ನೆನಪಿನ ಪುಟಗಳು... ಕರ್ನಾಟಕದಲ್ಲಿ ಒಲಿಂಪಿಕ್ಸ್‌ ಆಂದೋಲನದ ಜತೆಗೆ ‘ಪ್ರಜಾವಾಣಿ’ ತನ್ನ ಆರಂಭದ ದಿನಗಳಿಂದಲೂ ಗುರುತಿಸಿಕೊಳ್ಳುತ್ತಾ ಬಂದಿದೆ. 1952ರ ಹೆಲ್ಸಿಂಕಿ ಮತ್ತು 1956ರ ಮೆಲ್ಬರ್ನ್ ಒಲಿಂಪಿಕ್ಸ್‌ಗಳ ಸುದ್ದಿಗಳು ಆ ಕಾಲದಲ್ಲೇ ಪತ್ರಿಕೆಯ ಮುಖಪುಟದಲ್ಲೇ ಪ್ರಕಟಗೊಂಡಿದ್ದವು. ಆ ನಂತರ ರೋಮ್‌, ಟೋಕಿಯೊ, ಮೆಕ್ಸಿಕೊ ಮತ್ತು ಮ್ಯೂನಿಕ್‌ ಒಲಿಂಪಿಕ್ಸ್‌ಗಳಿಗೆ ‘ಪ್ರಜಾವಾಣಿ’ ಸಂಸ್ಥೆಯ ನಿರ್ದೇಶಕರಾಗಿದ್ದ ಕೆ.ಎ.ನೆಟ್ಟಕಲ್ಲಪ್ಪನವರು ತೆರಳಿ ಪ್ರತಿ ನಿತ್ಯವೂ ವರದಿಗಳನ್ನು ಕಳುಹಿಸಿದ್ದರು. ಟೆಲಿವಿಷನ್‌ ಇಲ್ಲದ ಮತ್ತು ರೇಡಿಯೊ ಐಷಾರಾಮದ ವಸ್ತುವಾಗಿದ್ದ ಆ ದಿನಗಳಲ್ಲಿ ಪತ್ರಿಕೆ ಒಲಿಂಪಿಕ್ಸ್‌ ಸುದ್ದಿಗಳನ್ನು ಅಂದಂದೇ ತಲುಪಿಸಲು ಪ್ರಯತ್ನಿಸಿತ್ತು. ಒಲಿಂಪಿಕ್ಸ್‌ಗೆ ಸಂಬಂಧಿಸಿದ ನೂರಾರು ವರದಿಗಳು ಮತ್ತು ಛಾಯಾಚಿತ್ರಗಳಲ್ಲಿ ಕೆಲವು ತುಣುಕುಗಳು ಇಲ್ಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.