ಕ್ರೀಡಾ ಕ್ವಿಜ್‌ 1) ಕೊಪಾ ಅಮೆರಿಕ ಫುಟ್‌ಬಾಲ್‌ ಟೂರ್ನಿ ಆರಂಭವಾದ ವರ್ಷ ಯಾವುದು? 2) ಹಾಲಿ ಚಾಂಪಿಯನ್ ತಂಡ ಯಾವುದು? 3) ಟೂರ್ನಿಯಲ್ಲಿ ಒಟ್ಟು ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ದಾಖಲೆ ಯಾವ ತಂಡದ ಹೆಸರಿನಲ್ಲಿದೆ? 4) ಚೊಚ್ಚಲ ಕೊಪಾ ಅಮೆರಿಕ ಟೂರ್ನಿಗೆ ಯಾವ ರಾಷ್ಟ್ರ ಆತಿಥ್ಯ ವಹಿಸಿತ್ತು? 5) 1967ರ ವರೆಗೆ ಈ ಟೂರ್ನಿಯನ್ನು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು? 6) ಟೂರ್ನಿಯಲ್ಲಿ ಒಟ್ಟು ಹೆಚ್ಚು ಪಂದ್ಯಗಳಲ್ಲಿ ಸೋತ ‘ದಾಖಲೆ’ ಯಾವ ತಂಡದ ಹೆಸರಿನಲ್ಲಿದೆ? 7) ಯಾವ ರಾಷ್ಟ್ರಗಳ ನಡುವಣ ಪಂದ್ಯ ಹೆಚ್ಚು ಬಾರಿ ಡ್ರಾ ಆಗಿದೆ? 8) ಪಂದ್ಯವೊಂದರಲ್ಲಿ ಹೆಚ್ಚು ಅಂತರದ ಗೆಲುವು ಪಡೆದ ದಾಖಲೆ ಹೊಂದಿರುವ ತಂಡ ಯಾವುದು? 9) ದಕ್ಷಿಣ ಅಮೆರಿಕದ ಆಚೆ ಮೊದಲ ಬಾರಿಗೆ ಕೊಪಾ ಅಮೆರಿಕ ಟೂರ್ನಿ ಆಯೋಜನೆಯಾಗಿದ್ದು ಯಾವ ವರ್ಷ? 10) ಈ ಬಾರಿಯ ಟೂರ್ನಿಯ ಫೈನಲ್‌ ಪಂದ್ಯ ಎಲ್ಲಿ ಆಯೋಜನೆಯಾಗಿದೆ? ಉತ್ತರಗಳು: 1) 1916 2) ಚಿಲಿ 3) ಉರುಗ್ವೆ 4) ಅರ್ಜಿಂಟೀನಾ 5) ದಕ್ಷಿಣ ಆಮೆರಿಕ ಚಾಂಪಿಯನ್‌ಷಿಪ್‌ 6) ಚಿಲಿ 7) ಅರ್ಜೆಂಟೀನಾ ಹಾಗೂ ಪೆರು 8) 1942ರ ಅರ್ಜೆಂಟೀನಾ ಹಾಗೂ ಈಕ್ವೆಡಾರ್‌ ನಡುವಣ ಪಂದ್ಯ (12–0ಗೋಲುಗಳು), 9) 2016 10) ಪಶ್ಚಿಮ ರುದರ್‌ಫೋರ್ಡ್‌ನ ಮೆಟ್‌ಲೈಫ್‌ ಕ್ರೀಡಾಂಗಣ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.