ಕ್ಯಾಂಪಸ್ ಬೇಕರಿ ತರಬೇತಿ ಆಹಾರೋದ್ಯಮದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿರುವ ಬೇಕರಿ ಪದಾರ್ಥಗಳ ತಯಾರಿಕೆ ಕುರಿತ ತರಬೇತಿಗೆ ಈಗ ಎಲ್ಲಿಲ್ಲದ ಮನ್ನಣೆ. ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ ಹಾಗೂ ಆಸಕ್ತ ಪುರುಷರಿಗೆ ಬೇಕರಿ ಪದಾರ್ಥಗಳ ತಯಾರಿಕೆಯ ಬಗ್ಗೆ ತರಬೇತಿ ನೀಡುತ್ತಿದೆ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಬೇಕಿಂಗ್ ಆಂಡ್ ಕೇಕ್ ಆರ್ಟ್ ಸಂಸ್ಥೆ. ಕೋರ್ಸ್‌ನ ಅವಧಿ ಮೂರು ದಿನಗಳಿಂದ ಹಿಡಿದು 14 ವಾರಗಳವರೆಗೆ. ಗೃಹೋಪಯೋಗಕ್ಕೆ, ಉದ್ಯಮ ಸ್ಥಾಪನೆಗೆ ಅಥವಾ ಬೇಕರಿ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ಪಡೆಯುವುದಕ್ಕೆ ಹೀಗೆ ವಿವಿಧ ಉದ್ದೇಶಗಳಿಗೆ ಅನುಗುಣವಾಗಿ ಪ್ರತ್ಯೇಕ ತರಬೇತಿ ನೀಡಲಾಗುವುದು. ಕೋರ್ಸ್‌ನ ಅವಧಿಗೆ ಅನುಗುಣವಾಗಿ ಶುಲ್ಕ ಪಡೆಯಲಾಗುವುದು (2500 ರೂಪಾಯಿಯಿಂದ ಹಿಡಿದು 60 ಸಾವಿರ ರೂಪಾಯಿವರೆಗೆ) ಪದಾರ್ಥ ತಯಾರಿಕೆಗೆ ಬೇಕಾಗುವ ವಸ್ತುಗಳನ್ನು ಸಂಸ್ಥೆಯೇ ನೀಡುತ್ತದೆ. ಮಾಹಿತಿಗೆ: ಇನ್‌ಸ್ಟಿಟ್ಯೂಟ್ ಆಫ್ ಬೇಕಿಂಗ್ ಆಂಡ್ ಕೇಕ್ ಆರ್ಟ್, ನಂ 46/3, ಮಿಷನ್ ರಸ್ತೆ, ಬೆಂಗಳೂರು. ದೂರವಾಣಿ-080 2211 6619. ವೆಬ್‌ಸೈಟ್ .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.