ಎಂಜಿನಿಯರಿಂಗ್‌ವೈದ್ಯಕೀಯ ಕಾಲೇಜುಗಳ ಕೈಪಿಡಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ಆರ್.ಕೆ.ಪಬ್ಲಿಕೇಷನ್ ಹೊರ ತಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಪ್ರತ್ಯೇಕವಾಗಿ ಪುಸ್ತಕಗಳನ್ನು ಪ್ರಕಟಿಸಿದ್ದು, 2011-12ನೇ ಸಾಲಿನ ಕರ್ನಾಟಕದ ಎಲ್ಲ ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹಂಚಿಕೆ, ಕ್ಯಾಂಪಸ್, ಸಾರಿಗೆ, ಹಾಸ್ಟೆಲ್, ಗ್ರಂಥಾಲಯ, ಕ್ಯಾಂಪಸ್ ಸಂದರ್ಶನ, ಬೋಧಕ ಸಿಬ್ಬಂದಿ ಇತ್ಯಾದಿ ವಿವರಗಳು ಇದರಲ್ಲಿ ಲಭ್ಯವಿವೆ. ಕಳೆದ ವರ್ಷದ ಫಲಿತಾಂಶ, ಸಿಇಟಿ, ಕಾಮೆಡ್-ಕೆ ಕಟ್‌ಆಫ್ ರ‌್ಯಾಂಕ್ ವಿವರ, ಕಾಲೇಜಿನಲ್ಲಿರುವ ಸೌಲಭ್ಯಗಳು, ಸ್ಥಳ ಮಾಹಿತಿಯ ಮಾರ್ಗಸೂಚಿಯನ್ನು ಒಳಗೊಂಡ ನಕ್ಷೆಯನ್ನು ಸಹ ಪುಸ್ತಕ ಒಳಗೊಂಡಿದೆ. ಎಂಜಿನಿಯರಿಂಗ್ ಪುಸ್ತಕದ ಬೆಲೆ ರೂ 99 ಮತ್ತು ವೈದ್ಯಕೀಯ/ದಂತವೈದ್ಯಕೀಯ ಪುಸ್ತಕದ ಬೆಲೆ ರೂ 70. ಹೆಚ್ಚಿನ ಮಾಹಿತಿಗೆ ಆರ್.ಕೆ.ಶ್ರೀನಿವಾಸ್, ದೂರವಾಣಿ ಸಂಖ್ಯೆ: 080-23605389, 9243196211 ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.