ಕ್ರೀಡಾ ಕ್ವಿಜ್‌ 1) 1896ರ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಿದ್ದ ಕುಸ್ತಿ ಸ್ಪರ್ಧೆಯ ಗ್ರೀಕೊ ರೋಮನ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಪೈಲ್ವಾನ ಯಾರು? 2) ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿರುವ ಸಾಕ್ಷಿ ಮಲಿಕ್‌ ಯಾವ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ? 3) ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಯಲ್ಲಿ ಮೊದಲ ಪದಕ ಗೆದ್ದ ಹೆಗ್ಗಳಿಕೆ ಹೊಂದಿರುವ ಕೆ.ಡಿ. ಜಾಧವ್ ಅವರ ಹೆಸರಿನಲ್ಲಿ ಕ್ರೀಡಾಂಗಣವನ್ನು ಎಲ್ಲಿ ನಿರ್ಮಿಸಲಾಗಿದೆ? 4) ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಯಾರು? 5) ಗೀತಾ ಪೋಗಟ್‌ ಸಹೋದರಿ ಕೂಡ ಕುಸ್ತಿಪಟು. ಅವರು ಯಾರು? 6) ಸುಶೀಲ್‌ ಕುಮಾರ್ ಒಲಿಂಪಿಕ್ಸ್‌ನಲ್ಲಿ ಎರಡು ಸಲ ಪದಕಗಳನ್ನು ಜಯಿಸಿದ್ದಾರೆ. ಅದು ಯಾವ ವರ್ಷ? 7) ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಒಟ್ಟು ಹೆಚ್ಚು ಪದಕಗಳನ್ನು ಜಯಿಸಿದ ದಾಖಲೆ ಹೊಂದಿರುವ ದೇಶ ಯಾವುದು? 8) ಹರಿಯಾಣದ ಕುಸ್ತಿಪಟು ಹರದೀಪ್‌ ಸಿಂಗ್ ಒಂದೇ ವರ್ಷದಲ್ಲಿ ಎರಡು ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕಗಳನ್ನು ಜಯಿಸಿದ್ದರು. ಅದು ಯಾವ ವರ್ಷ? 9) ಈ ವರ್ಷ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ 57 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸಿದ್ದ ಭಾರತದ ಕುಸ್ತಿ ಪಟು ಯಾರು? 10) ವಿನೇಶ್ ಪೋಗಟ್‌ ಅವರು ಯಾರ ಬಳಿ ತರಬೇತಿ ಪಡೆಯುತ್ತಿದ್ದಾರೆ? ಉತ್ತರಗಳು: 1) ಜರ್ಮನಿಯ ಕಾರ್ಲ್‌ ಚಹಮನ್‌ 2) 58 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ 3) ನವದೆಹಲಿ 4) ಗೀತಾ ಪೋಗಟ್‌ 5) ಬಬಿತಾ ಕುಮಾರಿ 6) 2008 ಹಾಗೂ 2012 7) ರಷ್ಯಾ 8) 2013 9) ಸಂದೀಪ್‌ ತೋಮಾರ್‌ 10) ಒ.ಪಿ. ಯಾದವ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.