ಉದ್ಯೋಗವಕಾಶ ಅಲ್ಲಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನಲ್ಲಿ (ಬಿಎಚ್‌ಇಎಲ್) 750 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-4-2012. ಲಿಖಿತ ಪರೀಕ್ಷೆ: 20-5-2012 ಹುದ್ದೆ ಹೆಸರು: ಆರ್ಟಿಸನ್ಸ್; ಒಟ್ಟು ಹುದ್ದೆ: 750 ವೇತನ ಶ್ರೇಣಿ: ರೂ. 11700-23000. ವಯೋಮಿತಿ: 27 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 125. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ರಸೀದಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 30-4-2012 ವಿಳಾಸ: ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಚ್‌ಆರ್), ಎಚ್‌ಆರ್‌ಎಂ ಡಿಪಾರ್ಟ್‌ಮೆಂಟ್, ಬಿಲ್ಡಿಂಗ್ 24, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ತಿರುಚಿರಾಪಳ್ಳಿ-620014 ಹೆಚ್ಚಿನ ಮಾಹಿತಿಗೆ ://.. ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್‌ಎಫ್) ನಲ್ಲಿ 240 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6-5-2012. ಹುದ್ದೆ ಹೆಸರು: 1) ಇನ್‌ಸ್ಪೆಕ್ಟರ್ (ಆರ್ಕಿಟೆಕ್ಟ್) ಒಟ್ಟು ಹುದ್ದೆ: 7 ವಿದ್ಯಾರ್ಹತೆ: ಆರ್ಕಿಟೆಕ್ಟರ್‌ನಲ್ಲಿ ಪದವಿ ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 25 ವರ್ಷ. ಹುದ್ದೆ ಹೆಸರು: 2) ಸಬ್ ಇನ್‌ಸ್ಪೆಕ್ಟರ್ (ಸಿವಿಲ್) ಒಟ್ಟು ಹುದ್ದೆ: 183 ಹುದ್ದೆ ಹೆಸರು: 3) ಸಬ್ ಇನ್‌ಸ್ಪೆಕ್ಟರ್ (ಎಲೆಕ್ಟ್ರಿಕಲ್) ಒಟ್ಟು ಹುದ್ದೆ: 50 ವೇತನ ಶ್ರೇಣಿ: ರೂ. 9300-34800. ವಿದ್ಯಾರ್ಹತೆ: ಸಿವಿಲ್ ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷದ ಡಿಪ್ಲೊಮಾ. ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 50. ವಿಳಾಸ: ದಿ ಕಮಾಂಡೆಂಟ್ (ರಿಕ್ರೂಟ್‌ಮೆಂಟ್), ಹೆಡ್‌ಕ್ವಾಟ್ರರ್ಸ್ ಡಿಜಿ, ಬಿಎಸ್‌ಎಫ್, ಬ್ಲಾಕ್-10, ಸಿಜಿಒ ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ-110003 ಹೆಚ್ಚಿನ ಮಾಹಿತಿಗೆ ... ಎನ್‌ಐಎಫ್‌ಟಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ (ಎನ್‌ಐಎಫ್‌ಟಿ) 164 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-4-2012. ಹುದ್ದೆ ಹೆಸರು: 1) ಅಸೋಸಿಯೇಟ್ ಪ್ರೊಫೆಸರ್; ಒಟ್ಟು ಹುದ್ದೆ: 67 ಹುದ್ದೆ ಹೆಸರು: 2) ಅಸಿಸ್ಟೆಂಟ್ ಪ್ರೊಫೆಸರ್; ಒಟ್ಟು ಹುದ್ದೆ: 97 ವೇತನ ಶ್ರೇಣಿ: ರೂ. 15600-39100. ವಯೋಮಿತಿ: 45 ವರ್ಷ ದಾಟಿರಬಾರದು. ಅರ್ಜಿ ಶುಲ್ಕ: ರೂ. 300 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ವಿಳಾಸ: ರಿಜಿಸ್ಟ್ರಾರ್ (ಎಸ್ಟಾಬ್ಲಿಷ್‌ಮೆಂಟ್), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಎನ್‌ಐಎಫ್‌ಟಿ ಕ್ಯಾಂಪಸ್, ಹಾಜ್ ಖಾಸ್, ಗುಲ್‌ಮೊಹರ್ ಪಾರ್ಕ್ ಬಳಿ, ನವದೆಹಲಿ-110016 ಹೆಚ್ಚಿನ ಮಾಹಿತಿಗೆ ... ನವೋದಯ ವಿದ್ಯಾಲಯ ಸಮಿತಿ ನವೋದಯ ವಿದ್ಯಾಲಯ ಸಮಿತಿಯಲ್ಲಿ (ಎನ್‌ವಿಎಸ್) 631 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-4-2012. ಹುದ್ದೆ ಹೆಸರು: 1) ಟ್ರೈನ್ಡ್ ಗ್ರ್ಯಾಜುಯೇಟ್ ಟೀಚರ್ (ಟಿಜಿಟಿ) ಒಟ್ಟು ಹುದ್ದೆ: 262 ಹುದ್ದೆ ಹೆಸರು: 2) ಪ್ರಾದೇಶಿಕ ಭಾಷಾ ಶಿಕ್ಷಕರು ಒಟ್ಟು ಹುದ್ದೆ: 369 ವೇತನ ಶ್ರೇಣಿ: ರೂ. 9300-34800. ವಯೋಮಿತಿ: 35 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 500. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ವಿಳಾಸ: ನವೋದಯ ವಿದ್ಯಾಲಯ ಸಮಿತಿ, ಪ್ರಾದೇಶಿಕ ಕಚೇರಿ, 1-1-10/3, ಸರ್ದಾರ್ ಪಟೇಲ್ ರಸ್ತೆ, ಎಂಸಿಎಚ್ ಈಜುಗೊಳ ಹಿಂಭಾಗ, ಸಿಕಂದರಾಬಾದ್-500003, ಆಂಧ್ರಪ್ರದೇಶ. ಹೆಚ್ಚಿನ ಮಾಹಿತಿಗೆ ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.