ಐರಿಜ್: ಉದ್ಯೋಗ ವಿನಿಮಯ ವಿದ್ಯಾರ್ಥಿಗಳ ಶಿಕ್ಷಣ, ಪ್ರತಿಭೆ, ಹಾಗೂ ಕೌಶಲಕ್ಕೆ ತಕ್ಕ ಉದ್ಯೋಗ ಸೃಷ್ಟಿಸುವ, ಸಂಸ್ಥೆಗಳಿಗೆ/ಉದ್ಯಮಗಳಿಗೆ ಸಮರ್ಥ ಜನಬಲ ಒದಗಿಸಿಕೊಡುವ ಹಾಗೂ ಶಿಕ್ಷಣ ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ `ಐರಿಜ್~ ಉದ್ಯೋಗ ವಿನಿಮಯ ಯೋಜನೆಯನ್ನು ರೂಪಿಸಿದೆ. ಸರ್ಕಾರದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ಮಣಿಪಾಲ ಸಂಸ್ಥೆಯ ಉದ್ಯೋಗ ವಿನಿಮಯ ಘಟಕ ಇದಾಗಿದ್ದು, ತಾಲೂಕು, ಜಿಲ್ಲೆ ಹಾಗೂ ರಾಜ್ಯದ ಹೊರಗಡೆ ಉದ್ಯೋಗ ಹುಡುಕುವುದಕ್ಕೆ ವಿದ್ಯಾರ್ಥಿಗಳಿಗೆ/ಅಭ್ಯರ್ಥಿಗಳಿಗೆ ಇದು ನೆರವಾಗುತ್ತದೆ. ಕೂಲಿ ಕಾರ್ಮಿಕರಿಂದ ಹಿಡಿದು ಸಾಫ್ಟ್‌ವೇರ್ ತಂತ್ರಜ್ಞರವರೆಗೆ ಎಲ್ಲಾ ರೀತಿಯ ಅಭ್ಯರ್ಥಿಗಳಿಗೆ ಸಹಾಯ ಮಾಡುವುದು ಹಾಗೂ ಅವರ ಸಾಮರ್ಥ್ಯ, ವಿವೇಚನೆ ಮತ್ತು ನಡವಳಿಕೆಗಳನ್ನು ಸಂಸ್ಕರಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದು ಮಣಿಪಾಲ ಶಿಕ್ಷಣ ಸಂಸ್ಥೆ, ಐರಿಜ್ ಯೋಜನೆಯ ಮುಖ್ಯಸ್ಥ ರಾಜೇಶ್ ಎ.ಆರ್. ವಿವರಿಸುತ್ತಾರೆ. ಐರಿಜ್ ಯೋಜನೆಯ ಕಾರ್ಯವ್ಯಾಪ್ತಿ * ಶಿಕ್ಷಣ ಸಂಸ್ಥೆಗಳಿಗೆ ಹೋಗಿ ವಿದ್ಯಾರ್ಥಿಗಳನ್ನು ಸಂದರ್ಶಿಸುವುದು ಮತ್ತು ಅಗತ್ಯ ಮಾಹಿತಿ ಒದಗಿಸಿ, ಕೌನ್ಸೆಲಿಂಗ್ ಮಾಡುವುದು * ಅಭ್ಯರ್ಥಿಗಳ ಸಾಮರ್ಥ್ಯ ಮತ್ತು ಆಕಾಂಕ್ಷೆಗಳನ್ನು ವೈಜ್ಞಾನಿಕವಾಗಿ ವಿವೇಚಿಸುವುದು * ಉದ್ಯೋಗ ಮಾರುಕಟ್ಟೆಯಲ್ಲಿ ಅವರಿಗೆ ತಕ್ಕ ಉದ್ಯೋಗವನ್ನು ವಿವಿಧ ಉದ್ಯಮಗಳಲ್ಲಿ ಪೂರೈಸುವುದು * ಒಂದು ವೇಳೆ ನಿರ್ದಿಷ್ಟ ಉದ್ಯೋಗಕ್ಕೆ ಅವರು ಹೊಂದಾಣಿಕೆ ಆಗದೇ ಇದ್ದಲ್ಲಿ, ಸಲಹೆ ಮತ್ತು ಕೌಶಲ ಅಭಿವೃದ್ಧಿ ಮೂಲಕ ಆ ಉದ್ಯೋಗಕ್ಕೆ ಬೇಕಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದಕ್ಕೆ ಸಹಾಯ ಮಾಡುವುದು * ಕಾರ್ಪೋರೇಟ್‌ಗಳಿಗೆ, ವಹಿವಾಟು ಸಂಸ್ಥೆಗಳಿಗೆ ತಾತ್ಕಾಲಿಕ ಹಾಗೂ ಕಾಯಂ ನೌಕರರನ್ನು ಪೂರೈಸುವುದು * ಸರ್ಕಾರ ಮತ್ತು ಬೃಹತ್ ಸಂಘಟನೆಗಳಿಗೆ ಉದ್ಯಮದ ಸೃಷ್ಟಿ ಮಾಧ್ಯಮವಾಗಿ ಕೆಲಸ ಮಾಡುವುದು * ಮೆರಿಟ್‌ಟ್ರಾಕ್ (ಭಾರತದ ಬಹುದೊಡ್ಡ ಅಸೆಸ್‌ಮೆಂಟ್ ಕಂಪನಿ) ಮೂಲಕ ಅಸೆಸ್‌ಮೆಂಟ್, ಇಂಡಿಯಾ ಸ್ಕಿಲ್ಸ್(ಮಣಿಪಾಲ ಎಜ್ಯುಕೇಷನ್ ಜೊತೆ ಸಿಟಿ ಮತ್ತು ಗಿಲ್ಡ್‌ಸ್) ಮತ್ತು ಇತರ ಮಣಿಪಾಲ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಮೌಖಿಕ ತರಬೇತಿ ಹಾಗೂ ಪ್ರಮಾಣಪತ್ರಗಳನ್ನು ಒದಗಿಸುವುದು * ತಾಂತ್ರಿಕ ಮಾಲೀಕತ್ವದ ಅಡಿಯಲ್ಲಿ ವೈಯಕ್ತಿಕ ಅಗತ್ಯ, ಜ್ಞಾನ ಮತ್ತು ಕೌಶಲಗಳನ್ನು ನೀಡುವುದು ಮುಂದಿನ ಐದು ವರ್ಷಗಳಲ್ಲಿ ದೇಶದಾದ್ಯಂತ ಸಾವಿರ ಉದ್ಯೋಗ ವಿನಿಮಯ ಕೇಂದ್ರಗಳೊಂದಿಗೆ 1.5 ದಶಕಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಐರಿಜ್ ಹೊಂದಿದೆ. ಮಾಹಿತಿಗೆ: ಇ-ಮೇಲ್- @. ವೆಬ್‌ಸೈಟ್- .. ಎಸ್‌ಎಂಎಸ್- ‘’ಎಂದು ಟೈಪ್ ಮಾಡಿ 56677 ಗೆ ಎಸ್‌ಎಂಎಸ್ ಮಾಡಿ; ದೂರವಾಣಿ * 0789100ಉಚಿತ ಕರೆ 1800-2-6666-* * ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.