸೋಲುವಂತೆ ಆಟ ಗಾರನನ್ನು ಒಪ್ಪಿಸಲು 1000 ದಿಂದ 2000 ಡಾಲರ್‌ವರೆಗೆ (₹ 67 ಸಾವಿರ ದಿಂದ 1.30 ಲಕ್ಷ) ಮತ್ತು ಪಂದ್ಯವನ್ನೇ ಸೋಲುವಂತೆ ಮಾಡಲು 2000 ರಿಂದ 3000 ಡಾಲರ್‌ವರೆಗೆ (₹1.30 ಲಕ್ಷದಿಂದ 2 ಲಕ್ಷ) ನೀಡಬೇಕಾಗುತ್ತದೆ. ಎಟಿಪಿ ಮತ್ತು ಡಬ್ಲ್ಯುಟಿಎ ಟೂರ್ನಿ ಗಳಲ್ಲಿ ಈ ಮೊತ್ತ ಇನ್ನಷ್ಟು ಹೆಚ್ಚು. ಇಲ್ಲಿ ಒಂದು ಸೆಟ್‌ ಸೋಲುವಂತೆ ಮಾಡಲು ಆಟಗಾರನಿಗೆ 25 ಸಾವಿರ ಡಾಲರ್‌ (ಅಂದಾಜು ₹ 16 ಲಕ್ಷ) ಮತ್ತು ಪಂದ್ಯ ಸೋಲುವಂತೆ ಒಪ್ಪಿಸಲು 1 ಲಕ್ಷ ಡಾಲರ್‌ (ಅಂದಾಜು ₹ 66 ಲಕ್ಷ) ನೀಡ ಬೇಕಾಗುತ್ತದೆ. ‘ಫಲಿತಾಂಶವನ್ನು ಈ ರೀತಿ ಖರೀದಿ ಮಾಡುವುದು ಆಸಕ್ತಿಯ ಸಂಗತಿ’ ಎಂದು ಆ ಬುಕ್ಕಿ ಹೇಳಿದ್ದಾನೆ. ಒಂದು ಋತುವಿನಲ್ಲಿ ವಿಶ್ವದಾದ್ಯಂತ ಸುಮಾರು 1.20 ಲಕ್ಷಕ್ಕೂ ಅಧಿಕ ವೃತ್ತಿ ಪರ ಪಂದ್ಯಗಳು ನಡೆಯುತ್ತವೆ. ಇಲ್ಲಿ ನಡೆಯುವ ಮೋಸದಾಟದ ಪ್ರಮಾಣ ಎಷ್ಟಿರಬಹುದು ಎಂಬುದನ್ನು ಊಹಿಸು ವುದು ಅಸಾಧ್ಯ. ಬೆಟ್ಟಿಂಗ್‌ ಮಾರುಕಟ್ಟೆ ಯಲ್ಲಿ ಪ್ರತಿವರ್ಷವೂ ಸಾವಿರಾರು ಕೋಟಿ ಡಾಲರ್‌ಗಳು ಹರಿದಾಡುತ್ತವೆ. ***** * ಆರೋಪ ಸಾಬೀತು ಪಡಿಸಲು ಸಾಕ್ಷ್ಯಗಳ ಕೊರತೆ. * ಹಿಂದೆ ವೃತ್ತಿಪರ ಆಟಗಾರರಾಗಿದ್ದ ವರೂ ನಂತರ ಬುಕ್ಕಿಗಳಾಗಿಯೇ ಹೆಚ್ಚು ಹಣ ಗಳಿಸಿದ್ದಾರೆ. * ಆಟಗಾರರು ಮತ್ತು ಬುಕ್ಕಿಗಳ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಜಾಲವೇ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.