ಕ್ಯಾಂಪಸ್ ಪ್ರಶಸ್ತಿಗೆ ಅರ್ಜಿ ಶಿಕ್ಷಣ ಕ್ಷೇತ್ರದಲ್ಲಿ ನಾವಿನ್ಯ ಮತ್ತು ಪರಿವರ್ತನೆ ತರುವ ಹೊಸ ಯೋಜನೆಗಳಿಗಾಗಿ 2012ನೇ ಸಾಲಿನ ಡಬ್ಲ್ಯುಐಎಸ್‌ಇ (ವೈಸ್) ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶ್ವದ ವಿವಿಧೆಡೆ ನವೀನ ಶೈಕ್ಷಣಿಕ ಯೋಜನೆಗಳನ್ನು ಗುರುತಿಸುವುದು ಇದರ ಉದ್ದೇಶ. ಸಮಾಜ ಮತ್ತು ಶಿಕ್ಷಣದಲ್ಲಿ ಪರಿವರ್ತನೆ ತರುವ ಎಲ್ಲಾ ಶೈಕ್ಷಣಿಕ ಉಪಕ್ರಮಗಳು ಪ್ರಶಸ್ತಿಗೆ ಅರ್ಹವಾಗಿರುತ್ತವೆ. ಆಯ್ಕೆಯಾದ ಆರು ಯೋಜನೆಗಳನ್ನು ಕತಾರ್‌ನ ಧೋಹಾದಲ್ಲಿ ನವೆಂಬರ್ 13 ರಿಂದ 15ರ ವರೆಗೆ ನಡೆಯಲಿರುವ 2012 ವೈಸ್ ಶೃಂಗಸಭೆಯಲ್ಲಿ ಪ್ರದರ್ಶಿಸಿ ತಲಾ 20 ಸಾವಿರ ಡಾಲರ್ (ಸುಮಾರು 10.8 ಲಕ್ಷ ರೂ) ಬಹುಮಾನ ನೀಡಲಾಗುವುದು. ಅರ್ಜಿ ಸಲ್ಲಿಸಲು ಮೇ 31 ಕಡೆಯ ದಿನ. ಮಾಹಿತಿಗೆ .-. ಜೈನ್ ವಿವಿ ಪ್ರತಿಭಾ ವೇತನ ಬೆಂಗಳೂರಿನ ಪ್ರತಿಷ್ಠಿತ ಜೈನ್ ಸಮೂಹ ವಿದ್ಯಾ ಸಂಸ್ಥೆ ಮತ್ತು ಜೈನ್ ವಿವಿ ಜತೆಗೂಡಿ ಈ ಶೈಕ್ಷಣಿಕ ವರ್ಷದಿಂದ `ಪ್ರತಿಭಾ ವಿದ್ಯಾರ್ಥಿ ವೇತನ~ ಯೋಜನೆ ಜಾರಿಗೆ ತಂದಿವೆ. ಶೈಕ್ಷಣಿಕ, ಕ್ರೀಡೆ, ಸಂಗೀತ ಮತ್ತು ನೃತ್ಯ, ಸಮುದಾಯ ಸೇವೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರು, ಪ್ರತಿಭಾವಂತ ವಿಕಲಾಂಗ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಯೋಜನೆಯ ಉದ್ದೇಶ. ಇದರಲ್ಲಿ ಆಯ್ಕೆಯಾದವರಿಗೆ ಶುಲ್ಕ ರಿಯಾಯ್ತಿ, ಸುಲಭ ಶೈಕ್ಷಣಿಕ ಯೋಜನೆ, ನಗದು ಪ್ರಶಸ್ತಿ, ಕ್ರೀಡಾ ಸೌಕರ್ಯಗಳ ಉಚಿತ ಉಪಯೋಗ, ಪ್ರಾಯೋಜಕತ್ವ ಬೆಂಬಲ ಮತ್ತು ಕಾಲೇಜನ್ನು ಪ್ರತಿನಿಧಿಸುವ ಅವಕಾಶ ದೊರೆಯಲಿದೆ. ಅರ್ಹತಾ ಮಾನದಂಡ ಮತ್ತು ಇತರ ವಿವರಗಳು .., .. ವೆಬ್‌ಸೈಟ್‌ನಲ್ಲಿ ಲಭ್ಯ. ಸ್ಪರ್ಧಾ ಪರೀಕ್ಷೆ ತರಬೇತಿ ಬೆಂಗಳೂರಿನ ಮೆರಿಟ್ ಅಕಾಡೆಮಿ (ಜ್ಞಾನಗಂಗೋತ್ರಿ) ಕೆಎಎಸ್ ಸ್ಪರ್ಧಾ ಪರೀಕ್ಷೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಮಾನವಶಾಸ್ತ್ರ ಐಚ್ಛಿಕ ವಿಷಯ ತೆಗೆದುಕೊಂಡ ಅಭ್ಯರ್ಥಿಗಳಿಗೆ ವಿಶೇಷ ತರಗತಿ ಆಯೋಜಿಸಿದೆ. ವಿಷಯ ತಜ್ಞ ಎಸ್. ಸುತಾರ್ ಇದನ್ನು ನಡೆಸಿಕೊಡುತ್ತಾರೆ. ಅಲ್ಲದೆ ಬಿಎಡ್, ಸಿಇಟಿ, ಬ್ಯಾಂಕ್ ಪರೀಕ್ಷಾರ್ಥಿಗಳಿಗೂ ಇಲ್ಲಿ ತರಬೇತಿ ನೀಡಲಾಗುವುದು. ಮಾಹಿತಿಗೆ 87488 00294. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.