ಉದ್ಯೋಗಾವಕಾಶ... ಅಲ್ಲಲ್ಲಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್‌ಎಫ್)ನಲ್ಲಿ 884 ಹುದ್ದೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-08-2011. ಪರೀಕ್ಷಾ ದಿನಾಂಕ: 25-09-2011 ಹುದ್ದೆ ಹೆಸರು: ಹೆಡ್ ಕಾನ್‌ಸ್ಟೆಬಲ್ (ರೇಡಿಯೊ ಆಪರೇಷನ್)-679 ಹುದ್ದೆ ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ. ಜೊತೆಗೆ ಎರಡು ವರ್ಷದ ಐಟಿಐ (ರೇಡಿಯೊ ಹಾಗೂ ಟಿವಿ). ಹುದ್ದೆ ಹೆಸರು: ಹೆಡ್ ಕಾನ್‌ಸ್ಟೆಬಲ್ (ಫಿಟ್ಟರ್)-25 ಹುದ್ದೆ ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ. ಜೊತೆಗೆ ಎರಡು ವರ್ಷದ ಐಟಿಐ (ಎಂಜಿನ್ ಫಿಟ್ಟರ್ ಅಥವಾ ಡಿಸೆಲ್ ಮೆಕಾನಿಕ್). ವಯೋಮಿತಿ: ಕನಿಷ್ಠ 18, ಗರಿಷ್ಠ 23. ಹುದ್ದೆ ಹೆಸರು: ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ರೇಡಿಯೊ ಮೆಕಾನಿಕ್)-180 ಹುದ್ದೆ ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್. ಜೊತೆಗೆ ರೇಡಿಯೊ ಹಾಗೂ ಟಿವಿ ಟೆಕ್ನಾಲಜಿ ಅಥವಾ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ. ವಯೋಮಿತಿ: ಕನಿಷ್ಠ 18, ಗರಿಷ್ಠ 25. ವೇತನ ಶ್ರೇಣಿ: ರೂ.5200-20200/- ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ; ಅರ್ಜಿ ಶುಲ್ಕ: ರೂ.50/- ವಿಳಾಸ: ದಿ ಡಿಐಜಿ/ಕಮಾಂಡೆಂಟ್, ಬಿಎಸ್‌ಎಫ್ ಎಸ್‌ಟಿಎಸ್ ಯಲಹಂಕ, ಬೆಂಗಳೂರು (ಕರ್ನಾಟಕ)-560064 ಹೆಚ್ಚಿನ ಮಾಹಿತಿಗೆ ... ವೆಬ್‌ಸೈಟ್ ಸಂಪರ್ಕಿಸಿ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸೆಲೆಕ್ಷನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು 18-09-2011ರಂದು ಸಾಮಾನ್ಯ ಲಿಖಿತ ಪರೀಕ್ಷೆ ನಡೆಸಲಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-08-2011. ಹುದ್ದೆ ಹೆಸರು: ಪ್ರೊಬೇಷನರಿ ಆಫೀಸರ್ಸ್‌/ಮ್ಯಾನೇಜ್‌ಮೆಂಟ್ ಟ್ರೈನೀಸ್ ಬ್ಯಾಂಕ್‌ಗಳು: ಅಲಹಾಬಾದ್ ಬ್ಯಾಂಕ್/ಆಂಧ್ರಾ ಬ್ಯಾಂಕ್/ಬ್ಯಾಂಕ್ ಆಫ್ ಬರೋಡ/ಬ್ಯಾಂಕ್ ಆಫ್ ಇಂಡಿಯಾ/ಬ್ಯಾಂಕ್ ಆಫ್ ಮಹಾರಾಷ್ಟ್ರ/ಕೆನರಾ ಬ್ಯಾಂಕ್/ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ/ಕಾರ್ಪೊರೇಷನ್ ಬ್ಯಾಂಕ್/ದೇನಾ ಬ್ಯಾಂಕ್/ಇಂಡಿಯನ್ ಬ್ಯಾಂಕ್/ಇಂಡಿಯನ್ ಓವರ್‌ಸೀಸ್ ಬ್ಯಾಂಕ್/ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್/ಪಂಜಾಬ್ ನ್ಯಾಷನಲ್ ಬ್ಯಾಂಕ್/ಪಂಜಾಬ್ ಅಂಡ್ ಸಿಂದ್ ಬ್ಯಾಂಕ್/ಸಿಂಡಿಕೇಟ್ ಬ್ಯಾಂಕ್/ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ/ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ/ಯುಕೊ ಬ್ಯಾಂಕ್/ವಿಜಯಾ ಬ್ಯಾಂಕ್. ವಯೋಮಿತಿ: ಕನಿಷ್ಠ 20, ಗರಿಷ್ಠ 30. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ.450/- ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ. ಹೆಚ್ಚಿನ ಮಾಹಿತಿಗೆ .. ವೆಬ್‌ಸೈಟ್ ಸಂಪರ್ಕಿಸಿ. ಸ್ಟಾಫ್ ಸೆಲೆಕ್ಷನ್ ಕಮಿಷನ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ)ನಲ್ಲಿ 44 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-07-2011. ಹುದ್ದೆ ಹೆಸರು: 1) ಸರ್ವಿಲೆನ್ಸ್ ಅಸಿಸ್ಟೆಂಟ್ಸ್-ಹುದ್ದೆ: 40 ವಯೋಮಿತಿ: 27 ವರ್ಷ ದಾಟಿರಬಾರದು. ವಿದ್ಯಾರ್ಹತೆ: ಮೂರು ವರ್ಷದ ಡಿಪ್ಲೊಮಾ ಅಥವಾ ಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ. ಹುದ್ದೆ ಹೆಸರು: 2) ಟೆಕ್ನಿಕಲ್ ಅಸಿಸ್ಟೆಂಟ್-ಹುದ್ದೆ: 02 ವೇತನ ಶ್ರೇಣಿ: ರೂ.5200-20200/- ವಿದ್ಯಾರ್ಹತೆ: ಕೃಷಿ/ಎಕಾನೊಮಿಕ್ಸ್‌ನಲ್ಲಿ ಪದವಿ. ಹುದ್ದೆ ಹೆಸರು: 3) ಇನ್‌ಸ್ಟ್ರಕ್ಟರ್ (ಸೀಮನ್‌ಶಿಪ್ ಅಂಡ್ ನಾವಿಗೇಶನ್) -ಹುದ್ದೆ: 01 ವಿದ್ಯಾರ್ಹತೆ: ಪದವಿ ಹಾಗೂ ಸರ್ಟಿಫಿಕೇಟ್ ಆಫ್ ಕಾಂಪಿಟೆನ್ಸಿ (ಸ್ಕಿಪ್ಪರ್ ಫಿಷಿಂಗ್ ವೆಸೆಲ್) ಹಾಗೂ ಫಿಷಿಂಗ್ ವೆಸೆಲ್‌ನಲ್ಲಿ ಒಂದು ವರ್ಷದ ಅನುಭವ. ಹುದ್ದೆ ಹೆಸರು: 4) ಬೋಸನ್ (ಸರ್ಟಿಫೈಡ್)-ಹುದ್ದೆ: 01 ವಿದ್ಯಾರ್ಹತೆ: 12ನೇ ತರಗತಿಯಲ್ಲಿ ಉತ್ತೀರ್ಣ ಹಾಗೂ ಸರ್ಟಿಫಿಕೇಟ್ ಆಫ್ ಕಾಂಪಿಟೆನ್ಸಿ (ಮೇಟ್ ಫಿಷಿಂಗ್ ವೆಸೆಲ್). ವೇತನ ಶ್ರೇಣಿ: ರೂ.9300-34800/- ವಯೋಮಿತಿ: 30 ವರ್ಷ ದಾಟಿರಬಾರದು; ಅರ್ಜಿ ಶುಲ್ಕ: ರೂ.50/- ವಿಳಾಸ: ದಿ ರೀಜನಲ್ ಡೈರೆಕ್ಟರ್ (ಕೆಕೆಆಎರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲ ಮಹಡಿ, `ಇ~ ವಿಂಗ್, ಕೇಂದ್ರಿಯ ಸದನ್, ಕೋರಮಂಗಲ, ಬೆಂಗಳೂರು-560034 ಮಾಹಿತಿಗೆ ://... ವೆಬ್‌ಸೈಟ್ ಸಂಪರ್ಕಿಸಿ. ಇಂಡಿಯನ್ ಕೋಸ್ಟ್ ಗಾರ್ಡ್ ಇಂಡಿಯನ್ ಕೋಸ್ಟ್ ಗಾರ್ಡ್‌ನಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-07-2011 ಹುದ್ದೆ ಹೆಸರು: ನಾವಿಕ್ (ಜನರಲ್ ಡ್ಯೂಟಿ) ವಿದ್ಯಾರ್ಹತೆ: ಮ್ಯಾಥ್ಸ್ ಹಾಗೂ ಫಿಜಿಕ್ಸ್‌ನೊಂದಿಗೆ 10+2. ವಯೋಮಿತಿ: ಫೆಬ್ರುವರಿ 01, 1990 ಹಾಗೂ ಜನವರಿ 31 1994ರ ನಡುವೆ ಜನಿಸಿರಬೇಕು. ಹುದ್ದೆ ಹೆಸರು: ಡೊಮೆಸ್ಟಿಕ್ ಬ್ರಾಂಚ್ (ಕುಕ್ ಅಂಡ್ ಸ್ಟಿವಾರ್ಡ್) ವಿದ್ಯಾರ್ಹತೆ: ಮೆಟ್ರಿಕುಲೇಷನ್ ವಯೋಮಿತಿ: ಏಪ್ರಿಲ್ 01, 1990 ಹಾಗೂ ಮಾರ್ಚ್ 31 1994ರ ನಡುವೆ ಜನಿಸಿರಬೇಕು; ವೇತನ ಶ್ರೇಣಿ: ರೂ.5200-20200/- ವಿಳಾಸ: (ಪಶ್ಚಿಮ ವಲಯ) ದಿ ರಿಕ್ರೂಟ್‌ಮೆಂಟ್ ಆಫೀಸರ್, ಪೋಸ್ಟ್ ಬಾಕ್ಸ್ ನಂ.29105, ಪ್ರಭಾದೇವಿ ಪೋಸ್ಟ್ ಆಫೀಸ್ ವಾರ್ಲಿ, ಮುಂಬೈ-400030 ಮಾಹಿತಿಗೆ ... ಸಂಪರ್ಕಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.