ಕ್ರೀಡಾ ಕ್ವಿಜ್‌ ಐಪಿಎಲ್‌ ಫೈನಲ್‌ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಐಸಿಸಿ ಏಕದಿನ ಮತ್ತು ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಸಾಕಷ್ಟು ಪಂದ್ಯಗಳು ಈ ಮೈದಾನದಲ್ಲಿ ನಡೆದಿವೆ. ಹಲವಾರು ಕ್ರಿಕೆಟಿಗರ ಬದುಕು ಅರಳಿದ್ದು ಕೂಡ ಚಿನ್ನಸ್ವಾಮಿಯಲ್ಲಿಯೇ. ಈ ಕ್ರೀಡಾಂಗಣದ ಬಗ್ಗೆ ಇಲ್ಲಿದೆ ಮಾಹಿತಿ. 1) ಚಿನ್ನಸ್ವಾಮಿ ಕ್ರೀಡಾಂಗಣ ನಿರ್ಮಾಣವಾಗಿದ್ದು ಯಾವಾಗ? 2) ಈ ಕ್ರೀಡಾಂಗಣ ಒಟ್ಟು ಎಷ್ಟು ಆಸನ ವ್ಯವಸ್ಥೆ ಹೊಂದಿದೆ? 3) ಚಿನ್ನಸ್ವಾಮಿ ಅಂಗಳದಲ್ಲಿ ಚೊಚ್ಚಲ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯ ನಡೆದದ್ದು ಯಾವಾಗ? 4) ಟೆಸ್ಟ್ ಪಂದ್ಯದಲ್ಲಿ ಈ ಅಂಗಳದಲ್ಲಿ ಒಟ್ಟು ಹೆಚ್ಚು ರನ್‌ಗಳನ್ನು ಗಳಿಸಿದ ಕೀರ್ತಿ ಯಾರ ಹೆಸರಿನಲ್ಲಿದೆ? 5) ಸೋಲಾರ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡ ಭಾರತದ ಮೊದಲ ಕ್ರೀಡಾಂಗಣ ಯಾವುದು? 6) ಟೆಸ್ಟ್‌ನಲ್ಲಿ ಹತ್ತು ಸಾವಿರ ರನ್‌ ಗಳಿಸಿದ ನೆನಪಿಗಾಗಿ ರಾಜ್ಯದ ಒಬ್ಬ ಕ್ರಿಕೆಟಿಗನ ಹೆಸರಿನಲ್ಲಿ ಮೈದಾನದ ಹೊರಭಾಗದಲ್ಲಿ ಗೋಡೆ ನಿರ್ಮಿಸಲಾಗಿದೆ. ಆ ಕ್ರಿಕೆಟಿಗ ಯಾರು? 7) ಟೆಸ್ಟ್‌ನಲ್ಲಿ ಈ ಅಂಗಳದಲ್ಲಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ಯಾರ ಹೆಸರಿನಲ್ಲಿದೆ? 8) ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ ಯಾವಾಗ ನಡೆದಿತ್ತು? 9) ಈ ಅಂಗಳದಲ್ಲಿ ಒಟ್ಟು ಎಷ್ಟು ಟೆಸ್ಟ್‌ ಪಂದ್ಯಗಳು ನಡೆದಿವೆ? 10) ಐಪಿಎಲ್‌ ಫೈನಲ್‌ ಪಂದ್ಯಕ್ಕೆ ಈ ಅಂಗಳ ಮೊದಲ ಬಾರಿಗೆ ಆತಿಥ್ಯ ವಹಿಸಿದ್ದು ಯಾವ ವರ್ಷ? ಉತ್ತರಗಳು: 1) 1969 2) 40,000 3) 2012 4) ಸಚಿನ್‌ ತೆಂಡೂಲ್ಕರ್‌ 5) ಚಿನ್ನಸ್ವಾಮಿ ಕ್ರೀಡಾಂಗಣ 6) ರಾಹುಲ್‌ ದ್ರಾವಿಡ್‌ 7) ಅನಿಲ್‌ ಕುಂಬ್ಳೆ 8) 1987, ಭಾರತ–ನ್ಯೂಜಿಲೆಂಡ್‌ ನಡುವೆ 9) 21 10) 2014 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.