ಉದ್ಯೋಗಾವಕಾಶ... ಅಲ್ಲಲ್ಲಿ ಬಾರ್ಡರ್ ರೋಡ್ ಆರ್ಗನೈಜೇಷನ್ ಬಾರ್ಡರ್ ರೋಡ್ ಆರ್ಗನೈಜೇಷನ್ (ಬಿಆರ್‌ಒ)ನಲ್ಲಿ 603 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04-05-2011. ಹುದ್ದೆ ಹೆಸರು: ಜೂನಿಯರ್ ಎಂಜಿನಿಯರ್ (ಸಿವಿಲ್) ಒಟ್ಟು ಹುದ್ದೆ: 603 ವೇತನ ಶ್ರೇಣಿ: ರೂ. 9300-34800/- ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 27 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಮೂರು ವರ್ಷದ ಡಿಪ್ಲೊಮಾ ಅಥವಾ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಲೈಸೆಂಟಿಯೇಟೆಷಿಪ್ ಅಥವಾ ತತ್ಸಮಾನ. ಅರ್ಜಿ ಶುಲ್ಕ: ರೂ. 50/- ಆಯ್ಕೆ ವಿಧಾನ: ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ಸಂದರ್ಶನ. ವಿಳಾಸ: ಕಮಾಂಡೆಂಟ್, ಜಿಆರ್‌ಇಎಫ್ ಸೆಂಟರ್, ಡಿಘಿ ಕ್ಯಾಂಪ್, ಪುಣೆ-411015 ಹೆಚ್ಚಿನ ಮಾಹಿತಿಗೆ ://.. ವೆಬ್‌ಸೈಟ್ ಸಂಪರ್ಕಿಸಿ. ಯುಕೋ ಬ್ಯಾಂಕ್ ಯುಕೋ ಬ್ಯಾಂಕ್‌ನಲ್ಲಿ 43 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 30-04-2011 ಹಾಗೂ 15-05-2011ರ ನಡುವೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಹುದ್ದೆ ಹೆಸರು: ಇನ್‌ಫಾರ್ಮೇಷನ್ ಟೆಕ್ನಾಲಜಿ (ಐಟಿ) ಆಫೀಸರ್ಸ್‌ ಎಂಎಂಜಿಎಸ್-11 ಒಟ್ಟು ಹುದ್ದೆ: 43 ವೇತನ ಶ್ರೇಣಿ: ರೂ. 19400-28100/- ವಯೋಮಿತಿ: ಕನಿಷ್ಠ 25 ವರ್ಷ, ಗರಿಷ್ಠ 40 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿ ಕಮ್ಯೂನಿಕೇಷನ್/ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್/ಎಲೆಕ್ಟ್ರಾನಿಕ್ಸ್ ಅಂಡ್ ಇನ್‌ಸ್ಟ್ರುಮೆಂಟೇಷನ್/ಕಂಪ್ಯೂಟರ್ ಸೈನ್ಸ್/ಇನ್‌ಫಾರ್ಮೇಷನ್ ಟೆಕ್ನಾಲಜಿನಲ್ಲಿ ಬಿಇ/ಬಿಟೆಕ್ (ನಾಲ್ಕು ವರ್ಷದ ಪೂರ್ಣ ಅವಧಿಯ ಪದವಿ) ಆಯ್ಕೆ ವಿಧಾನ: ಗುಂಪು ಸಂದರ್ಶನ ಅರ್ಜಿ ಶುಲ್ಕ: ರೂ. 400/- * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್ ಮೂಲಕ ಕಳುಹಿಸಲು ಕೊನೆಯ ದಿನ: 25-05-2011. ವಿಳಾಸ: ದಿ ಜನರಲ್ ಮ್ಯಾನೇಜರ್, ಯುಕೋ ಬ್ಯಾಂಕ್, ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್ ಡಿಪಾರ್ಟ್‌ಮೆಂಟ್, ಹೆಡ್ ಆಫೀಸ್ (4ನೇ ಮಹಡಿ), 3 ಅಂಡ್ 4, ಡಿಡಿ ಬ್ಲಾಕ್, ಸೆಕ್ಟರ್ 1, ಸಾಲ್ಟ್ ಲೇಕ್, ಕೋಲ್ಕತ್ತ-700064 ಮಾಹಿತಿಗೆ://..comಇಲ್ಲಿ ಸಂಪರ್ಕಿಸಿ. ಇಂಡಿಯನ್ ನೇವಿ ಇಂಡಿಯನ್ ನೇವಿಯಲ್ಲಿ ಸೇಯ್ಲರ್ ಫಾರ್ ಎಂಆರ್ (ಮ್ಯೂಜಿಷಿಯನ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-04-2011. ಹುದ್ದೆ ಹೆಸರು: ಸೇಯ್ಲರ್ ಫಾರ್ ಎಂಆರ್ (ಮ್ಯೂಜಿಷಿಯನ್) ವೇತನ ಶ್ರೇಣಿ: ರೂ 5200-20200/- ವಯೋಮಿತಿ: 01, ಅಕ್ಟೋಬರ್ 1990ರಿಂದ 30, ಸೆಪ್ಟೆಂಬರ್ 1994ರ ನಡುವೆ ಜನಿಸಿರಬೇಕು. ವಿದ್ಯಾರ್ಹತೆ: 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಆಯ್ಕೆ ವಿಧಾನ: ಮ್ಯೂಜಿಕಲ್ ಸ್ಕ್ರೀನಿಂಗ್ ಟೆಸ್ಟ್, ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ವಿಳಾಸ: ದಿ ಕಮಾಂಡಿಂಗ್ ಆಫೀಸರ್, (ಫಾರ್ ಡೈರೆಕ್ಟರ್ ಮ್ಯೂಜಿಕ್), ಐಎನ್‌ಎಸ್ ಕುಂಜಾಲಿ, ಕೊಲಾಬ, ಮುಂಬೈ-400005. ಮಾಹಿತಿಗೆ .-..inಇಲ್ಲಿ ಸಂಪರ್ಕಿಸಿ. ಸೆಂಟರ್ ಫಾರ್ ಡೆವಲಪ್‌ಮೆಂಟ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ ಕಂಪ್ಯೂಟಿಂಗ್‌ನಲ್ಲಿ (ಸಿಡಿಎಸಿ)10 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-04-2011. ಹುದ್ದೆ ಹೆಸರು: ಸೀನಿಯರ್ ಪ್ರೊಜೆಕ್ಟ್ ಅಸಿಸ್ಟೆಂಟ್ ಒಟ್ಟು ಹುದ್ದೆ: 02 ವೇತನ ಶ್ರೇಣಿ: ರೂ 13800/- ವಯೋಮಿತಿ: 35 ವರ್ಷ ದಾಟಿರಬಾರದು. ಹುದ್ದೆ ಹೆಸರು: ಪ್ರೊಜೆಕ್ಟ್ ಅಸಿಸ್ಟೆಂಟ್ ಒಟ್ಟು ಹುದ್ದೆ: 08 ವೇತನ ಶ್ರೇಣಿ: ರೂ 9400/- ವಯೋಮಿತಿ: 30 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 100/- * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್ ಮೂಲಕ ಕಳುಹಿಸಲು ಕೊನೆಯ ದಿನ: 11-04-2011. ವಿಳಾಸ: ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್, ವೆಲ್ಲಯಂಬಲಂ, ತಿರುವನಂತಪುರ, ಕೇರಳ-695033 ಹೆಚ್ಚಿನ ಮಾಹಿತಿಗೆ ://../ಇಲ್ಲಿ ಸಂಪರ್ಕಿಸಿ. ಯುಪಿಎಸ್‌ಸಿ ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ)ವು ಇಂಡಿಯನ್ ಫಾರೆಸ್ಟ್ ಸರ್ವೀಸ್‌ನಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆ ನಡೆಸಲಿದ್ದು ಅದಕ್ಕಾಗಿ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-04-2011. ಹುದ್ದೆ ಹೆಸರು: ಇಂಡಿಯನ್ ಫಾರೆಸ್ಟ್ ಸರ್ವೀಸ್ ಅಧಿಕಾರಿಗಳು ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ವೆಟರ್ನರಿ ಸೈನ್ಸ್ ಹಾಗೂ ಅನಿಮಲ್ ಹಸ್ಬೆಂಡ್ರಿ, ಬಾಟನಿ, ಕೆಮಿಸ್ಟ್ರಿ, ಜಿಯೊಲಜಿ, ಮೆಥಮೆಟಿಕ್ಸ್, ಫಿಜಿಕ್ಸ್, ಸ್ಟ್ಯಾಟಿಸ್ಟಿಕ್ಸ್‌ನಲ್ಲಿ ಪದವಿ. ಅಥವಾ ಅಗ್ರಿಕಲ್ಚರಲ್‌ನಲ್ಲಿ ಪದವಿ. ಅರ್ಜಿ ಶುಲ್ಕ: ರೂ 100/- ಮಾಹಿತಿಗೆ ://../ ಸಂಪರ್ಕಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.