ಉದ್ಯೋಗಾವಕಾಶ ಅಲ್ಲಲ್ಲಿ... ಲೈಫ್ ಇನ್ಸುರೆನ್ಸ್ ಕಾರ್ಪೊರೇಷನ್, ಸ್ಟಾಫ್ ಸೆಲೆಕ್ಷನ್ ಕಮಿಷನ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಕೇಂದ್ರೀಯ ನಾಗರಿಕ ಸೇವಾ ಆಯೋಗ, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್. ಲೈಫ್ ಇನ್ಸುರೆನ್ಸ್ ಕಾರ್ಪೊರೇಷನ್ ಲೈಫ್ ಇನ್ಸುರೆನ್ಸ್ ಕಾರ್ಪೊರೇಷನ್ (ಎಲ್‌ಐಸಿ)ನಲ್ಲಿ 1347 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-09-2011. ಹುದ್ದೆ ಹೆಸರು: ಡೈರೆಕ್ಟ್ ಸೇಲ್ಸ್ ಎಕ್ಸಿಕ್ಯೂಟೀವ್ ಒಟ್ಟು ಹುದ್ದೆ: 1347 (ಸೌಥ್ ಸೆಂಟ್ರಲ್ ಜೋನಲ್ ಆಫೀಸ್) ವಿದ್ಯಾರ್ಹತೆ: ಪದವಿ ಅಥವಾ ಮಾರ್ಕೆಟಿಂಗ್/ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ. ವಯೋಮಿತಿ: ಕನಿಷ್ಠ 21, ಗರಿಷ್ಠ 35. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಅರ್ಜಿ ಶುಲ್ಕ: ರೂ. 100/- ಹೆಚ್ಚಿನ ಮಾಹಿತಿಗೆ ಈ ವೆಬ್‌ಸೈಟ್ ಸಂಪರ್ಕಿಸಿ-.. ಸ್ಟಾಫ್ ಸೆಲೆಕ್ಷನ್ ಕಮಿಷನ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ನಲ್ಲಿ 73 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-09-2011. ಒಟ್ಟು ಹುದ್ದೆ: 73 ಆಯ್ಕೆ ವಿಧಾನ: ಸಂದರ್ಶನ ಅರ್ಜಿ ಶುಲ್ಕ: ರೂ. 50/- ವಿಳಾಸ: ರೀಜನಲ್ ಡೈರೆಕ್ಟರ್ (ಎನ್‌ಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್‌ಬ್ಲಾಕ್ ನಂ. 12, ಲೋಧಿ ರಸ್ತೆ, ಸಿಜಿಒ ಕಾಂಪ್ಲೆಕ್ಸ್, ನವದೆಹಲಿ-110504 ಹೆಚ್ಚಿನ ಮಾಹಿತಿಗೆ ಈ ವೆಬ್‌ಸೈಟ್ ಸಂಪರ್ಕಿಸಿ-.. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 75 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-09-2011. ಹುದ್ದೆ ಹೆಸರು: ಆಫೀಸರ್ ಇನ್ ಗ್ರೇಡ್ `ಬಿ~ ಒಟ್ಟು ಹುದ್ದೆ: 75 ವೇತನ ಶ್ರೇಣಿ: ರೂ.21000-36400/- ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ. ವಯೋಮಿತಿ: ಕನಿಷ್ಠ 21, ಗರಿಷ್ಠ 30. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 100/- ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಆರ್ಡಿನರಿ ಪೋಸ್ಟ್‌ನಲ್ಲಿ 03-10-2011ರೊಳಗೆ ಕಳುಹಿಸಬೇಕು. ವಿಳಾಸ: ಜನರಲ್ ಮ್ಯಾನೇಜರ್, ಆರ್‌ಬಿಐ ಸರ್ವಿಸಸ್ ಬೋರ್ಡ್, ಪೋಸ್ಟ್ ಬ್ಯಾಂಕ್ ನಂ. 4618, ಮುಂಬೈ ಸೆಂಟ್ರಲ್ ಪೋಸ್ಟ್ ಆಫೀಸ್, ಮುಂಬೈ-400008 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-://.../ ಅಥವಾ ://... ಕೇಂದ್ರೀಯ ನಾಗರಿಕ ಸೇವಾ ಆಯೋಗ ಕೇಂದ್ರೀಯ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ)ದಲ್ಲಿ 11 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-09-2011. ಲಿಖಿತ ಪರೀಕ್ಷೆ: 27-11-2011. ಹುದ್ದೆ ಹೆಸರು: ಡೆಪ್ಯುಟಿ ಲೀಗಲ್ ಅಡ್ವೈಸರ್ ಒಟ್ಟು ಹುದ್ದೆ: 11 ವೇತನ ಶ್ರೇಣಿ: ರೂ. 15600-39100/- ವಿದ್ಯಾರ್ಹತೆ: ಕಾನೂನು ಪದವಿ ಹಾಗೂ 10 ವರ್ಷಗಳ ಅನುಭವ ವಯೋಮಿತಿ: 50 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ವಿಳಾಸ: ಜಾಯಿಂಟ್ ಸೆಕ್ರೇಟರಿ (ರಿಕ್ರೂಟ್‌ಮೆಂಟ್), ಕೇಂದ್ರೀಯ ನಾಗರಿಕ ಸೇವಾ ಆಯೋಗ, ಧೋಲ್‌ಪುರ ಹೌಸ್, ಶಹಜಹಾನ್ ರಸ್ತೆ, ನವದೆಹಲಿ-110069 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- ://.. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)ನಲ್ಲಿ 180 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-09-2011. ಲಿಖಿತ ಪರೀಕ್ಷೆ: 06-11-2011. ಹುದ್ದೆ ಹೆಸರು: ಸ್ಕಿಲ್ಡ್ ಆರ್ಟಿಸಾನ್ಸ್ ಒಟ್ಟು ಹುದ್ದೆ: 180 ವೇತನ ಶ್ರೇಣಿ: ರೂ.11000/- (ಮೊದಲ ಒಂದು ವರ್ಷಕ್ಕೆ) ವಿದ್ಯಾರ್ಹತೆ: ಮೆಟ್ರಿಕ್/ಎಸ್‌ಎಸ್‌ಎಲ್‌ಸಿ ಹಾಗೂ ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹಾಗೂ ನ್ಯಾಷನಲ್ ಅಪ್ರೆಂಟಿಷಿಪ್ ಸರ್ಟಿಫಿಕೇಟ್ (ಶೇಕಡಾ 60 ಅಂಕಗಳೊಂದಿಗೆ). ವಯೋಮಿತಿ: 27 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ಅರ್ಜಿ ಶುಲ್ಕ: ರೂ. 125/- ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ಸ್ವೀಕೃತಿ ಪತ್ರವನ್ನು 01-10-2011ರೊಳಗೆ ಕಳುಹಿಸಬೇಕು. ವಿಳಾಸ: ಡಿಜಿಎಂ/ಎಚ್‌ಆರ್, ಬಿಎಚ್‌ಇಎಲ್, ರಾಣಿಪತ್-632406, ವೆಲ್ಲೋರ್ ಜಿಲ್ಲೆ, ತಮಿಳುನಾಡು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- ://... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.