ಅಮರ್ ಚಿತ್ರ ಕಥಾ ವಿದ್ಯಾರ್ಥಿ ವೇತನ ಅಮರ್ ಚಿತ್ರ ಕಥಾ ಸರಣಿಯ ಸಂಸ್ಥಾಪಕ ಸಂಪಾದಕರಾದ ಅನಂತ ಪೈ ಅವರ ಸ್ಮರಣಾರ್ಥ ಪ್ರಸಕ್ತ ವರ್ಷದಿಂದ `ಅಮರ್ ಚಿತ್ರ ಕಥಾ ವಿದ್ಯಾರ್ಥಿವೇತನ~ವನ್ನು ಎಸಿಕೆ ಮೀಡಿಯಾ ಆರಂಭಿಸಿದೆ. ಅರ್ಜಿಗಳು ಆಗಸ್ಟ್ 7 ರವರೆಗೆ ದೇಶದ ಎ್ಲ್ಲಲಾ ಬಿಗ್ ಬಜಾರ್ ಸ್ಟೋರ್‌ಗಳಲ್ಲಿ ಉಚಿತವಾಗಿ ದೊರೆಯುತ್ತವೆ. ಜತೆಗೆ ಆನ್‌ಲೈನ್‌ನಲ್ಲೂ (../) ಅರ್ಜಿಗಳನ್ನು ಪಡೆಯಬಹುದು. ವಿಶೇಷವಾಗಿ ಈ ಕಾರ್ಯಕ್ರಮಕ್ಕೆಂದೇ ಸೃಷ್ಟಿಸಲಾಗಿರುವ ಎಸ್‌ಎಂಎಸ್ ವೇದಿಕೆಯ ಮೂಲಕವೂ ಹೆಸರು ನೋಂದಾಯಿಸಿಕೊಳ್ಳಬಹುದು ರಾಷ್ಟ್ರೀಯತೆ (ಭಾರತೀಯ) ಮತ್ತು ವಯಸ್ಸನ್ನು (10ರಿಂದ15 ವರ್ಷ) ಹೊರತುಪಡಿಸಿ ಈ ಯೋಜನೆಯಲ್ಲಿ ಭಾಗವಹಿಸಲು ಮಕ್ಕಳಿಗೆ ಯಾವುದೇ ರೀತಿಯ ನಿರ್ಬಂಧಗಳಿರುವುದಿಲ್ಲ. ವಿಜೇತರ ಹೆಸರನ್ನು ನವೆಂಬರ್ 14ರಂದು ಮಕ್ಕಳ ದಿನಾಚರಣೆಯ ದಿನ ನಡೆಯುವ ಗ್ರಾಂಡ್ ಫಿನಾಲೆ ಸ್ಪರ್ಧೆಯ ನಂತರ ಘೋಷಿಸಲಾಗುತ್ತದೆ. ರಾಷ್ಟ್ರೀಯ ವಿಜೇತ ವಿದ್ಯಾರ್ಥಿಯು 11 ಲಕ್ಷ ವಿದ್ಯಾರ್ಥಿವೇತನವನ್ನು ಗೆಲ್ಲಲಿದ್ದು, ಇದರೊಂದಿಗೆ 71 ಸಿಟಿ ವಿಜೇತರನ್ನೂ ಆಯ್ಕೆ ಮಾಡಲಾಗುತ್ತದೆ. ಇವರು ತಲಾ 25 ಸಾವಿರ ರೂಪಾಯಿ ವಿದ್ಯಾರ್ಥಿವೇತನ ಪಡೆಯಲು ಅರ್ಹರಾದರೆ, 140 ಮಂದಿ ಸಿಟಿ ರನ್ನರ್-ಅಪ್ ವಿಜೇತರು ತಲಾ 5 ಸಾವಿರ ರೂಪಾಯಿ ವಿದ್ಯಾರ್ಥಿವೇತನ ತಮ್ಮದಾಗಿಸಿಕೊಳ್ಳಲಿದ್ದಾರೆ. ಇದಕ್ಕೆ ಹೊರತಾಗಿ 50,000 ರೂಪಾಯಿ ಮೌಲ್ಯದ 7 ವಿಶೇಷ ಮೆಟ್ರೋ ವಿದ್ಯಾರ್ಥಿವೇತನಗಳನ್ನೂ ನೀಡಲಾಗುತ್ತಿದೆ. ಜತೆಗೆ ಎಸ್‌ಎಮ್‌ಎಸ್ ಮೂಲಕ ನೋಂದಣಿ ಮಾಡಿಕೊಂಡವರಲ್ಲಿ 10 ವಿಜೇತರು ತಲಾ 15,000 ರೂಪಾಯಿ ನಗದು ವಿದ್ಯಾರ್ಥಿವೇತನ ಪಡೆಯಲಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರತಿ ನಗರದ ಕನಿಷ್ಠ ಒಬ್ಬ ಮಗುವಾದರೂ ವಿದ್ಯಾರ್ಥಿವೇತನವನ್ನು ಪಡೆಯುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸೈಮಾ ಗಝಿಯಾನಿ - 098197 95289; ಮಹೇಶ್ ಅಮೃತ್‌ಕರ್ - 097687 48842. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.