ಬ್ಲೂ ಟೈಗರ್‌ನ ಜೀವನ ಕೌಶಲ ನೌಕರಿಗೆ ಕರೆ ಬಂದಾಗ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ. ಭವಿಷ್ಯ ನಿರ್ಧಾರವಾಗುವುದು ಅಲ್ಲಿಯೇ. ಆದರೆ ಬಹುತೇಕ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಸರಿಯಾಗಿ ಎದುರಿಸುವ ಕಲೆಯೇ ಗೊತ್ತಿರುವುದಿಲ್ಲ. ಹೀಗಾಗಿ ಶೈಕ್ಷಣಿಕ ಅರ್ಹತೆ ಇದ್ದರೂ ಸೋಲುತ್ತಾರೆ. ಇಂಥವರಿಗಾಗಿಯೇ 6 ವಾರಗಳ `ಮಾರ್ಗದರ್ಶನ ಮತ್ತು ಜೀವನ ಕೌಶಲ ಕಾರ್ಯಕ್ರಮ~ ರೂಪಿಸಿದೆ ತರಬೇತಿ ಮತ್ತು ಸಲಹಾ ಸೇವೆಗಳನ್ನು ಒದಗಿಸುವ ಬ್ಲೂ ಟೈಗರ್. `ಫಾಸ್ಟ್ ಟ್ರಾಕ್- ಉದ್ಯೋಗ ಖಾತರಿ~ ಎಂಬ ಈ ಕಾರ್ಯಕ್ರಮ ಉದ್ಯೋಗಾಕಾಂಕ್ಷಿಗಳು ತಮ್ಮ ಇಷ್ಟದ ಉದ್ಯೋಗ ಪಡೆಯಲು ಬೇಕಾದ ಪೂರ್ವ ಸಿದ್ಧತೆ, ಸಂದರ್ಶನ ಎದುರಿಸುವುದು ಮುಂತಾದ ವಿಷಯದಲ್ಲಿ ತರಬೇತಿ ನೀಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ಯಶಸ್ವಿಯಾಗಲು ಬೇಕಿರುವ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಉದ್ಯಮದ ತಜ್ಞರು ಈ ತರಬೇತಿ ರೂಪಿಸಿದ್ದಾರೆ. ಇಲ್ಲಿ ಅಭ್ಯರ್ಥಿಗಳು ಸಂದರ್ಶನಗಳನ್ನು ಸಮರ್ಥವಾಗಿ ಎದುರಿಸುವ ಕಲೆ ಮಾತ್ರವಲ್ಲದೆ ವೃತ್ತಿ ಬದುಕಿನಲ್ಲೂ ಸಾಧನೆ ಮಾಡಲು ನೆರವಾಗುವ ಅಂಶಗಳನ್ನು ಹೇಳಿಕೊಡಲಾಗುತ್ತದೆ ಎನ್ನುತ್ತಾರೆ ಬ್ಲೂ ಟೈಗರ್‌ನ ಸಿಇಒ ಸಂಪತ್ ಅಯ್ಯಂಗಾರ್. `ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದೆ ಎಂಬುದು ನಮಗೆಲ್ಲಾ ಗೊತ್ತು. ಆದರೆ ಅದೊಂದೇ ಸಾಲದು. ಆದರೆ ಸೂಕ್ತ ವೃತ್ತಿ ಆಯ್ಕೆ ಮಾಡಲು ಸೂಕ್ತ ತರಬೇತಿಯೂ ಬೇಕು. ಕೆಲಸ ಸಿಕ್ಕ ಬಳಿಕ ವೃತ್ತಿ ಕೌಶಲವನ್ನೂ ಪ್ರದರ್ಶಿಸಿದರೆ ಜೀವನದಲ್ಲಿ ಮುಂದೆ ಬರಬಹುದು~ ಎಂದು ಅವರು ಹೇಳುತ್ತಾರೆ. ಎಂದರು. ಫಾಸ್ಟ್ ಟ್ರಾಕ್ ಉದ್ಯೋಗ ಖಾತರಿ ಮತ್ತು ವೃತ್ತಿ ಆಧಾರಿತ ಇತರ ತರಬೇತಿಗಳ ಬಗೆಗಿನ ವಿವರಗಳಿಗೆ .. ಅಥವಾ 92436 22152 ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.