ಉದ್ಯೋಗಾವಕಾಶ....ಅಲ್ಲಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ದಲ್ಲಿ 83 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-12-2011. ಹುದ್ದೆ ಹೆಸರು: ಅಸಿಸ್ಟೆಂಟ್ ಪ್ರೊಫೆಸರ್; ಒಟ್ಟು ಹುದ್ದೆ: 83 ವೇತನ ಶ್ರೇಣಿ: ರೂ.15600-39100/; ಅರ್ಜಿ ಶುಲ್ಕ: ರೂ. 500/- ವಿಳಾಸ: ದಿ ಸೆಕ್ಷನ್ ಆಫೀಸರ್, ರಿಕ್ರೂಟ್‌ಮೆಂಟ್ ಸೆಲ್, ರೂಮ್ ನಂ. 131, ಅಡ್ಮಿನಿಸ್ಟ್ರೇಟಿವ್ ಬ್ಲಾಕ್, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ನವದೆಹಲಿ-110067 ಹೆಚ್ಚಿನ ಮಾಹಿತಿಗೆ ... ವೆಬ್‌ಸೈಟ್ ಸಂಪರ್ಕಿಸಿ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐಐಸಿಟಿ)ಯಲ್ಲಿ 24 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09-01-2012. ಹುದ್ದೆ ಹೆಸರು: ಟೆಕ್ನಿಷಿಯನ್ (1); ಒಟ್ಟು ಹುದ್ದೆ: 24 ವೇತನ ಶ್ರೇಣಿ: ರೂ.5200-20200/- ವಯೋಮಿತಿ: 28 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ/ಟ್ರೇಡ್ ಪರೀಕ್ಷೆ ಹಾಗೂ ಸಂದರ್ಶನ ವಿಳಾಸ: ಸೆಕ್ಷನ್ ಆಫೀಸರ್ (ರಿಕ್ರೂಟ್‌ಮೆಂಟ್), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಟರ್ನಾಕ, ಉಪ್ಪಳ ರಸ್ತೆ, ಹೈದರಾಬಾದ್-500607 ಹೆಚ್ಚಿನ ಮಾಹಿತಿಗೆ .. ವೆಬ್‌ಸೈಟ್ ಸಂಪರ್ಕಿಸಿ. ವಿಜಯಾ ಬ್ಯಾಂಕ್ ವಿಜಯಾ ಬ್ಯಾಂಕ್‌ನಲ್ಲಿ 621 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-12-2011. ಹುದ್ದೆ ಹೆಸರು: 1) ಸೀನಿಯರ್ ಮ್ಯಾನೇಜರ್-ಜನರಲ್ ಬ್ಯಾಂಕಿಂಗ್ ಒಟ್ಟು ಹುದ್ದೆ: 276; ವೇತನ ಶ್ರೇಣಿ: ರೂ.25700-31500/- ವಯೋಮಿತಿ: 40 ವರ್ಷ ದಾಟಿರಬಾರದು. ಹುದ್ದೆ ಹೆಸರು: 2) ಮ್ಯಾನೇಜರ್-ಜನರಲ್ ಬ್ಯಾಂಕಿಂಗ್ ಒಟ್ಟು ಹುದ್ದೆ: 345:ವೇತನ ಶ್ರೇಣಿ: ರೂ.19400-28100/- ವಯೋಮಿತಿ: 35 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿ. ಸಿಎಐಐಬಿ ಅಥವಾ ಡಿಪ್ಲೊಮಾ ಇನ್ ರಿಸ್ಕ್ ಮ್ಯಾನೇಜ್‌ಮೆಂಟ್/ಟ್ರೆಸರಿ ಮ್ಯಾನೇಜ್‌ಮೆಂಟ್/ಇಂಟರ್‌ನ್ಯಾಷನಲ್ ಬ್ಯಾಂಕಿಂಗ್. ಅರ್ಜಿ ಶುಲ್ಕ: ರೂ. 300/-; ಆಯ್ಕೆ ವಿಧಾನ: ಸಂದರ್ಶನ * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್ ಮೂಲಕ ಕಳುಹಿಸಲು ಕೊನೆಯ ದಿನಾಂಕ: 21-12-2011 ವಿಳಾಸ: ವಿಜಯಾ ಬ್ಯಾಂಕ್ ರಿಕ್ರೂಟ್‌ಮೆಂಟ್ ಪ್ರೊಜೆಕ್ಟ್-2011-12 (ಸ್ಪೆಷಲ್/ಜನರಲಿಸ್ಟ್ ಆಫೀಸರ್ ಇನ್ ಎಂಎಂಜಿ-ಎಸ್-11 ಟು ಎಸ್‌ಎಂಜಿ-ಎಸ್- 4 ಪೋಸ್ಟ್ ಬಾಕ್ಸ್ ನಂ. 9724, ಬೋರಿವಾಲಿ-ಈಸ್ಟ್, ಮುಂಬೈ-400066 ಮಾಹಿತಿಗೆ ://. ವೆಬ್‌ಸೈಟ್ ಸಂಪರ್ಕಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.