ಉದ್ಯೋಗಾವಕಾಶ ಅಲ್ಲಲ್ಲಿ... ಅಲಹಾಬಾದ್ ಬ್ಯಾಂಕ್ ಅಲಹಾಬಾದ್ ಬ್ಯಾಂಕ್‌ನಲ್ಲಿ 1100 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-03-2011. ಪರೀಕ್ಷಾ ದಿನಾಂಕ: 08-05-2011. ಹುದ್ದೆ ಹೆಸರು: ಸಿಂಗಲ್ ವಿಂಡೊ ಆಪರೇಟರ್ ‘ಎ’ ಒಟ್ಟು ಹುದ್ದೆ: 1100 ವೇತನ ಶ್ರೇಣಿ: ರೂ. 7200-19300/- ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಶೇಕಡಾ 55 ಅಂಕಗಳೊಂದಿಗೆ ಹೈಯರಿ ಸೆಕೆಂಡರಿ ಎಕ್ಸಾಮಿನೇಷನ್‌ನಲ್ಲಿ ಉತ್ತೀರ್ಣ ಅಥವಾ 10+2 (10+2+3 ಮಾದರಿ) ಅಥವಾ ತತ್ಸಮಾನ. ಅಥವಾ ಪದವಿ. ಅರ್ಜಿ ಶುಲ್ಕ: ರೂ. 300/- ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಕರ್ನಾಟಕದಲ್ಲೂ ಹುದ್ದೆಗಳಿವೆ. * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ವಿಳಾಸ: ದಿ ಜೋನಲ್ ಮ್ಯಾನೇಜರ್, ಅಲಹಾಬಾದ್ ಬ್ಯಾಂಕ್ ಜೋನಲ್ ಆಫೀಸ್: ಬೆಂಗಳೂರು, ಎನ್-603, ಮಣಿಪಾಲ್ ಸೆಂಟರ್, ನಾರ್ಥ್ ಬ್ಲಾಕ್ (ಫ್ರಂಟ್ ವಿಂಗ್) 47 ಡಿಕೆನ್ಸನ್ ರಸ್ತೆ, ಬೆಂಗಳೂರು-560042 ಮಾಹಿತಿಗೆ .. ವೆಬ್‌ಸೈಟ್ ಸಂಪರ್ಕಿಸಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ನಲ್ಲಿ 13 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-03-2011. ಹುದ್ದೆ ಹೆಸರು: ಅಸಿಸ್ಟೆಂಟ್ ಮ್ಯಾನೇಜರ್ (ಸೆಕ್ಯೂರಿಟಿ) ಗ್ರೇಡ್ ‘ಎ’; ಒಟ್ಟು ಹುದ್ದೆ: 13 ವೇತನ ಶ್ರೇಣಿ: ರೂ. 17000-33200/- ವಯೋಮಿತಿ: ಕನಿಷ್ಠ 25 ವರ್ಷ, ಗರಿಷ್ಠ 45 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಸಂದರ್ಶನ ಪೋಸ್ಟ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಅದಕ್ಕೆ ಕಡೆಯ ದಿನಾಂಕ: 21-04-2011 ವಿಳಾಸ: ಜನರಲ್ ಮ್ಯಾನೇಜರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸರ್ವೀಸಸ್ ಬೋರ್ಡ್, ಮುಂಬೈ ಸೆಂಟ್ರಲ್ ರೈಲ್ವೆ ಸ್ಟೇಷನ್ ಎದುರು, ಬೈಕುಲ್ಲಾ, ಮುಂಬೈ-400008 ಹೆಚ್ಚಿನ ಮಾಹಿತಿಗೆ ... ವೆಬ್‌ಸೈಟ್ ಸಂಪರ್ಕಿಸಿ. ನ್ಯಾಷನಲ್ ಥರ್ಮಲ್ ಪವರ್ ಲಿಮಿಟೆಡ್ ನ್ಯಾಷನಲ್ ಥರ್ಮಲ್ ಪವರ್ ಲಿಮಿಟೆಡ್ (ಎನ್‌ಟಿಪಿಸಿ)ನಲ್ಲಿ 520 ಎಕ್ಸಿಕ್ಯೂಟೀವ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-03-2011. ಲಿಖಿತ ಪರೀಕ್ಷೆ: 17-04-2011 1) ಹುದ್ದೆ: ಎಲೆಕ್ಟ್ರಿಕಲ್, ಒಟ್ಟು ಹುದ್ದೆ: 145 2) ಹುದ್ದೆ: ಮೆಕಾನಿಕಲ್, ಒಟ್ಟು ಹುದ್ದೆ: 175 3) ಹುದ್ದೆ: ಸಿವಿಲ್, ಒಟ್ಟು ಹುದ್ದೆ: 60 4) ಹುದ್ದೆ: ಕಂಟ್ರೋಲ್ ಅಂಡ್ ಇನ್‌ಸ್ಟ್ರುಮೆಂಟೇಷನ್, ಒಟ್ಟು ಹುದ್ದೆ: 100 5) ಹುದ್ದೆ: ಫೈನಾನ್ಸ್, ಒಟ್ಟು ಹುದ್ದೆ: 40 ವೇತನ ಶ್ರೇಣಿ: ರೂ. 24900-50500/- (ಎನ್‌ಟಿಪಿಸಿ) ವಯೋಮಿತಿ: ಮೊದಲ ನಾಲ್ಕು ಹುದ್ದೆಗಳಿಗೆ 27 ವರ್ಷ ದಾಟಿರಬಾರದು. ಫೈನಾನ್ಸ್ ಹುದ್ದೆಗೆ 29 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಶೇಕಡಾ 65 ಅಂಕಗಳೊಂದಿಗೆ ಎಂಜಿನಿಯರಿಂಗ್ ಅಥವಾ ಟೆಕ್ನಾಲಜಿ/ಎಎಂಇನಲ್ಲಿ ಪದವಿ. ಫೈನಾನ್ಸ್ ಹುದ್ದೆಗೆ ಪದವಿಯೊಂದಿಗೆ ಸಿಎ/ಐಸಿಡಬ್ಲ್ಯುಎ ಆಗಿರಬೇಕು. ಅರ್ಜಿ ಶುಲ್ಕ: ರೂ. 500/- ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ ಅರ್ಜಿ ನೋಂದಾಯಿಸಿದ ಬಳಿಕ ಪ್ರಿಂಟ್‌ಔಟ್ ತೆಗೆದು ಕಳುಹಿಸಬೇಕು. ಕಡೆಯ ದಿನಾಂಕ: 12-03-2011 ವಿಳಾಸ: ಎಚ್‌ಆರ್ ಇಟಿ ರಿಕ್ರೂಟ್‌ಮೆಂಟ್ ಗ್ರೂಪ್, ಎನ್‌ಟಿಪಿಸಿ ಲಿಮಿಟೆಡ್, ಪೋಸ್ಟ್ ಬಾಕ್ಸ್ ನಂ. 004, ಹೆಡ್ ಪೋಸ್ಟ್‌ಆಫೀಸ್, ಲೋಧಿ ರಸ್ತೆ, ನವದೆಹಲಿ-110003 ಹೆಚ್ಚಿನ ಮಾಹಿತಿಗೆ ://../ ವೆಬ್‌ಸೈಟ್ ಸಂಪರ್ಕಿಸಿ. ಸ್ಟಾಫ್ ಸೆಲೆಕ್ಷನ್ ಕಮಿಷನ್ ಅಸ್ಸಾಂ ರೈಫಲ್ಸ್‌ನಲ್ಲಿ 880 ಹುದ್ದೆಗಳನ್ನು ಭರ್ತಿ ಮಾಡಲು ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04-03-2011. ಪರೀಕ್ಷಾ ದಿನಾಂಕ: 01-05-2011. ಹುದ್ದೆ ಹೆಸರು: ರೈಫಲ್‌ಮನ್ (ಜನರಲ್ ಡ್ಯೂಟಿ-ಜಿಡಿ) ಪುರುಷರು; ಒಟ್ಟು ಹುದ್ದೆ: 880 ವೇತನ ಶ್ರೇಣಿ: ರೂ. 5200-20200/- ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ. ಅಥವಾ ಮೆಟ್ರಿಕುಲೇಷನ್ ಅಥವಾ ಹೈಸ್ಕೂಲ್. ಅರ್ಜಿ ಶುಲ್ಕ: ರೂ. 50/- ಆಯ್ಕೆ ವಿಧಾನ: ದೈಹಿಕ ಅರ್ಹತೆ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಲು ವಿಳಾಸ: ರೀಜನಲ್ ಡೈರೆಕ್ಟರ್ (ಎನ್‌ಇಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ರುಕ್ಮಿನಿ ನಗರ, ಪೋಸ್ಟ್: ಅಸ್ಸಾಂ ಸಚಿವಾಲಯ, ಗುವಾಹಟಿ, ಅಸ್ಸಾಂ-781006 ಹೆಚ್ಚಿನ ://.. ವೆಬ್‌ಸೈಟ್ ಸಂಪರ್ಕಿಸಿ. ಆಟೋಮಿಕ್ ಎನರ್ಜಿ ರೆಗ್ಯೂಲೇಟರಿ ಬೋರ್ಡ್ ಆಟೋಮಿಕ್ ಎನರ್ಜಿ ರೆಗ್ಯೂಲೇಟರಿ ಬೋರ್ಡ್ (ಎಇಆರ್‌ಬಿ)ನಲ್ಲಿ 16 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-03-2011. ಹುದ್ದೆ ಹೆಸರು: ಸೈಂಟಿಫಿಕ್ ಆಫೀಸರ್ (ಎಸ್‌ಓ)/ಟೆಕ್ನಿಕಲ್ ಆಫೀಸರ್ (ಟಿಓ) ಗ್ರೇಡ್ ಇ/ಡಿ; ಒಟ್ಟು ಹುದ್ದೆ: 15 ಹುದ್ದೆ ಹೆಸರು: ಟೆಕ್ನಿಕಲ್ ಆಫೀಸರ್ (ಟಿಓ) ಗ್ರೇಡ್ ಇ/ಡಿ ಒಟ್ಟು ಹುದ್ದೆ: 01 ವೇತನ ಶ್ರೇಣಿ: ರೂ. 15600-39100/- ವಯೋಮಿತಿ: ಎಸ್‌ಓ/ಟಿಓ (ಡಿ): 35 ವರ್ಷ ದಾಟಿರಬಾರದು. ಎಸ್‌ಓ/ಟಿಓ (ಇ): 40 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಸಲ್ಲಿಸಲು ವಿಳಾಸ: ಅಡ್ಮಿನಿಸ್ಟ್ರೇಟೀವ್ ಆಫೀಸರ್-111, ಆಟೋಮಿಕ್ ಎನರ್ಜಿ ರೆಗ್ಯೂಲೇಟರಿ ಬೋರ್ಡ್, ನಿಯಮಕ್ ಭವನ್, ಅನುಶಕ್ತಿ ನಗರ್, ಮುಂಬೈ-400094 ಹೆಚ್ಚಿನ ಮಾಹಿತಿಗೆ ://.../ ವೆಬ್‌ಸೈಟ್ ಸಂಪರ್ಕಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.