ಸೇಫ್ಟಿ ಮ್ಯಾನೇಜ್‌ಮೆಂಟ್ ಕೋರ್ಸ್ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಇಂಟರ್‌ನ್ಯಾಷನಲ್ ಸೇಫ್ಟಿ ಮ್ಯಾನೇಜ್‌ಮೆಂಟ್ ಸಂಸ್ಥೆಯು (ಐಐಐಎಸ್‌ಎಂ) ಇಂಡಸ್ಟ್ರಿಯಲ್ ಸೇಫ್ಟಿ ಮ್ಯಾನೇಜ್‌ಮೆಂಟ್ ಡಿಪ್ಲೊಮಾ ಹಾಗೂ ಪಿಜಿ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಸೇಫ್ಟಿ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಸ್ವದೇಶ ಹಾಗೂ ವಿದೇಶದಲ್ಲಿ ಅಪಾರವಾದ ಉದ್ಯೋಗಾವಕಾಶ ಲಭ್ಯವಿದೆ. ಈ ಕೋರ್ಸ್‌ನಲ್ಲಿ, ಬಹುಮಹಡಿ ಕಟ್ಟಡಗಳ ನಿರ್ಮಾಣ, ಸೇತುವೆಗಳು, ಮೆಟ್ರೋ, ರೈಲ್ವೆ ನಿರ್ಮಾಣ, ಆಯಿಲ್ ಅಂಡ್ ಗ್ಯಾಸ್, ಗಣಿಗಾರಿಕೆ ಹಾಗೂ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರ ಸುರಕ್ಷತೆಗೆ ಮಾರ್ಗದರ್ಶನ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ: ದೂರವಾಣಿ 9880612889, .. ಎಸ್‌ಎಂಯು-ಡಿಇ ಬೇಸಿಗೆ ಅವಧಿ ಕೋರ್ಸ್ ದೂರ ಸಂಪರ್ಕ ಶಿಕ್ಷಣ ಒದಗಿಸುವ ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾಲವು (ಎಸ್‌ಎಂಯು-ಡಿಇ) 2011 ನೇ ಸಾಲಿನಲ್ಲಿ ಬೇಸಿಗೆ ಅವಧಿಯ ಕೋರ್ಸ್‌ಗಳಿಗೆ ಪ್ರವೇಶ ಘೋಷಿಸಿದೆ. ದೇಶದ 310 ನಗರಗಳಲ್ಲಿನ 710 ಕ್ಕೂ ಹೆಚ್ಚು ಎಸ್‌ಎಂಯು-ಡಿಇ ಕಲಿಕಾ ಕೇಂದ್ರಗಳಲ್ಲಿ ಅರ್ಜಿಗಳು ಲಭ್ಯ. ಮಾಹಿತಿಗೆ ... ಅಥವಾ 1800-266-7878 ಸಂಖ್ಯೆಗೆ (ಟಾಲ್ ಫ್ರೀ) ಕರೆ ಮಾಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.