ಅನನ್ಯ ಆಟಗಾರ ಬ್ರಯಾಂತ್‌ ವಿಶ್ವದ ಪ್ರತಿಯೊಬ್ಬ ಬ್ಯಾಸ್ಕೆಟ್‌ಬಾಲ್‌ ಆಟಗಾರನಿಗೂ ಎನ್‌ಬಿಎ ಟೂರ್ನಿಯಲ್ಲಿ ಆಡಬೇಕೆನ್ನುವ ದೊಡ್ಡ ಕನಸು ಇರುತ್ತದೆ. ಈ ಆಸೆ ಈಡೇರಿಸಿಕೊಳ್ಳಲು ಏನೆಲ್ಲಾ ಕಷ್ಟಪಡುತ್ತಾರೆ. ಹೋದ ವಾರ ವೃತ್ತಿಪರ ಬಾಕ್ಸಿಂಗ್‌ನಿಂದ ನಿವೃತ್ತಿಯಾದ ಅಮೆರಿಕದ ಕೋಬೆ ಬಿಯಾನ್ ಬ್ರಯಾಂತ್‌ 20 ವರ್ಷ ಬ್ಯಾಸ್ಕೆಟ್‌ಬಾಲ್‌ ಆಡಿದವರು. ಶೂಟಿಂಗ್ ಗಾರ್ಡ್‌ ಅವರ ನೆಚ್ಚಿನ ಪೊಸಿಷನ್‌ ಆಗಿತ್ತು. ಎನ್‌ಬಿಎನಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಆರು ಅಡಿ ಆರು ಇಂಚು ಎತ್ತರವಿರುವ 37 ವರ್ಷದ ಬ್ರಯಾಂತ್‌ ಅವರ ಮಟ್ಟಿಗೆ ಎತ್ತರವೇ ದೊಡ್ಡ ಆಸ್ತಿ. * 33,643 ಗಳಿಸಿದ ಒಟ್ಟು ಪಾಯಿಂಟ್ಸ್‌. * 7047 ಹೊಡೆದ ಒಟ್ಟು ರಿಬೌಂಡ್‌. * 60 ಕೊನೆಯ ಪಂದ್ಯದಲ್ಲಿ ಗಳಿಸಿದ ಪಾಯಿಂಟ್ಸ್‌. * 2008 ಮತ್ತು 2012ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದರು. * 2007ರ ಫಿಬಾ ಅಮೆರಿಕ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ ತಂಡದ ಸದಸ್ಯ. * 2008 ಎನ್‌ಬಿಎ ಟೂರ್ನಿಯಲ್ಲಿ ಹೆಚ್ಚು ಮೌಲ್ಯಯುತ ಆಟಗಾರ ಪ್ರಶಸ್ತಿ ಪಡೆದಿದ್ದರು. * 1996ರಲ್ಲಿ ಮೊದಲ ಬಾರಿಗೆ ಎನ್‌ಬಿಎ ಟೂರ್ನಿಯಲ್ಲಿ ಆಡಿದ್ದರು. * ಎನ್‌ಬಿಎನಲ್ಲಿ ಆಡಿದ ಮೊದಲ ಟೂರ್ನಿ ಸಮ್ಮರ್‌ ಪ್ರೊ ಲೀಗ್‌. * 1964ರ ಬಳಿಕ ಸತತ ನಾಲ್ಕು ಪಂದ್ಯಗಳಲ್ಲಿ 45 ಕ್ಕಿಂತಲೂ ಹೆಚ್ಚು ಪಾಯಿಂಟ್ಸ್‌ ಗಳಿಸಿದ ಮೊದಲ ಆಟಗಾರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.