ಪ್ಲಾಸ್ಟಿಕ್ ಶಿಕ್ಷಣದಲ್ಲಿ ಡಿಪ್ಲೊಮಾ ಪ್ಲಾ ಸ್ಟಿಕ್ ನಿಷೇಧಿಸಬೇಕು ಎಂಬ ಕೂಗು ಎಷ್ಟು ಬಲವಾಗಿದೆಯೋ ಅಷ್ಟೇ ಬಲವಾಗಿ ಪ್ಲಾಸ್ಟಿಕ್ ಉದ್ಯಮವೂ ಇದೆ. ಜೀವನದ ಅವಶ್ಯಕ ವಸ್ತುಗಳಲ್ಲಿ ಪ್ಲಾಸ್ಟಿಕ್ ಸಹ ಒಂದು. ಬೆಳಿಗ್ಗೆ ಕೈಹಿಡಿಯುವ ತಂಬಿಗೆಯಿಂದ ರಾತ್ರಿಯ ತನಕ ಪ್ಲಾಸ್ಟಿಕ್ ನಮ್ಮ ಜತೆಯೇ ಸಾಗುತ್ತದೆ. ಹಲ್ಲುಜ್ಜುವ ಬ್ರಷ್, ಮೊಬೈಲ್, ಟಿವಿ, ವಾಹನದ ಬಿಡಿ ಭಾಗಗಳು, ನೀರಿನ ಸಂಪು, ಗುಂಡು ನಿರೋಧಕ ಜಾಕೆಟ್ ಎಲ್ಲದಕ್ಕೂ ಪ್ಲಾಸ್ಟಿಕ್ ಅವಶ್ಯಕ. ಬಹು ವಿಸ್ತಾರವಾದ ಉದ್ಯಮವಾಗಿರುವ ಇಲ್ಲಿ ಉದ್ಯೋಗಾವಕಾಶ ಸಹ ಹುಲುಸಾಗಿ ಬೆಳೆದಿದೆ. ಈ ಕ್ಷೇತ್ರಕ್ಕ ಬೇಕಾಗುವ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನೀಡಲೆಂದೇ ಸಂಸ್ಥೆಗಳು ಹುಟ್ಟಿಕೊಂಡಿವೆ. ಅವುಗಳ ಇತಿಹಾಸವೂ ಸಹ ಪ್ಲಾಸ್ಟಿಕ್‌ನಷ್ಟೇ ಇದೆ. ಅಂತಹ ಒಂದು ಸಂಸ್ಥೆ ಮೈಸೂರಲ್ಲೂ ಇದೆ. ಕೇಂದ್ರೀಯ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಡಿಪ್ಲೊಮಾ ಶಿಕ್ಷಣ ನೀಡುತ್ತಿದೆ. ಇಲ್ಲಿ ಪಳಗಿದವರು ತರಹೇವಾರಿ ಕಂಪನಿಗಳಲ್ಲಿ ದುಡಿಯುತ್ತಿದ್ದು, ಕೈತುಂಬ ಸಂಬಳ ಸಹ ಸಿಗುತ್ತಿದೆ. ಕೇಂದ್ರ ಸರ್ಕಾರದ ರಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸ್ಥಾಪಿಸಿದ ದೇಶದ 15 ಸಂಸ್ಥೆಗಳಲ್ಲಿ ಇದು ಕೂಡ ಒಂದು. ವಿವಿಧ ನಮೂನೆಯ ಪರಿಕರ ಉತ್ಪಾದನೆ ಹಾಗೂ ಸಂಸ್ಕರಣಾ ಘಟಕಗಳಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾ ಸ್ವಾಯತ್ತ ಸಂಸ್ಥೆಯಾಗಿ ಬೆಳೆದಿದೆ. ಪ್ಲಾಸ್ಟಿಕ್ ಉತ್ಪನ್ನಗಳ ಸಂಸ್ಕೃರಣೆ, ಗುಣಮಟ್ಟದ ಪರೀಕ್ಷೆಗೆ ಅಗತ್ಯವಾದ ಶಿಕ್ಷಣ ನೀಡಲು ಮೂರು ವರ್ಷದ ಪ್ಲಾಸ್ಟಿಕ್ ಅಚ್ಚು ವಿನ್ಯಾಸ ಡಿಪ್ಲೊಮಾ ( ), ಪ್ಲಾಸ್ಟಿಕ್ ತಂತ್ರಜ್ಞಾನ ಡಿಪ್ಲೊಮಾ ಹಾಗೂ ಒಂದುವರೆ ವರ್ಷದ ಪ್ಲಾಸ್ಟಿಕ್ ಪ್ರೋಸೆಸಿಂಗ್ ಮತ್ತು ಟೆಸ್ಟಿಂಗ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಆರಂಭಿಸಿದೆ. ಇದಕ್ಕೆ ಅಖಿಲ ಭಾರತ ತಾಂತ್ರಿಕ ಕೌಶಲ್ಯ ಮಂಡಳಿಯ ಅನುಮೋದನೆ ಕೂಡ ದೊರಕಿದೆ. ಪ್ರವೇಶ-ಅರ್ಹತೆ: 2011-12ನೇ ಸಾಲಿಗೆ ಮೂರು ವರ್ಷದ ಅವಧಿಯ ಡಿಪ್ಲೊಮಾ ಪಡೆಯಲು ಬಯಸುವ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ (ಗಣಿತ, ಇಂಗ್ಲಿಷ್, ವಿಜ್ಞಾನ ಕಡ್ಡಾಯ) ಉತ್ತೀರ್ಣರಾಗಿದ್ದು, 19 ವರ್ಷದ ಒಳಗಿನವರಾಗಿರಬೇಕು. ಸ್ನಾತಕೋತ್ತರ ಡಿಪ್ಲೊಮಾಗೆ ಪ್ರವೇಶ ಬಯಸುವವರು ಬಿಎಸ್ಸಿ (ರಸಾಯನಶಾಸ್ತ್ರ) ಉತ್ತೀರ್ಣರಾಗಿದ್ದು, 24 ವರ್ಷದ ಒಳಗಿನವರಾಗಿರಬೇಕು. ಎಸ್‌ಸಿ/ಎಸ್‌ಟಿ ಹಾಗೂ ಈಶಾನ್ಯ ರಾಜ್ಯದ ಅಭ್ಯರ್ಥಿಗಳಿಗೆ ಪ್ರವೇಶಾತಿಯಲ್ಲಿ ಐದು ವರ್ಷದ ವಿನಾಯ್ತಿ ಇದೆ. ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ರೂ.25, ಸಾಮಾನ್ಯ ವರ್ಗಕ್ಕೆ ರೂ.100 ಹಾಗೂ ಹೊರ ಜಿಲ್ಲೆಯ ಅಭ್ಯರ್ಥಿಗಳಿಗೆ ರೂ.166 ಅರ್ಜಿ ಶುಲ್ಕ. ಆಸಕ್ತ ಅಭ್ಯರ್ಥಿಗಳು ಉಪನಿರ್ದೇಶಕರು, ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ (ಸಿಪೆಟ್), ಹೆಬ್ಬಾಳು ಮೈಸೂರು-16 ಇವರ ಹೆಸರಿನಲ್ಲಿ ಡಿಡಿ ಕಳುಹಿಸಿ ಜೂನ್ 3ರ ಒಳಗೆ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಜೂ. 10 ಕಡೆಯ ದಿನ. ಜು. 10ರಂದು ಪ್ರವೇಶ ಪರೀಕ್ಷೆ ನಡೆಯಲಿದ್ದು, ಅ.16ರಿಂದ ತರಗತಿಗಳು ಆರಂಭವಾಗಲಿವೆ. ಸೌಲಭ್ಯಗಳು: ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಲವು ವಿದ್ಯಾರ್ಥಿ ವೇತಗಳು ಲಭ್ಯ. ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ರಾಜ್ಯದ ಸಮಾಜಕಲ್ಯಾಣ ಇಲಾಖೆ ಹಾಗೂ ಕೇಂದ್ರ ಸರ್ಕಾರ ವಿದ್ಯಾರ್ಥಿ ವೇತನ ನೀಡಲಿವೆ. ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಪ್ರಿಂ ಕೈಗಾರಿಕೆ, ಜೈನ್ ಇರಿಗೇಷನ್ ಪಿನ್‌ಸಿಸ್ಟಮ್ಸ, ಪ್ಲಾಸ್ಟೋ ಇಂಡಿಯಾ ಕಂಪೆನಿಗಳು ವಿದ್ಯಾರ್ಥಿ ವೇತನ ನೀಡುತ್ತವೆ. ಡಿಪ್ಲೊಮಾ ಮುಗಿದ ಬಳಿಕ ಕ್ಯಾಂಪಸ್ ಆಯ್ಕೆ ಕೂಡ ಇದೆ. ಜಿ.ಇ.ಪ್ಲಾಸ್ಟಿಕ್, ಸಿಂಟೆಕ್ಸ್ ಕಂಪೆನಿ, ವಿಡಿಯೋಕಾನ್, ಸುಪ್ರಿಂ, ಟಿ.ಜಿ.ಕಿರ್ಲೋಸ್ಕರ್, ಮದರ್‌ಸನ್ ಕಂಪೆನಿಗಳು ಸಂಸ್ಥೆಯ ಆವರಣದಲ್ಲಿಯೇ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಹೆಚ್ಚಿನ ಮಾಹಿತಿಗೆ ... ಹಾಗೂ ದೂ-0821- 2510349, 2510618, ಮೊ.9448060652 ಸಂಪರ್ಕಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.