ಯಂಗ್ ಬ್ಯಾಂಕರ್ಸ್ ಕೋರ್ಸ್ ಬ್ಯಾಂಕಿಂಗ್ ವೃತ್ತಿಗೆ ಯುವ ಪದವೀಧರರನ್ನು ಆಕರ್ಷಿಸಲು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವೀಸಸ್ (ಎಂಎಜಿಇ) ಸಹಯೋಗದೊಂದಿಗೆ `ಯಂಗ್ ಬ್ಯಾಂಕರ್ಸ್~ ಎಂಬ ತರಬೇತಿಯನ್ನು ಘೋಷಿಸಲಾಗಿದೆ. ಯಂಗ್ ಬ್ಯಾಂಕರ್ಸ್ ಕಾರ್ಯಕ್ರಮ ಒಂದು ವರ್ಷದ ಪೂರ್ಣಾವಧಿಯ ರೆಸಿಡೆನ್ಷಿಯಲ್ ಪ್ರೋಗ್ರಾಂ ಆಗಿದ್ದು, ಮಣಿಪಾಲ್ ವಿಶ್ವವಿದ್ಯಾಲಯದಿಂದ ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಸಲಾಗುವುದು. ಬ್ಯಾಂಕಿಂಗ್, ಬ್ಯಾಂಕಿಂಗ್ ಶಿಷ್ಟಾಚಾರ, ಸಂವಹನ ಕೌಶಲ ಮತ್ತು ಇತರ ನೈಪುಣ್ಯತೆಯ ಜ್ಞಾನವನ್ನು ಈ ಕೋರ್ಸ್ ಒದಗಿಸುತ್ತದೆ. ಕಾರ್ಯಕ್ರಮ ಯಶಸ್ವಿಯಾಗಿ ಸಮಾಪ್ತಿಗೊಂಡ ನಂತರ ವಿದ್ಯಾರ್ಥಿಗಳು ಮಣಿಪಾಲ್ ವಿಶ್ವವಿದ್ಯಾಲಯದಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿಯನ್ನು ಪಡೆಯುತ್ತಾರೆ ಮತ್ತು ಆಕ್ಸಿಸ್ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ನೇಮಕಗೊಳ್ಳುತ್ತಾರೆ. ಈ ಕೋರ್ಸ್ 9 ತಿಂಗಳ ಅವಧಿಯನ್ನು ಒಳಗೊಂಡಿದೆ. ನಂತರ 3 ತಿಂಗಳುಗಳ ಇಂಟರ್ನ್‌ಶಿಪ್ ಕಾರ್ಯಕ್ರಮ ದೇಶಾದ್ಯಂತ ಯಾವುದೇ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ಇರುತ್ತದೆ. ಒಂದು ವರ್ಷಗಳ ಕೋರ್ಸ್ ಅವಧಿಯಲ್ಲಿ ಬ್ಯಾಂಕ್ ವಿದ್ಯಾರ್ಥಿಗಳಿಗೆ ಹಣಕಾಸು ನೆರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗೆ : +912224254604 / +912224255608 .@./ .@. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.