ಮನಶ್ಶಾಸ್ತ್ರ ಕೋರ್ಸ್ ಗುಲ್ಬರ್ಗದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮನಶ್ಶಾಸ್ತ್ರ ವಿಭಾಗವು ಕೌನ್ಸೆಲಿಂಗ್‌ಗೆ (ಆಪ್ತ ಸಮಾಲೋಚನೆ) ಸಂಬಂಧಿಸಿದಂತೆ ನೂತನ ಕೋರ್ಸ್‌ಗಳನ್ನು ಪರಿಚಯಿಸಿದೆ. ಮನಶ್ಶಾಸ್ತ್ರದಲ್ಲಿ ಬಿಎಸ್ಸಿ, ಎಂಎಸ್ಸಿ ಅಥವಾ ಶೈಕ್ಷಣಿಕ ಸಲಹಾ ಮನಶ್ಶಾಸ್ತ್ರದಲ್ಲಿ ಡಿಪ್ಲೊಮಾ ಮಾಡಿ ವೃತ್ತಿಪರ ಮಾರ್ಗದರ್ಶಕರಾಗಬಹುದು. ಮಕ್ಕಳಿಂದ ಹಿಡಿದು ವಿದ್ಯಾರ್ಥಿಗಳು, ಉದ್ಯೋಗಸ್ಥರು, ವ್ಯಾಪಾರಿಗಳು, ವಯೋವೃದ್ಧರು, ಗೃಹಿಣಿಯರು ಹೀಗೆ ಎಲ್ಲರಿಗೂ ಅವರವರ ಸಮಸ್ಯೆ- ಸವಾಲುಗಳನ್ನು ಎದುರಿಸಲು ವೃತ್ತಿಪರ ಮಾರ್ಗದರ್ಶಕರ ಅವಶ್ಯಕತೆ ಎದ್ದು ಕಾಣುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಗುಲ್ಬರ್ಗದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮನಶ್ಶಾಸ್ತ್ರ ವಿಭಾಗವು ಕೌನ್ಸೆಲಿಂಗ್‌ಗೆ ಸಂಬಂಧಿಸಿದಂತೆ ನೂತನ ಕೋರ್ಸ್‌ಗಳನ್ನು ಪರಿಚಯಿಸಿದೆ. ಪದವಿ, ಸ್ನಾತಕೋತ್ತರ ಮನಶ್ಶಾಸ್ತ್ರದಲ್ಲಿ ಬಿಎಸ್ಸಿ (ಆನರ್ಸ್) ಮಾಡಬಯಸುವ ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲಿ (ವಿಜ್ಞಾನ, ವಾಣಿಜ್ಯ, ಕಲಾ ಇತ್ಯಾದಿ) ಶೇಕಡಾ 50 ಅಂಕಗಳೊಂದಿಗೆ ಪಿಯುಸಿ ಉತ್ತೀರ್ಣರಾಗಿರಬೇಕು. ಇದು ಮೂರು ವರ್ಷದ ಕೋರ್ಸ್. ನಂತರ ಸರ್ಕಾರ ಅಥವಾ ಸರ್ಕಾರೇತರ ಸಂಘ-ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಬಹದು. ಬಿಎ, ಬಿಕಾಂ, ಬಿಎಸ್ಸಿ ಅಥವಾ ಇತರ ಪದವಿ ವಿದ್ಯಾರ್ಥಿಗಳು ಕೂಡ ಮನಶ್ಶಾಸ್ತ್ರದಲ್ಲಿ ಎಂಎಸ್‌ಸಿ ಮಾಡಬಹುದು ಎನ್ನುವುದು ವಿಶೇಷ. ಡಿಪ್ಲೊಮಾ: ಶೈಕ್ಷಣಿಕ ಸಲಹಾ ಮನಶ್ಶಾಸ್ತ್ರದಲ್ಲಿ 20 ವಾರಗಳ ಡಿಪ್ಲೊಮಾ ಕೋರ್ಸ್ ಕೂಡ ಇದೆ. ಬಿಇಡಿ ಮಾಡಿದ ಶಿಕ್ಷಕರು, ಮನಶ್ಶಾಸ್ತ್ರ ಅಥವಾ ಎಂಎಸ್‌ಡಬ್ಲೂ ಪದವಿ ಪಡೆದವರು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಆಸ್ಪತ್ರೆ, ಶಾಲಾ-ಕಾಲೇಜು, ಐಟಿ ಉದ್ಯಮ, ಎನ್‌ಜಿಒ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ತರಬೇತುದಾರರಾಗಿ, ಮನಶ್ಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸಬಹುದು. ಈ ತರಬೇತಿಯಲ್ಲಿ ಕ್ಲಿನಿಕಲ್ ಮತ್ತು ಕೌನ್ಸೆಲಿಂಗ್ ಅಥವಾ ಸಂಘಟನಾತ್ಮಕ ಕೌಶಲ, ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ವೃತ್ತಿ ಜೀವನ ಮತ್ತು ಶೈಕ್ಷಣಿಕ ಮನಶ್ಶಾಸ್ತ್ರವನ್ನು ಅಧ್ಯಯನ ಮಾಡಬಹುದು. ದಕ್ಷಿಣ ಭಾರತದಲ್ಲಿಯೇ ಈ ರೀತಿಯ ವಿಶೇಷ ತರಬೇತಿ ನೀಡುತ್ತಿರುವ ಏಕೈಕ ವಿಶ್ವವಿದ್ಯಾಲಯ ಇದು. ಮಾಹಿತಿಗೆ: ಡಾ. ರೋಮೆಟ್ ಜಾನ್, ಸಂಯೋಜಕ, ಮನಶ್ಶಾಸ್ತ್ರ ವಿಭಾಗ, ಕೇಂದ್ರೀಯ ವಿವಿ ಗುಲ್ಬರ್ಗ. ಮಾಹಿತಿಗೆ: 81478 38279. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.