ಕ್ರೀಡಾ ಕ್ವಿಜ್ 1) ಎಂಟೂ ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ ಏಕೈಕ ನಾಯಕ ಎನ್ನುವ ಕೀರ್ತಿ ಯಾರ ಹೆಸರಿನಲ್ಲಿದೆ? 2) ಐಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಯಾರು? 3) ಈ ಟೂರ್ನಿಯಲ್ಲಿ ಪಂದ್ಯ ಟೈ ಆದರೆ ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ? 4) ಐಪಿಎಲ್‌ನಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಕೀರ್ತಿ ಲಕ್ಷ್ಮಿಪತಿ ಬಾಲಾಜಿ ಹೆಸರಿನಲ್ಲಿದೆ. ಬಾಲಾಜಿ ಯಾವ ತಂಡದ ವಿರುದ್ಧ ಈ ಸಾಧನೆ ಮಾಡಿದ್ದರು? 5) ಆರೇಂಜ್‌ ಕ್ಯಾಪ್‌ ಯಾರಿಗೆ ಕೊಡಲಾಗುತ್ತದೆ? 6) ಹೆಚ್ಚು ಪಂದ್ಯಗಳನ್ನು ಆಡಿದ ಕೀರ್ತಿ ಯಾವ ತಂಡದ ಹೆಸರಿನಲ್ಲಿದೆ? 7) ಸತತ ಹತ್ತು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ದಾಖಲೆ ಹೊಂದಿರುವ ತಂಡ ಯಾವುದು? 8) ಟೂರ್ನಿಯಲ್ಲಿ ಇದುವರೆಗು ಒಟ್ಟು ಹೆಚ್ಚು ರನ್ ಗಳಿಸಿರುವವರು ಯಾರು? 9) ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ ಕೀರ್ತಿ ಯಾರು ಹೊಂದಿದ್ದಾರೆ? 10) ಟೂರ್ನಿಯಲ್ಲಿ ಒಟ್ಟು ಹೆಚ್ಚು ವಿಕೆಟ್‌ಗಳನ್ನು ಪಡೆದವರು ಯಾರು? ಉತ್ತರಗಳು 1) ಮಹೇಂದ್ರ ಸಿಂಗ್ ದೋನಿ 2) ಬ್ರೆಂಡನ್‌ ಮೆಕ್ಲಮ್‌ 3) ಸೂಪರ್‌ ಓವರ್ ಮೂಲಕ 4) ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 5) ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದವರಿಗೆ 6) ಚೆನ್ನೈ ಸೂಪರ್‌ ಕಿಂಗ್ಸ್‌ಬ 7) ಕೋಲ್ಕತ್ತ ನೈಟ್ ರೈಡರ್ಸ್ 8) ಸುರೇಶ್ ರೈನಾ 9) ಯೂಸುಫ್‌ ಪಠಾಣ್‌ 10) ಲಸಿತ್ ಮಾಲಿಂಗ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.