ಕ್ಯಾಂಪಸ್ ರೀಟೇಲ್ ಕೌಶಲ ತರಬೇತಿ ಮಣಿಪಾಲ್ ಎಜುಕೇಷನ್ ಹಾಗೂ ಬ್ರಿಟನ್‌ನ ಸಿಟಿ ಅಂಡ್ ಗಿಲ್ಡ್ ಸಂಸ್ಥೆ ಜಂಟಿ ಸಹಯೋಗದಿಂದ 2009ರಲ್ಲಿ ಆರಂಭಗೊಂಡ `ಇಂಡಿಯಾ ಸ್ಕಿಲ್ಸ್~ , ಭಾರತದ 8 ರಾಜ್ಯಗಳಲ್ಲಿ ಸುಮಾರು 50ಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ಹೊಂದಿದ್ದು, ಆಸಕ್ತರಿಗೆ ವೃತ್ತಿಪರ ಕೌಶಲ ತರಬೇತಿ ನೀಡುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಮೂರು ಕೇಂದ್ರಗಳನ್ನು ಹೊಂದಿದ್ದು, ಈ ಮೂರು ಕೇಂದ್ರಗಳಲ್ಲಿ ರೀಟೇಲ್ ಸ್ಕಿಲ್ಸ್ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸುತ್ತಿದ್ದು, ಬೆಂಗಳೂರು ಕೇಂದ್ರದಲ್ಲಿ ಬ್ಯಾಂಕಿಂಗ್ ಮತ್ತು ಫೈನಾನ್ಶಿಯಲ್ ವಿಷಯದಲ್ಲಿ ಡಿಪ್ಲೊಮಾ ನೀಡುತ್ತಿದೆ. ಈ ಕೋರ್ಸ್‌ನ ಅವಧಿ ಅಂದಾಜು 2 ತಿಂಗಳು. ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ. ಬಿಎಫ್‌ಎಸ್‌ಐ ಇಂಡಿಯಾ ಸ್ಕಿಲ್ಸ್ ಬಿಎಫ್‌ಎಸ್‌ಐ ಕೋರ್ಸ್ 190 ಗಂಟೆಗಳಲ್ಲಿ ಮುಗಿಯುವ ಫಾಸ್ಟ್ ಟ್ರ್ಯಾಕ್ ಕೋರ್ಸ್ ಆಗಿದ್ದು ಇದಕ್ಕೆ ಉದ್ಯಮ ಮನ್ನಣೆ ನೀಡಿದೆ. ಇನ್ಷುರೆನ್ಸ್ ಘಟಕ ವಿದ್ಯಾರ್ಥಿಗಳಿಗೆ ವಿಮೆ ಉದ್ಯಮ ಹಾಗೂ ಯೋಜನೆಗಳ ಬಗ್ಗೆ ವಿಸ್ತೃತ ಮಾಹಿತಿ ಒದಗಿಸುತ್ತದೆ. ಸಂಬಂಧ ಸುಧಾರಣೆ ಘಟಕ ಅಭಿವೃದ್ಧಿ, ಉತ್ಪನ್ನಗಳ ಮಾರಾಟ ಹಾಗೂ ಗ್ರಾಹಕ ಸೇವಾ ಕೌಶಲಗಳನ್ನು ಕಲಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ಕೋರ್ಸ್‌ನ ಅಂದಾಜು ಅವಧಿ 3 ತಿಂಗಳು. ವಿದ್ಯಾರ್ಹತೆ: 12ನೇ ತರಗತಿ ಪಾಸಾಗಿರಬೇಕು/ ಪದವಿ. ಹೆಚ್ಚಿನ ಮಾಹಿತಿಗೆ ಉಚಿತ ಕರೆ ಸಂಖ್ಯೆ 1800 2666 111 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.