ಉದ್ಯಮ ಕೇಂದ್ರಿತ ಎಂ.ಟೆಕ್ ಕೋರ್ಸ್ ಆರಂಭ ಬೆಂಗಳೂರಿನ ಆರ್‌ವಿ-ವಿಎಲ್‌ಎಸ್‌ಐ ಸಂಸ್ಥೆ, ಜೆಎಸ್‌ಎಸ್ ವಿದ್ಯಾಪೀಠ ಮತ್ತು ನವದೆಹಲಿಯ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ಸಹಯೋಗದಲ್ಲಿ ನೂತನ ಉದ್ಯಮ ಕೇಂದ್ರಿತ ಎಂ.ಟೆಕ್ ಕೋರ್ಸ್ ಆರಂಭಿಸಲಾಗಿದೆ. ಸಂಜೆ ವೇಳೆ ಈ ಕೋರ್ಸ್‌ನ ತರಗತಿಗಳು ನಡೆಯುವುದರಿಂದ ವೃತ್ತಿಪರ ಎಂಜಿನಿಯರುಗಳು, ಐಟಿ ಉದ್ಯೋಗಿಗಳು ಈ ಶಿಕ್ಷಣ ಪಡೆಯಬಹುದಾಗಿದೆ. ಅತ್ಯಾಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ಹೊಂದಿರುವ ಈ ಕೋರ್ಸ್‌ಗೆ ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಟೆಲಿಕಮ್ಯೂನಿಕೇಷನ್, ಐಟಿ, ಐಎಸ್‌ಇ ಮತ್ತು ಎಲೆಕ್ಟ್ರಿಕಲ್ ವಿಷಯಗಳನ್ನು ಅಧ್ಯಯನ ಮಾಡಿರುವ ಬಿಇ, ಬಿ.ಟೆಕ್, ಎಂ.ಎಸ್ಸಿ (ಸಿಎಸ್ಸಿ), ಎಂ.ಎಸ್ಸಿ (ಐಟಿ) ಪದವೀಧರರು ಪ್ರವೇಶ ಪಡೆಯಬಹುದಾಗಿದೆ. ಈ ಕೋರ್ಸ್ ಅಧ್ಯಯನ ಮಾಡುವವರಿಗೆ 400 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಸ್ಥಾಪಿಸಲಾದ ಪ್ರಯೋಗಾಲಯದಲ್ಲಿ ತರಬೇತಿ ಪಡೆಯುವ ಅವಕಾಶವಿದೆ. ಡೇಟಾ ಸೆಂಟರ್, ತಂತ್ರಜ್ಞಾನ ಕೇಂದ್ರಿತ ಪ್ರೊಸೆಸ್ ಡಿಸೈನ್ ಕಿಟ್, ಸ್ಟ್ಯಾಂಡರ್ಡ್ ಸೆಲ್ಸ್, ಮ್ಯಾಕ್ರೊ ಸೆಲ್ಸ್, ಫೀಲ್ಡ್ ಪ್ರೋಗ್ರಾಂ ಗೇಟ್ ಅರ‌್ರೆ, ಅಪ್ಲಿಕೇಷನ್ ಸ್ಪೆಸಿಫಿಕ್ ಇಂಟಿಗ್ರೆಟೆಡ್ ಸರ್ಕ್ಯೂಟ್ ಮತ್ತು ಫುಲ್ ಕಸ್ಟಂ ಮೆಥಡಾಲಜೀಸ್‌ನ ಸೌಲಭ್ಯ ವಿದ್ಯಾರ್ಥಿಗಳಿಗೆ ದೊರೆಯಲಿದೆ. ನವೆಂಬರ್ ಮೊದಲ ವಾರದಿಂದ ತರಗತಿಗಳು ಆರಂಭವಾಗಲಿವೆ. ಎರಡು ವರ್ಷಗಳ ಈ ಕೋರ್ಸ್‌ಗೆ ವಾರ್ಷಿಕ 1.5 ಲಕ್ಷ ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಮೊದಲ ಮತ್ತು ಎರಡನೇ ಸೆಮಿಸ್ಟರ್ ತರಗತಿಗಳನ್ನು ನಗರದ ಆರ್‌ವಿ-ವಿಎಲ್‌ಎಸ್‌ಐ ಸಂಸ್ಥೆಯಲ್ಲಿ ಮತ್ತು ಮೂರು ಹಾಗೂ ನಾಲ್ಕನೇ ಸೆಮಿಸ್ಟರ್ ತರಗತಿಗಳನ್ನು ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿಯಲ್ಲಿ ನಡೆಸಲಾಗುವುದು. ಹೆಚ್ಚಿನ ವಿವರಗಳಿಗೆ: ದೂ: +91 95387 15733, @-. , ://.-./ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.