ಹಣಕಾಸು ಮಾರುಕಟ್ಟೆ ಸ್ನಾತಕೋತ್ತರ ಕೋರ್ಸ್ ಹಣಕಾಸು ವಲಯದಲ್ಲಿ ಈ ದಶಕದ ಕೊನೆಯಲ್ಲಿ ಒಂದು ಕೋಟಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಅಂದಾಜು. ಇದಕ್ಕಾಗಿ ಪರಿಣಿತರನ್ನು ತಯಾರು ಮಾಡಲು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಸಹಯೋಗದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫೈನಾನ್ಷಿಯಲ್ ಮ್ಯೋನೇಜ್‌ಮೆಂಟ್ (ಎನ್‌ಐಎಫ್‌ಎಂ) ಈಗ ಒಂದು ವರ್ಷದ ಪೂರ್ಣಾವಧಿಯ ಹಣಕಾಸು ಮಾರುಕಟ್ಟೆ ಕೋರ್ಸ್ ಮತ್ತು ಒಂದು ವರ್ಷದ ಸ್ನಾತಕೋತ್ತರ ಹಣಕಾಸು ಮಾರುಕಟ್ಟೆ (ವಾರಾಂತ್ಯ) ಕೋರ್ಸ್ ಆರಂಭಿಸಿದೆ. ಈಗಾಗಲೆ ವೃತ್ತಿಯಲ್ಲಿ ಇರುವವರಿಗೆ ಕೌಶಲ ಹೆಚ್ಚಿಸಿಕೊಳ್ಳಲು ವಾರಾಂತ್ಯದ ಸ್ನಾತಕೋತ್ತರ ಶಿಕ್ಷಣ ಹೆಚ್ಚು ಸಹಕಾರಿ. ಈ ಎರಡೂ ತರಗತಿಗಳು ಥಿಯರಿ ಮತ್ತು ಪ್ರಾಯೋಗಿಕ ಪಾಠದ ತರಬೇತಿಯನ್ನು ಒಳಗೊಂಡಿವೆ. ಹೂಡಿಕೆ ಬ್ಯಾಂಕುಗಳು, ಸಂಶೋಧನಾ ಸಂಸ್ಥೆಗಳು, ಮ್ಯೂಚುವಲ್ ಫಂಡ್, ದಳ್ಳಾಳಿಗಳು ಮತ್ತು ಜ್ಞಾನ ಹೊರಗುತ್ತಿಗೆ (ಕೆಪಿಒ) ಕೇಂದ್ರಗಳಲ್ಲಿ ಉದ್ಯೋಗದ ಅವಕಾಶಗಳನ್ನು ತೆರೆಯುತ್ತವೆ. ಈ ಶಿಕ್ಷಣದಲ್ಲಿ `ವಿಶೇಷ ಮಾರುಕಟ್ಟೆ ಸಿಮ್ಯುಲೇಶನ್ ಸಾಫ್ಟ್‌ವೇರ್ ಬಳಸಲಾಗುತ್ತದೆ. ಇದು ಕೌಶಲ ಹೆಚ್ಚಿಸಲು ಮತ್ತು ಆರ್ಥಿಕ ಕ್ಷೇತ್ರದಲ್ಲಿ ಬೆಳೆಯಲು ಸಹಾಯ ಮಾಡಲಿದೆ~ ಎನ್ನುತ್ತಾರೆ ಎನ್‌ಎಸ್‌ಇ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಚೈತ್ರಾ ರಾಮಕೃಷ್ಣ. ಕೋರ್ಸ್‌ಗಳು ಜುಲೈನಲ್ಲಿ ಆರಂಭವಾಗಲಿದ್ದು, ಬೆಂಗಳೂರು ಸೇರಿ 12 ಕೇಂದ್ರಗಳಲ್ಲಿ ಆನ್‌ಲೈನ್ ಪ್ರವೇಶ ಪರೀಕ್ಷೆ ಬರೆಯಬಹುದು. ಮಾಹಿತಿಗೆ: ..., ://... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.