ಕ್ಯಾಂಪಸ್ ಆರ್‌ಐಎಲ್ ನಾಯಕತ್ವ ಕಾರ್ಯಕ್ರಮ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಆ್ಯಕ್ಸಿಲರೇಟೆಡ್ ಲೀಡರ್‌ಶಿಪ್ ಪ್ರೋ (ಎಎಲ್‌ಪಿ) ಎಂಬ ನಾಯಕತ್ವ ನಿರ್ಮಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಕಾರ್ಯಕ್ರಮದ ನೇತೃತ್ವವನ್ನು ಆರ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ವಹಿಸಲಿದ್ದಾರೆ. ಈ ಕಾರ್ಯಕ್ರಮ ಯಾವುದೇ ರಾಷ್ಟ್ರದ ಅಭ್ಯರ್ಥಿಗೆ ಮುಕ್ತವಾಗಿದೆ. 27 ಮತ್ತು 34 ವರ್ಷದ ವಯೋಮಿತಿಯ ಒಳಗಿನ ಉದ್ಯೋಗಿಗಳು ಹಾಗೂ ಅತ್ಯುನ್ನತ ಮಟ್ಟದ ಬಿಸಿನೆಸ್ ನಿರ್ವಹಿಸಬಲ್ಲವರು ಮಾತ್ರ ಇದಕ್ಕೆ ಅರ್ಹರು. ಆಯ್ದ ಅಭ್ಯರ್ಥಿಗಳು ಕಂಪೆನಿಯ ಕಾರ್ಯಕಾರಿ ಸಮಿತಿಯ ಸದಸ್ಯರಿಂದ ಮಾರ್ಗದರ್ಶನ ಪಡೆಯಲಿದ್ದಾರೆ. ಮುಖೇಶ್ ಅಂಬಾನಿ, ಪಿಎಂಎಸ್ ಪ್ರಸಾದ್, ನಿಖಿಲ್ ಮೇಸ್ವಾನಿ ಮತ್ತು ಹಿತಾಲ್ ಮೇಸ್ವಾನಿ ಮಾರ್ಗದರ್ಶನ ನೀಡಲಿದ್ದಾರೆ. ಇತರ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೂ ಈ ಕಾರ್ಯಕ್ರಮದಲ್ಲಿ ಪ್ರವೇಶವಿದೆ.ಎಎಲ್‌ಪಿ ಎರಡು ವರ್ಷಗಳ ವಿನೂತನ ಕಾರ್ಯಕ್ರಮವಾಗಿದ್ದು, ಭವಿಷ್ಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುನ್ನಡೆಸಬಲ್ಲ ನಾಯಕರನ್ನು ರೂಪಿಸಲಿದೆ. ಅಂತಿಮ ಪಟ್ಟಿಗೆ ಸೇರ್ಪಡೆಯಾದ ಅಭ್ಯರ್ಥಿಗಳಿಗೆ ವಿಶೇಷ ಅರ್ಹತಾ ಪರೀಕ್ಷೆ ಇರುತ್ತದೆ. ಅದರಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಆರ್‌ಐಎಲ್‌ನ ಎಚ್‌ಆರ್ ಪ್ರಮುಖರು ಆಹ್ವಾನ ನೀಡಲಿದ್ದಾರೆ. ಯಶಸ್ವಿ ಅಭ್ಯರ್ಥಿಗಳು ‘ಬ್ರಾಂಡಿಂಗ್ ಫಾರ್ ಲೈಫ್’ ಕಾರ್ಯಕ್ರಮದ ಅನುಭವ ಪಡೆಯಲಿದ್ದಾರೆ. ಉನ್ನತ ಹುದ್ದೆಗೆ ಇದು ದಾರಿ ಮಾಡಿಕೊಡಲಿದೆ. ವಿಶ್ವದರ್ಜೆಯ ತರಬೇತಿಯನ್ನು ಇಲ್ಲಿ ನೀಡಲಾಗುವುದು. ಎಎಲ್‌ಪಿ ಕೇವಲ ಭಾರತ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಉನ್ನತ ವೃತ್ತಿಪರರನ್ನು ರೂಪಿಸುವ ಅಭಿವೃದ್ಧಿ ಕಾರ್ಯಕ್ರಮವಾಗಿದೆ. ಮಾಹಿತಿಗೆ : ://../. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.